ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶವಾಣಿಯಲ್ಲೂ ಕೇಳಿಬಂತು ಲೈಂಗಿಕ ದೌರ್ಜನ್ಯದ ಮಿಟೂ ಪ್ರತಿಧ್ವನಿ

|
Google Oneindia Kannada News

ಬೆಂಗಳೂರು, ನವೆಂಬರ್ 15 : ಮಿಟೂ ಆರೋಪಗಳು ಆಕಾಶವಾಣಿಯಿಂದಲೂ ಪ್ರತಿಧ್ವನಿಸಲು ಆರಂಭಿಸಿವೆ. ಅಖಿಲ ಭಾರತೀಯ ತಾತ್ಕಾಲಿಕ ಉದ್ಘಾಷಕ ಮತ್ತು ನಿರೂಪಕರ ಒಕ್ಕೂಟ ಲೈಂಗಿಕ ದೌರ್ಜನ್ಯ ನಡೆಯುತ್ತಿರುವದರ ಬಗ್ಗೆ ಪತ್ರ ಬರೆದಿದ್ದು, ಆಕಾಶವಾಣಿಯಲ್ಲಿ ಬಿರುಗಾಳಿ ಎಬ್ಬಿಸಿದೆ.

ತಾತ್ಕಾಲಿಕ ಉದ್ಘಾಷಕಿಯರು, ನಿರೂಪಕಿರು, ರೇಡಿಯಾ ಜಾಕಿಗಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಅವರು ಕೂಡಲೆ ತನಿಖೆ ನಡೆಸಬೇಕೆಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವನ್ನು ಆಗ್ರಹಿಸಿದ್ದಾರೆ.

#MeToo ಆರೋಪ: ಬೆಂಗಳೂರಿನ ಐಐಎಸ್‌ಸಿ ಪ್ರೊಫೆಸರ್‌ಗೆ ಕಡ್ಡಾಯ ನಿವೃತ್ತಿ ಶಿಕ್ಷೆ #MeToo ಆರೋಪ: ಬೆಂಗಳೂರಿನ ಐಐಎಸ್‌ಸಿ ಪ್ರೊಫೆಸರ್‌ಗೆ ಕಡ್ಡಾಯ ನಿವೃತ್ತಿ ಶಿಕ್ಷೆ

ಹಿಂದೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದ್ದರೂ ಆ ದೂರುಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಲಾಗಿದೆ. ಲೈಂಗಿಕ ದೌರ್ಜನ್ಯ ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಸಂತ್ರಸ್ತೆಯಲು ತಾತ್ಕಾಲಿಕ ಉದ್ಘಾಷಕಿಯರು. ಇವರಲ್ಲಿ ಹಲವರು ಕೆಲ ದಶಕಗಳಿಂದಲೇ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದೈಹಿಕ, ಮಾನಸಿಕ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು, ಅವರಲ್ಲಿ ಹಲವರು ಮಧ್ಯ ವಯಸ್ಕರು, ಕಡೆಗೂ ಮನೇಕಾ ಗಾಂಧಿ ಅವರಿಗೆ ಪತ್ರಮುಖೇನ ದೂರು ನೀಡಿದ್ದಾರೆ. ದಶಕಗಳಿಂದ ಸಹಿಸಿಕೊಂಡಿದ್ದ ಅವರ ಸಹನೆ ಕಟ್ಟೆಯೊಡೆದಿದೆ.

ತಾತ್ಕಾಲಿಕ ಉದ್ಘಾಷಕಿಯರೇ ಕಾಮುಕರಿಗೆ ಟಾರ್ಗೆಟ್

ತಾತ್ಕಾಲಿಕ ಉದ್ಘಾಷಕಿಯರೇ ಕಾಮುಕರಿಗೆ ಟಾರ್ಗೆಟ್

ಲೈಂಗಿಕ ಕಿರುಕುಳು ನೀಡಿದವರು ಇಲ್ಲಿ ಪರ್ಮನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವವರೇ ಆಗಿದ್ದಾರೆ. ದೂರು ನೀಡಿದಾಗ ತಾತ್ಕಾಲಿಕ ಉದ್ಘಾಷಕಿಯರಿಗೆ ಯಾವುದೇ ಕೆಲಸ ನೀಡದೆ ಸತಾಯಿಸಿದ್ದಾರೆ. ಜೀವನ ನಿರ್ವಹಣೆಗಾಗಿ ತಾತ್ಕಾಲಿಕ ಉದ್ಘಾಷಕಿಯರಾಗಿದ್ದವರು ಕೆಲಸವಿಲ್ಲದೆ ಕಷ್ಟ ಅನುಭವಿಸಿದ್ದಾರೆ. ಈ ಕಾಮುಕರಲ್ಲಿ ಕೆಲವರು ಇತರೆಡೆ ವರ್ಗಾವಣೆಯಾಗಿದ್ದರೆ, ಆಂತರಿಕ ದೂರು ಸಮಿತಿಯಲ್ಲಿ ಪರ್ಮನೆಂಟ್ ಸಿಬ್ಬಂದಿಗಳೇ ಇರುವುದರಿಂದ ಕೆಲವರು ಕ್ಲೀನ್ ಚಿಟ್ ಪಡೆದು ಬಿಂದಾಸ್ ಆಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಳಲುತ್ತಿರುವುದು ಮಾತ್ರ ತಾತ್ಕಾಲಿಕ ಉದ್ಘಾಷಕಿಯರು.

ಉತ್ತಮ ಧ್ವನಿ ಇದ್ದರೂ ದನಿ ಎತ್ತುವಹಾಗಿಲ್ಲ

ಉತ್ತಮ ಧ್ವನಿ ಇದ್ದರೂ ದನಿ ಎತ್ತುವಹಾಗಿಲ್ಲ

ದೂರು ನೀಡಿದರೆ ಕೆಲಸ ಕಳೆದುಕೊಳ್ಳುವ ಭಯ ಇದ್ದುದರಿಂದ, ಉತ್ತಮ ಕಂಠ, ಉತ್ತಮ ವಾಕ್ಪಟುತ್ವದಿಂದಾಗಿ ಇವರು ಆಯ್ಕೆಯಾಗಿದ್ದರೂ, ಹಲವಾರು ಮಹಿಳೆಯರು ಲೈಂಗಿಕ ದೌರ್ಜನ್ಯದ ಬಗ್ಗೆ ದನಿಯೆತ್ತುತ್ತಿಲ್ಲ. ಅವರ ದನಿಯನ್ನೇ ಹೊಸಕಿಹಾಕಲಾಗುತ್ತಿದೆ. ಕೆಲವರು ಜೀವನ ನಿರ್ವಹಣೆಗಾಗಿ ಬಾಯಿ ಮುಚ್ಚಿಕೊಂಡಿದ್ದಾರೆ. ಆಧರೆ, ಧೈರ್ಯ ಮಾಡಿ ದೂರು ನೀಡಿದ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಅವರಿಗೆ ಬೆಂಬಲವಾಗಿ ನಿಂತ ಪುರುಷರು ಮತ್ತು ಮಹಿಳೆಯರ ಮೇಲೆ ಕೂಡ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಪತ್ರದಲ್ಲಿ ವಿವರವಾಗಿ ಬರೆಯಲಾಗಿದೆ.

ಸಮ್ಮತದ ಸಂಬಂಧವಲ್ಲ, ನಡೆದದ್ದು ಅತ್ಯಾಚಾರ : ಅಕ್ಬರ್ಗೆ ಪಲ್ಲವಿ ತಿರುಗೇಟುಸಮ್ಮತದ ಸಂಬಂಧವಲ್ಲ, ನಡೆದದ್ದು ಅತ್ಯಾಚಾರ : ಅಕ್ಬರ್ಗೆ ಪಲ್ಲವಿ ತಿರುಗೇಟು

ತಬ್ಬಿಕೊಳ್ಳುವುದು, ಮುತ್ತು ನೀಡುವುದು

ತಬ್ಬಿಕೊಳ್ಳುವುದು, ಮುತ್ತು ನೀಡುವುದು

ಹೆಸರು ಹೇಳಲಿಚ್ಛಿಸದ ಕೆಲವು ಮಹಿಳೆಯರು ತಮ್ಮನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎಂದು ವಿವರಿಸಿದ್ದಾರೆ. ಅಸಹ್ಯಕ ಸಂಜ್ಞೆಗಳನ್ನು ತೋರುವುದು, ಕುಹಕವಾಡುವುದು, ಕೆಟ್ಟ ಭಾಷೆ ಬಳಸುವುದು, ಕೆಲವೊಮ್ಮೆ ತಬ್ಬಿಕೊಳ್ಳಲು ಬರುವುದು, ಬಲವಂತವಾಗಿ ಮುತ್ತು ನೀಡುವುದು ಮತ್ತು ಲೈಂಗಿಕ ಕ್ರಿಯೆಗೆ ಆಹ್ವಾನಿಸುವುದು ಕೂಡ ನಡೆದಿದೆ ಎಂದು ದೂರಿದ್ದಾರೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಹರ್ಯಾಣ, ಹಿಮಾಚಲ ಪ್ರದೇಶದಲ್ಲಿ ಇಂಥ ದೌರ್ಜನ್ಯಗಳಾಗಿರುವುದು ಕೇಳಿಬಂದಿದೆ. ಅವರು ನೀಡುತ್ತಿದ್ದ ಲೈಂಗಿಕ ಮತ್ತು ಮಾನಸಿಕ ಹಿಂಸೆ ತಾಳಲಾರದೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.

ಮಹಿಳೆಯ ಜೊತೆ ಬಾಸ್ ಅಸಭ್ಯ ವರ್ತನೆ

ಮಹಿಳೆಯ ಜೊತೆ ಬಾಸ್ ಅಸಭ್ಯ ವರ್ತನೆ

ನಿರಾಲಾ ಎಂಬ ವ್ಯಕ್ತಿಯೊಬ್ಬರು ಶಾಂತಿ ಎಂಬ ಮಹಿಳೆಯ ದೇಹಕ್ಕೆ ತನ್ನ ದೇಹವನ್ನು ಉಜ್ಜಿದ್ದಲ್ಲದೆ, ಅವರ ಸ್ತನದ ಬಗ್ಗೆ ಅಸಹ್ಯಕರ ಕಾಮೆಂಟ್ ಮಾಡಿದ್ದರೆಂದು ಹೇಳಿಕೊಂಡಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಆಕಾಶವಾಣಿಯ ಮೇಲಿನ ಪ್ರೀತಿಯಿಂದಾಗಿ ಮತ್ತೊಬ್ಬ ಮಹಿಳೆ ಎರಡು ದಶಕಗಳಿಂದ ದುಡಿಯುತ್ತಿದ್ದರು. ಅವರಿಗೆ ತಿಂಗಳಿಗೆ ಬರುತ್ತಿದ್ದುದು ಏಳೆಂಟು ಸಾವಿರ ಮಾತ್ರ. ಆದರೆ, ಸುರೇಶ್ ಎಂಬುವವರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದಂದಿನಿಂದ, ಅಂದರೆ 2016ರಿಂದಲೇ ಅವರಿಗೆ ಕೆಲಸ ನೀಡುವುದನ್ನೇ ನಿಲ್ಲಿಸಲಾಗಿತ್ತು. ಇದರಿಂದ ಕುಟುಂಬ ನಿರ್ವಹಿಸುವುದು ಕೂಡ ಕಷ್ಟವಾಗಿದೆ ಎಂದು ಅವರು ಅಲವತ್ತುಕೊಂಡಿದ್ದಾರೆ.

ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್‌ಗೆ ಶ್ರುತಿ ಹರಿಹರನ್ ಅರ್ಜಿಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್‌ಗೆ ಶ್ರುತಿ ಹರಿಹರನ್ ಅರ್ಜಿ

ಕತ್ತಲೆ ರೂಂನಲ್ಲಿ ತಬ್ಬಿ ಮುತ್ತಿಟ್ಟಿದ್ದ ಬಾಸ್

ಕತ್ತಲೆ ರೂಂನಲ್ಲಿ ತಬ್ಬಿ ಮುತ್ತಿಟ್ಟಿದ್ದ ಬಾಸ್

ಒಂದು ಬಾರಿ ಡಬ್ಬಿಂಗ್ ರೂಮ್ ನಲ್ಲಿದ್ದಾಗ ಲೈಟ್ ಆಫ್ ಮಾಡಿದ ಸುರೇಶ್ ಎಂಬ ಧೂರ್ತ, ಜ್ಯೋತಿ ಎಂಬುವವರ ಬಳಿ ತನ್ನ ಚೇರನ್ನು ಎಳೆದುಕೊಂಡು ಅವರನ್ನು ಬಲವಾಗಿ ತಬ್ಬಿಕೊಂಡು ಮುತ್ತು ಕೊಟ್ಟಿದ್ದ. ಇದರಿಂದ ತೀವ್ರ ಆಘಾತಕ್ಕೊಳಗಾದರೂ ಲೈಟ್ ಬಂದ ಮೇಲೆ ರೆಕಾರ್ಡಿಂಗ್ ಮುಗಿಸಿ, ಆ ದಿನದ ಡ್ಯೂಟಿ ಮುಗಿದ ಮೇಲೆ ಮತ್ತೊಬ್ಬ ಮಹಿಳೆ ಬಂದಾಗ ಅವರೆದಿರು ಆದ ಘಟನೆಯನ್ನು ವಿವರಿಸಿ ಅತ್ತಿದ್ದರಂತೆ. ಈ ಎರಡು ಘಟನೆಗಳ ವಿಚಾರಣೆ ನಡೆದು, ಅಂತಹ ಘಟನೆ ಯಾವುದೂ ನಡೆದೇ ಇಲ್ಲ ಎಂದು ಆಂತರಿಕ ದೂರು ಸಮಿತಿ ಷರಾ ಬರೆದು ಕೈತೊಳೆದುಕೊಂಡಿತ್ತು.

ಪೌರಕಾರ್ಮಿಕರ ಮೇಲೂ ಲೈಂಗಿಕ ಕಿರುಕುಳ: ಅಧಿಕಾರಿಗಳ ವಿರುದ್ಧ ಆರೋಪಪೌರಕಾರ್ಮಿಕರ ಮೇಲೂ ಲೈಂಗಿಕ ಕಿರುಕುಳ: ಅಧಿಕಾರಿಗಳ ವಿರುದ್ಧ ಆರೋಪ

English summary
MeToo voice reverberates in Akashavani also. A letter has been written by All India Radio Casual Announcer and Comperes Union (AICACU) to Woman and Child Development minister Maneka Gandhi. Many casual announcers, comperes, radio jockeys have been sexually harassed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X