ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಮಾರ್ಗಸೂಚಿ ಜನವರಿ 31ರವರೆಗೂ ವಿಸ್ತರಣೆ

|
Google Oneindia Kannada News

ನವದೆಹಲಿ, ಡಿಸೆಂಬರ್ 28: ಕೊರೊನಾ ವೈರಸ್ ಸೋಂಕಿನ ನಿಯಂತ್ರಣ, ಜಾಗರೂಕತೆ ಮುಂತಾದ ಕ್ರಮಗಳಿಗೆಗಾಗಿ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು 2021ರ ಜನವರಿ 31ರವರೆಗೂ ವಿಸ್ತರಿಸಲಾಗಿದೆ. ದೇಶದಾದ್ಯಂತ ಕೊರೊನಾ ವೈರಸ್ ಪ್ರಕರಣಗಳಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಹಾಲಿ ಮಾರ್ಗಸೂಚಿಗಳನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.

ಲಂಡನ್ ಮತ್ತು ಆಗ್ನೇಯ ಇಂಗ್ಲೆಂಡ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಲು ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರ ವೈರಸ್ ಕಾರಣ ಎಂದು ಹೇಳಲಾಗುತ್ತಿದೆ. ಭಾರತಕ್ಕೂ ಈ ವೈರಸ್ ರೂಪಾಂತರ ಬಂದಿರುವ ಭೀತಿ ಎದುರಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ವಿಸ್ತರಿಸಲಾಗಿದೆ.

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮೂಗುದಾರ ಹಾಕಿದ ಪೊಲೀಸ್ ಇಲಾಖೆ !ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮೂಗುದಾರ ಹಾಕಿದ ಪೊಲೀಸ್ ಇಲಾಖೆ !

'ಸಕ್ರಿಯ ಮತು ಹೊಸ ಕೋವಿಡ್ 19 ಪ್ರಕರಣಗಳಲ್ಲಿ ನಿರಂತರ ಕುಸಿತ ಉಂಟಾಗುತ್ತಿದ್ದರೂ, ನಾವು ಕಣ್ಗಾವಲು, ನಿಯಮಗಳು ಮತ್ತು ಎಚ್ಚರಿಕೆಯನ್ನು ನಿಭಾಯಿಸಬೇಕಿದೆ. ಜಾಗತಿಕವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರ ಕಾರಣ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೊಸ ರೂಪಾಂತರ ಸೃಷ್ಟಿಯಾಗಿರುವುದರಿಂದ ಈ ಕ್ರಮ ಅಗತ್ಯವಾಗಿದೆ' ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

MHA Extends Covid-19 Guidelines Till 31st January

ಕಂಟೇನ್ಮೆಂಟ್ ವಲಯಗಳನ್ನು ಅತ್ಯಂತ ಜಾಗರೂಕತೆಯಿಂದ ಗುರುತಿಸಬೇಕು ಮತ್ತು ಅಂತಹ ಪ್ರದೇಶಗಳ ಒಳಗೆ ಈಗಾಗಲೇ ಸೂಚಿತ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಅನುಮತಿ ನೀಡಿದ ಚಟುವಟಿಕೆಗಳಿಗೆ ನೀಡಲಾಗಿರುವ ನಿರ್ದಿಷ್ಟ ಪ್ರಕ್ರಿಯೆಗಳನ್ನು ಪಾಲಿಸಬೇಕು ಎಂದು ಹೇಳಿದೆ.

English summary
Ministry of Home Affairs has extended its existing guidelines till 31s January, says need to be vigilant over new variant virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X