• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋದಿಂದ ಕಾರುಗಳ ಸಂಖ್ಯೆ ಕಡಿಮೆ ಆಗುತ್ತಾ ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ನವೆಂಬರ್ 30: ಮೆಟ್ರೋ ನಾಗರಿಕರು ಕಾರುಗಳನ್ನು ಬಳಸದಂತೆ ಉತ್ತೇಜಿಸುತ್ತದೆ ಎಂಬ ಮುಂಬೈ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಸಲ್ಲಿಕೆಗಳನ್ನು ಮಂಗಳವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನಗರದಲ್ಲಿ ಮೆಟ್ರೋದಿಂದ ನಾಗರಿಕರು ಕಾರುಗಳನ್ನು ಬಳಸುವುದನ್ನು ನಿಯಂತ್ರಿಸಬಹುದು ಎಂಬುದು ಸರಿಯಾದ ಕ್ರಮವಲ್ಲ. ಕಾರುಗಳಿಗೆ ಮೆಟ್ರೋ ಎಂದಿಗೂ ಪರ್ಯಾಯ ಮಾರ್ಗ ಆಗಲಾರದು, ಸಿಂಗಾಪುರದ ರೀತಿಯಲ್ಲಿ ಕಾರುಗಳನ್ನು "ಅನ್-ಎಕನಾಮಿಕಲ್" ಮಾಡುವುದರಿಂದ ಸಾಧ್ಯವಾಗಬಹುದು ಎಂದು ಹೇಳಿದೆ.

ಡಿಸೆಂಬರ್ 9ಕ್ಕೆ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮೆಟ್ರೋಗೆ ಶಂಕುಸ್ಥಾಪನೆಡಿಸೆಂಬರ್ 9ಕ್ಕೆ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮೆಟ್ರೋಗೆ ಶಂಕುಸ್ಥಾಪನೆ

ಸಿಂಗಾಪುರದಲ್ಲಿ ಒಂದು ಕಾರು ಖರೀದಿಯು ಬಲು ದುಬಾರಿ ಆಗಿರುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ನಿರೀಕ್ಷಿತ ಕಾರು ಖರೀದಿದಾರನು ಮೊದಲು ಅರ್ಹತೆ ಪ್ರಮಾಣಪತ್ರವನ್ನು (COE) ಪಡೆದುಕೊಳ್ಳಬೇಕು. ಮಧ್ಯಮ ಗಾತ್ರದ ಸೆಡಾನ್‌ಗಾಗಿ COE ಬಿಡ್‌ಗಳ ಟೆಂಡರ್‌ಗಳಲ್ಲಿ ಒಂದಕ್ಕೆ 30,000 ಯುಎಸ್ ಡಾಲರ್ ವೆಚ್ಚವಾಗುತ್ತದೆ.

ಒಟ್ಟು 84 ಮರ ಕಡಿಯಲು ಗ್ರೀನ್ ಸಿಗ್ನಲ್

ಒಟ್ಟು 84 ಮರ ಕಡಿಯಲು ಗ್ರೀನ್ ಸಿಗ್ನಲ್

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ತನ್ನ ಕಾರ್ ಶೆಡ್ ಯೋಜನೆಯಲ್ಲಿ ರೈಲು ರಾಂಪ್‌ಗಳನ್ನು ನಿರ್ಮಿಸಲು ಮುಂಬೈನ ಆರೆ ಕಾಲೋನಿಯಲ್ಲಿ 84 ಮರಗಳನ್ನು ಕಡಿಯಲು ಸಂಬಂಧಿತ ಪ್ರಾಧಿಕಾರದೊಂದಿಗೆ ತನ್ನ ಮನವಿಯನ್ನು ಮುಂದುವರಿಸಲು ಮುಂಬೈ ಮೆಟ್ರೋ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್'ಗೆ ಅನುಮತಿ ನೀಡಿತು.

ಈ ವಿಚಾರಣೆಯ ಸಂದರ್ಭದಲ್ಲಿ ಮುಂಬೈ ಮೆಟ್ರೋ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಡಿಮೆ ವಾಹನ ದಟ್ಟಣೆಯಿಂದ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಲಿದೆ. ಮೆಟ್ರೋ ರೈಲು ಯೋಜನೆಯ ಪ್ರಯೋಜನಗಳು ಮತ್ತು ಪರಿಣಾಮಗಳನ್ನು ಪಟ್ಟಿ ಮಾಡಿದರು.

ಮುಂಬೈನಲ್ಲಿ ಪ್ರತಿದಿನ ರೈಲು ಅಪಘಾತದಲ್ಲಿ 9 ಮಂದಿ ಬಲಿ

ಮುಂಬೈನಲ್ಲಿ ಪ್ರತಿದಿನ ರೈಲು ಅಪಘಾತದಲ್ಲಿ 9 ಮಂದಿ ಬಲಿ

13 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಮೂಲಕ ಪ್ರಯಾಣಿಸಬಹುದು. ಇದರಿಂದ ಟ್ರಾಫಿಕ್ ಪರಿಸ್ಥಿತಿ, ಕಡಿಮೆ ಸಂಖ್ಯೆಯ ಕಾರುಗಳು, ಇಂಧನ ಬಳಕೆ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು, ಮುಂಬೈನಲ್ಲಿ ಪ್ರತಿದಿನ ರೈಲು ಅಪಘಾತಗಳಲ್ಲಿ ಒಂಬತ್ತು ಜನರು ಮೃತಪಡುತ್ತಾರೆ.

ದೆಹಲಿಯ ಪರಿಸ್ಥಿತಿ ಬಗ್ಗೆ ಉಲ್ಲೇಖಿಸಿದ ಸುಪ್ರೀಂ ಕೋರ್ಟ್

ದೆಹಲಿಯ ಪರಿಸ್ಥಿತಿ ಬಗ್ಗೆ ಉಲ್ಲೇಖಿಸಿದ ಸುಪ್ರೀಂ ಕೋರ್ಟ್

"ಕಾರುಗಳ ಬೆಳವಣಿಗೆಯ ದರವು ಹೆಚ್ಚುತ್ತಲೇ ಇರುತ್ತದೆ. ಜನರು ಕಾರುಗಳನ್ನು ಖರೀದಿ ಮಾಡುವುದನ್ನು ಮುಂದುವರಿಸುತ್ತಾರೆ. ದೆಹಲಿಯಲ್ಲಿ ಏನಾಯಿತು ನೋಡಿ. ನೀವು ಬಾಹ್ಯ ಮಾರ್ಗವನ್ನು ಹೊಂದಿದ್ದೀರಿ, ಆದರೆ ನಗರವು ಮುಚ್ಚಿಹೋಗುತ್ತದೆ ಎಂದು ಅರ್ಥವಲ್ಲ," ಎಂದು ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಗಮನಿಸಿತು.

ಸಿಂಗಾಪುರದ ರೀತಿ ಕ್ರಮ ತೆಗೆದುಕೊಂಡಾಗ ಮಾತ್ರ ಪರಿಣಾಮ

ಸಿಂಗಾಪುರದ ರೀತಿ ಕ್ರಮ ತೆಗೆದುಕೊಂಡಾಗ ಮಾತ್ರ ಪರಿಣಾಮ

"ಜನರು ಕಾರುಗಳನ್ನು ಓಡಿಸುವುದನ್ನು ನಿಲ್ಲಿಸುತ್ತಾರೆ, ಇಂಧನ ಬಳಕೆ ಕಡಿಮೆಯಾಗುತ್ತದೆ ಎಂದುಕೊಂಡರೆ ಅದು ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ. ನೀವು ಸಿಂಗಾಪುರದಂತಹ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂದಾಗ ಮಾತ್ರ ಕಾರುಗಳ ಬಳಕೆಯಲ್ಲಿ ನಿಯಂತ್ರಣವನ್ನು ಸಾಧಿಸಲು ಸಾಧ್ಯವಾಗುತ್ತದೆ," ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

English summary
Supreme Court says Metro would not decrease number of cars. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X