ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟಿನ ಮೇಲೆ ಮೂಷಿಕನ ಮುನಿಸು: ಇದು ನಡೆದಿದ್ದು ಬೆಂಗಳೂರಿನಲ್ಲಿ ಅಲ್ಲ!

|
Google Oneindia Kannada News

ಗುವಾಹಟಿ, ಜೂನ್ 19: ಇಲಿಗಳು ಎಟಿಎಂ ಪೆಟ್ಟಿಗೆಯೊಳಗೆ ನುಗ್ಗಿ ಅದರಲ್ಲಿದ್ದ ಎರಡು ಸಾವಿರ ಮತ್ತು ಐನೂರು ರೂಪಾಯಿ ಮುಖಬೆಲೆಯ ನೋಟುಗಳ ಮೇಲೆ ತಮ್ಮ ಪ್ರತಾಪ ತೋರಿದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಮನೆಯ ಕಪಾಟು, ಬೀರು ಹೀಗೆ ಕಂಡ ಸಂದಿಗಳ ಒಳಗೆಲ್ಲ ತೂರಿ, ಅದರ ಒಳಗಿರುವ ಪುಸ್ತಕ, ಕಾಗದ ಪತ್ರಗಳು, ಬಟ್ಟೆ ಮತ್ತಿತರ ವಸ್ತುಗಳ ಮೇಲೆ ತಮ್ಮ ಹಲ್ಲುಗಳ ಶಕ್ತಿ ಪ್ರದರ್ಶಿಸುವ ಇಲಿಗಳ ಹಾವಳಿ ಹೊಸತಲ್ಲ. ಆದರೆ, ಎಟಿಎಂನಲ್ಲಿ ಹಣವೇ ಸಿಗದ ಈ ದುರ್ಬರ ಸನ್ನಿವೇಶದಲ್ಲಿ ಇದ್ದ ಹಣವೂ ಹಾಳಾದರೆ ಗತಿಯೇನು?

ಎಟಿಎಂ ಕಾರ್ಡ್ ಬದಲಿ ವ್ಯಕ್ತಿ ಬಳಸುವಂತಿಲ್ಲ: ಕೋರ್ಟ್ ಸ್ಪಷ್ಟನೆಎಟಿಎಂ ಕಾರ್ಡ್ ಬದಲಿ ವ್ಯಕ್ತಿ ಬಳಸುವಂತಿಲ್ಲ: ಕೋರ್ಟ್ ಸ್ಪಷ್ಟನೆ

ಎಟಿಎಂ ಪೆಟ್ಟಿಗೆಯೊಳಗೆ ಹೇಗೋ ನುಗ್ಗಿದ್ದ ಇಲಿಗಳು ಅದರೊಳಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳನ್ನು ಪುಡಿಗಟ್ಟಿದ್ದವು. ಈ ಫೋಟೊ ಬೆಂಗಳೂರಿನ ಮತ್ತಿಕೆರೆಯಲ್ಲಿ ನಡೆದಿದ್ದು ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ಆದರೆ, ವಾಸ್ತವವಾಗಿ ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ ಅಲ್ಲ. ಈಶಾನ್ಯ ದಿಕ್ಕಿನ ರಾಜ್ಯ ಅಸ್ಸಾಂನಲ್ಲಿ.

ವರ್ಷದಲ್ಲಿ ದೇಶಾದ್ಯಂತ 2ಸಾವಿರ ಎಟಿಎಂಗೆ ಬೀಗ!ವರ್ಷದಲ್ಲಿ ದೇಶಾದ್ಯಂತ 2ಸಾವಿರ ಎಟಿಎಂಗೆ ಬೀಗ!

ಅಸ್ಸಾಂನ ಟಿನ್ಸುಕಿಯಾ ಲೈಪುಲಿ ಪ್ರದೇಶದಲ್ಲಿ ಬ್ಯಾಂಕ್ ಒಂದರ ಆಟೊಮ್ಯಾಟಿಕ್ ಟೆಲ್ಲರ್ ಮೆಷಿನ್ (ಎಟಿಎಂ) ಒಳಗೆ ನುಗ್ಗಿದ ಮೂಷಿಕ ಪಡೆ, ಅದರೊಳಗಿದ್ದ 12.38 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ಚೂರುಚೂರು ಮಾಡಿ ಸಾಹಸ ಮೆರೆದಿವೆ!

ರಿಪೇರಿ ಮಾಡಲು 20 ದಿನ

ರಿಪೇರಿ ಮಾಡಲು 20 ದಿನ

ಎಟಿಎಂ ನಿರ್ವಹಣೆ ಮಾಡುತ್ತಿದ್ದ ಗುವಾಹಟಿ ಮೂಲದ ಖಾಸಗಿ ಭದ್ರತಾ ಸಂಸ್ಥೆ ಎಫ್‌ಐಎಸ್ ಗ್ಲೋಬಲ್ ಬಿಜಿನೆಸ್ ಸಲ್ಯೂಷನ್ಸ್ ಮೇ 19ರಂದು ಈ ಯಂತ್ರದೊಳಗೆ 29.48 ಲಕ್ಷವನ್ನು ಹಾಕಿತ್ತು.

ಆದರೆ, ಮರುದಿನವೇ (ಮೇ 20) ಈ ಯಂತ್ರ ಹಾಳಾಗಿತ್ತು. ಸರಿಯಾಗಿ ಕೆಲಸ ಮಾಡದ ಕಾರಣ ಗ್ರಾಹಕರಿಗೆ ಈ ಯಂತ್ರದಿಂದ ದುಡ್ಡು ತೆಗೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಕೆಟ್ಟು ಹೋಗಿದ್ದ ಯಂತ್ರವನ್ನು ದುರಸ್ತಿಪಡಿಸಲು ಭದ್ರತಾ ಸಂಸ್ಥೆ ಅಲ್ಲಿಗೆ ಬಂದಿದ್ದು ಜೂನ್ 11ಕ್ಕೆ. ಯಂತ್ರ ಹಾಳಾಗಿ 20 ದಿನಗಳವರೆಗೂ ಅತ್ತ ಅವರು ತಲೆಹಾಕಿರಲಿಲ್ಲ.

12.38 ಲಕ್ಷ ರೂಪಾಯಿ ಚೂರು ಚೂರು

12.38 ಲಕ್ಷ ರೂಪಾಯಿ ಚೂರು ಚೂರು

ರಿಪೇರಿಗಾಗಿ ಯಂತ್ರವನ್ನು ಕಳಚಿದಾಗಲೇ ಇಲ್ಲಿಗಳು ನಡೆಸಿದ ದಾಂಧಲೆ ಬೆಳಕಿಗೆ ಬಂದಿದ್ದು. 500 ಮತ್ತು 2000 ಮುಖಬೆಲೆಯ 12.38 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಛಿದ್ರಗೊಂಡಿದ್ದವು.

ದಾಳಿ ನಡೆಸಿ ಆಯಾಸಗೊಂಡೋ ಅಥವಾ ಬ್ಯಾಂಕಿನ ಮೇಲೆ ಕನಿಕರ ಉಂಟಾಗಿಯೋ ಇಲಿಗಳು 17 ಲಕ್ಷ ರೂಪಾಯಿ ಹಣವನ್ನು ಉಳಿಸಿಹೋಗಿದ್ದವು.

ಸಂಪೂರ್ಣವಾಗಿ ಬಂದ್ ಮಾಡಲಾಗಿರುವ, ಚಾಲಾಕಿ ಕಳ್ಳರೂ ಅಷ್ಟು ಸುಲಭವಾಗಿ ಕಳಚಲು ಸಾಧ್ಯವಾಗದಷ್ಟು ಬಂದೋಬಸ್ತ್ ವ್ಯವಸ್ಥೆ ಹೊಂದಿರುವ ಈ ಯಂತ್ರದೊಳಗೆ ಇಲಿಗಳು ಹೇಗೆ ಪ್ರವೇಶಿಸಿದ್ದವು ಎಂಬುದು ಅಚ್ಚರಿ ಮೂಡಿಸಿವೆ.

ಟಿನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಸ್ಥಳೀಯರಲ್ಲಿ ಅನುಮಾನ

ಸ್ಥಳೀಯರಲ್ಲಿ ಅನುಮಾನ

ಯಂತ್ರ ಕೆಟ್ಟು ಸುಮಾರು 20 ದಿನಗಳ ಬಳಿಕ ಮೆಕ್ಯಾನಿಕ್‌ಗಳು ಬಂದಿದ್ದಾರೆ. ಹಣವನ್ನು ತುಂಬಿರುವ ಯಂತ್ರವನ್ನು ಸರಿಪಡಿಸಲು ಇಷ್ಟು ಸಮಯ ಏಕೆ ಬೇಕಾಯಿತು. ಇದು ಅನುಮಾನ ಮೂಡಿಸುವಂತಿದೆ ಎಂದು ಅನೇಕರು ಕಂಪೆನಿ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದಾರೆ.

ಕಜಕಿಸ್ತಾನದಲ್ಲಿಯೂ ನಡೆದಿತ್ತು

ಕಜಕಿಸ್ತಾನದಲ್ಲಿಯೂ ನಡೆದಿತ್ತು

ಇದು ವಿಚಿತ್ರ ಪ್ರಕರಣವಾದರೂ ಈ ಘಟನೆ ಹೊಸತಲ್ಲ. ಈ ಹಿಂದೆಯೂ ಇಂತಹದ್ದೊಂದು ಘಟನೆ ವರದಿಯಾಗಿತ್ತು. ಅದು ನಡೆದಿದ್ದು ಕಜಕಿಸ್ತಾನದಲ್ಲಿ.

ಕಜಕಿಸ್ತಾನದ ರಾಜಧಾನಿ ಆಸ್ತಾನದಲ್ಲಿ ಎಟಿಎಂ ಒಂದರ ಒಳಗೆ ಇಲ್ಲಿಗಳ ಕಿಡಿಗೇಡಿ ಕೃತ್ಯ ಬಯಲಾಗಿತ್ತು. ಅಂದಾಜು 300 ಡಾಲರ್ ಹಣ ನಾಶವಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಈ ಘಟನೆಯಲ್ಲಿ ಎರಡು ಇಲಿಗಳು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದವು.

ಕ್ಯಾಶ್‌ಲೆಸ್ ಇಂಡಿಯಾಕ್ಕೆ ನೆರವು

ರಾಷ್ಟ್ರೀಯವಾದಿ ಇಲಿಗಳು ಅಸ್ಸಾಂ ಎಟಿಎಂನಲ್ಲಿ 2000, 500ರ ನೋಟುಗಳನ್ನು ನಾಶಪಡಿಸುವ ಮೂಲಕ ಮೋದಿಜಿ ಅವರಿಗೆ ಸಹಾಯ ಮಾಡುತ್ತಿವೆ. ನೀವು ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಏಕೆ ಆದ್ಯತೆ ನೀಡಬೇಕು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ನಕಲಿ ಅಕೌಂಟ್ ಒಂದು ಲೇವಡಿ ಮಾಡಿದೆ.

ಇಲಿಗಳಿಗೆ ಅಚ್ಛೇದಿನ್

ಸಾಲದ ಹೊರೆಯಿಂದ ಮತ್ತು ಹಣಕಾಸಿನ ನೆರವಿನ ಕೊರತೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೇಶದಲ್ಲಿ ಇಲಿಗಳಿಗೆ ಅಚ್ಛೇದಿನ್ ಬಂದಿದೆ. ಎಟಿಎಂ ಒಳಗೆ ತೂರಿಕೊಂಡುನ ಲಕ್ಷಾಂತರ ರೂಪಾಯಿ ಹಣವನ್ನು ಚೂರು ಮಾಡಿ ಹಾಕಿವೆ ಎಂದು ಅಸ್ಸಾಂ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇಲಿಗಳಿಂದ ಸರ್ಜಿಕಲ್ ಸ್ಟ್ರೈಕ್

ಬ್ಯಾಂಕ್‌ ಒಂದರ ಎಟಿಎಂನಲ್ಲಿ ಇಲಿಗಳು ನೋಟುಗಳನ್ನು ಚೂರು ಮಾಡಿದ ಘಟನೆಯನ್ನು ಅನೇಕರು ಸರ್ಜಿಕಲ್ ದಾಳಿ ಎಂದು ತಮಾಷೆಯಾಗಿ ಕರೆದಿದ್ದಾರೆ.

English summary
Mice chewed away cash amounting Rs 12.38 lakh from in Assam's Tinsukia area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X