ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ಕೇವಲ ಮಹಾನಗರಗಳಿಗೆ ಮಾತ್ರವಲ್ಲ, ಸಣ್ಣ ನಗರಗಳಿಗೂ ಬರಲಿದೆ

|
Google Oneindia Kannada News

ಬೆಂಗಳೂರು, ಜುಲೈ 22: ಮೆಟ್ರೋ ಸೇವೆ ಕೇವಲ ಮಹಾನಗರಗಳಿಗೆ ಸೀಮಿತವಲ್ಲ, ಸಣ್ಣ ನಗರಗಳಿಗೂ ಬರಲಿದೆ.

ಮಹಾನಗರಗಳಲ್ಲಿ ಮೆಟ್ರೋ ರೈಲು ಸಂಚಾರ ಸೇವೆಗೆ ದೊರೆಯುತ್ತಿರುವ ಪ್ರತಿಕ್ರಿಯೆಯಿಂದ ಉತ್ತೇಜಿತವಾಗಿರುವ ಕೇಂದ್ರ ಸರ್ಕಾರ, ಸಣ್ಣ ನಗರ ಹಾಗೂ ಪಟ್ಟಣಗಳಲ್ಲೂ ಇದೇ ರೀತಿಯ, ಆದರೆ ಅಗ್ಗದ ಹಗುರ ನಗರ ರೈಲು ಸಂಚಾರ ವ್ಯವಸ್ಥೆ ಜಾರಿಗೆ ಮುಂದಾಗಿದೆ.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ

ರಸ್ತೆಗಳ ಮಧ್ಯಭಾಗ ಹಾಗೂ ಎಲಿವೇಟೆಡ್ ಮೆಟ್ರೋ ಲೈಟ್ ಸಂಚಾರಕ್ಕೆ ಅನುಮತಿ ನೀಡುವ ಸಂಬಂಧ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಮಾನದಂಡಗಳನ್ನು ರೂಪಿಸಿ ಬಿಡುಗಡೆ ಮಾಡಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಮೆಟ್ರೋ ಯೋಜನೆ ಜಾರಿಯಾಗುತ್ತದೆ.

Metro services in small cities

ಮೆಟ್ರೋಲೈಟ್ ಎಂಬ ಹೆಸರಿನ ಈ ಯೋಜನೆ ಮೆಟ್ರೋ ರೈಲಿನಷ್ಟುದುಬಾರಿಯಲ್ಲ ಇದನ್ನು ಅಳವಡಿಸಿಕೊಳ್ಳುವ ನಗರಗಳಿಗೆ ಆರ್ಥಿಕ ಸಹಾಯ ನೀಡಲೂ ಸರ್ಕಾರ ಹೊರಟಿದೆ.

ರಸ್ತೆಗಳ ಮಧ್ಯೆ ಈ ಮಾರ್ಗ ನಿರ್ಮಿಸಬಹುದಾಗಿದೆ. ಅಗತ್ಯಬಿದ್ದರೆ ಮೆಟ್ರೋಲೈಟ್ ಮಾರ್ಗಕ್ಕೆ ಬೇಲಿ ಹಾಕಿಕೊಳ್ಳಬಹುದು, ಛಾವಣಿ ಹೊಂದಿದ ಪ್ಲಾಟ್‌ಫಾರ್ಮ್ ಗಳನ್ನು ನಿರ್ಮಿಸಲಾಗುತ್ತದೆ. ಮೆಟ್ರೋ ರೈಲಿನ ರೀತಿಸ್ವಯಂಚಾಲಿತ ಗೇಟುಗಳು ಇರುವುದಿಲ್ಲ.

ಆದರೆ ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಇಲ್ಲದ ಸಣ್ಣನಗರ ಹಾಗೂ ಪಟ್ಟಣಗಳು ಕೂಡ ರೈಲು ಸಮೂಹ ಸಾರಿಗೆ ವ್ಯವಸ್ಥೆ ಅಳವಡಿಕೆಗೆ ಒಲವು ತೋರುತ್ತಿವೆ. ಅಂತಹ ನಗರಗಳಲ್ಲಿ ಮೆಟ್ರೋಲೈಟ್ ಆರಂಭಿಸುವ ಉದ್ದೇಶ ಸರ್ಕಾರದ್ದು, ಮೆಟ್ರೋಲೈಟ್ ರೈಲಿನಲ್ಲಿ 3 ಬೋಗಿಗಳು ಇರುತ್ತವೆ. 300 ಮಂದಿ ಪ್ರಯಾಣಿಸಬಹುದಾಗಿರುತ್ತದೆ.

ಎಕ್ಸ್‌ರೇ ಹಾಗೂ ಬ್ಯಾಗೇಜ್ ಸ್‌ಕ್ಯಾನರ್ ಕೂಡ ಇರುವುದಿಲ್ಲ. ಟಿಕೆಟ್ ಪಡೆದಿಲ್ಲದ ಪ್ರಯಾಣಿಕರಿಗೆ ದಂಡ ವಿಧಿಸುವ ಕೆಲಸ ಮಾಡಲಿದ್ದಾಎಎ. ಈ ರೈಲು ಗಂಟೆಗೆ25 ಕಿ.ಮೀ ಗರಿಷ್ಠ 60 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಸಾಮಾನ್ಯ ರೈಲಿನಲ್ಲಿರುವಂತೆಯೇ ಇಲ್ಲೂ ರೈಲಿನೊಳಕ್ಕೇ ಟಿಕೆಟ್ ಪರಿಶೀಲಕರು ಬರುತ್ತಾರೆ.

English summary
Metro services in small cities also. The Centre has proposed light urban rail transit system in small cities and towns having lower projection of ridership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X