ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಇಲ್ಲ ಎಂಜಿಪಿ

|
Google Oneindia Kannada News

ಪಣಜಿ, ಡಿ. 23: 2022ರ ಗೋವಾ ವಿಧಾನಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂದು ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಅಧ್ಯಕ್ಷ ದೀಪಕ್ ಧವಳಿಕರ್ ಘೋಷಿಸಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಮಾನ ಮನಸ್ಕ ವಿಪಕ್ಷಗಳ ಜೊತೆ ಎಂಜಿಪಿ ಮೈತ್ರಿ ಹೊಂದಲಿದೆ ಆದರೆ, ಬಿಜೆಪಿ ಜೊತೆಗೆ ಮತ್ತೆ ಮೈತ್ರಿ ಸಾಧ್ಯತೆಯಿಲ್ಲ ಎಂದಿದ್ದಾರೆ.

ಗೋವಾದಲ್ಲೀಗ ಪಕ್ಷಾಂತರ ವಿರೋಧಿ ಕಾಯಿದೆ ಅನ್ವಯವಾಗೋಲ್ಲ, ಯಾಕೆ?ಗೋವಾದಲ್ಲೀಗ ಪಕ್ಷಾಂತರ ವಿರೋಧಿ ಕಾಯಿದೆ ಅನ್ವಯವಾಗೋಲ್ಲ, ಯಾಕೆ?

ಎಂಜಿಪಿಯಲ್ಲಿ ಗೊಂದಲ, ಭಿನ್ನಮತ ಮೂಡುವಂತೆ ಅನೇಕ ಬಿಜೆಪಿ ನಾಯಕರು ತಂತ್ರ ರೂಪಿಸಿದ್ದಾರೆ. ಇದರಿಂದ ಪಕ್ಷದ ಘನತೆಗೆ ಧಕ್ಕೆ ಉಂಟಾಗಿದೆ ಎಂಜಿಪಿಯಲ್ಲಿ ಭಿನ್ನಮತವಿಲ್ಲ, ಪಕ್ಷ ಶಕ್ತಿಯುತವಾಗಿದೆ. ಎಕ್ಲಾ ಚಲೋ ರೇ ಎಂಬ ಧ್ಯೇಯದೊಂದಿಗೆ ಪಕ್ಷ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಮುಂದಿನ ಚುನಾವಣೆ ವೇಳೆಗೆ ಪಕ್ಷದ ಬಲಯುತವಾಗಿ ಹೊರಹೊಮ್ಮಲಿದೆ.

MGP rules out alliance with BJP for Goa Assembly elections 2022

ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು ಇತ್ತೀಚೆಗಷ್ಟೇ ಅನಾರೋಗ್ಯದ ಕಾರಣ ನಿಧನರಾದ ನಂತರ ಅವರ ಅಂತ್ಯಕ್ರಿಯೆಯ ದಿನ ರಾತ್ರಿಯೇ ಬಿಜೆಪಿ ವಿಧಾನಸಭೆ ಸ್ಪೀಕರ್ ಆಗಿದ್ದ ಡಾ.ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಿತ್ತು.

ಗೋವಾದಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದ ಮೂವರು ಶಾಸಕರಲ್ಲಿ ಇಬ್ಬರು ಬಿಜೆಪಿಗೆ ಬೆಂಬಲಿಸಿ, ಪಕ್ಷವನ್ನು ವಿಲೀನಗೊಳಿಸಿದ್ದರು. ಆಗಲೂ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗಿರಲಿಲ್ಲ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಒಟ್ಟು 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಪರ 27 ಶಾಸಕರು, ಪಕ್ಷೇತರ 2 ಆಡಳಿತ ಪಕ್ಷದಲ್ಲಿದ್ದರೆ, ವಿಪಕ್ಷದಲ್ಲಿರುವ ಕಾಂಗ್ರೆಸ್ 5, ಎನ್ ಸಿಪಿ 1 ಇದ್ದರೆ, ಗೋವಾ ಫಾರ್ವರ್ಡ್ ಪಾರ್ಟಿ 3, ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ 1 ಹಾಗೂ ಪಕ್ಷೇತರ 1 ಇದ್ದಾರೆ.

English summary
Maharashtrawadi Gomantak Party (MGP) president Deepak Dhavalikar on Wednesday ruled out a pre-poll alliance with the BJP for the 2022 Goa legislative Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X