ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂ ಕೊರೊನಾ ಪರೀಕ್ಷೆಯ "ಕೋವಿಫೈಂಡ್ ಕಿಟ್‌"ಗೆ ಅನುಮೋದನೆ

|
Google Oneindia Kannada News

ನವದೆಹಲಿ, ಜೂನ್ 11: ಶೀಘ್ರ ಪರೀಕ್ಷೆ ನಡೆಸಿ ಸೋಂಕು ಪತ್ತೆ ಮಾಡುವುದು ಕೊರೊನಾ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಕಾರಿ. ಹೀಗಾಗಿ ಸುಲಭವಾಗಿ ಮನೆಯಲ್ಲಿಯೇ ಪರೀಕ್ಷೆ ಮಾಡಿಕೊಳ್ಳಲು ನೆರವಾಗುವಂಥ ಸಾಧನಗಳ ಅಭಿವೃದ್ಧಿ ದೇಶದಲ್ಲಿ ನಡೆಯುತ್ತಿದೆ.

ಇದೀಗ ಮನೆಯಲ್ಲಿಯೇ ಸುಲಭವಾಗಿ ಕೊರೊನಾ ಸೋಂಕು ಪತ್ತೆ ಮಾಡಬಲ್ಲ ಕೋವಿಫೈಂಡ್ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ICMR ಅನುಮೋದನೆ ನೀಡಿದೆ.

Meril Covid Testing Home Kit Covifind Get Nod From ICMR

ಮೆಡ್‌ಟೆಕ್‌ನ ಮೆರಿಲ್ ಈ ರ್ಯಾಪಿಡ್ ಪರೀಕ್ಷಾ ಕಿಟ್ ಅನ್ವೇಷಿಸಿದ್ದು, ಸೋಂಕಿತರಲ್ಲಿ ಇದು ವೈರಸ್ ಪತ್ತೆಯನ್ನು ನಿಖರವಾಗಿ ಗುರುತಿಸಬಲ್ಲದು ಎಂದು ಸಂಸ್ಥೆ ಹೇಳಿಕೊಂಡಿದೆ. "15 ನಿಮಿಷಗಳಲ್ಲಿಯೇ ಸೋಂಕು ಪತ್ತೆ ಸಾಧ್ಯವಾಗಲಿದೆ. ಈ ಮೂಲಕ ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಲು ನೆರವಾಗಲಿದೆ" ಎಂದು ಮೆರಿಲ್ ಹಿರಿಯ ಉಪಾಧ್ಯಕ್ಷ ಸಂಜೀವ್ ಭಟ್ ತಿಳಿಸಿದ್ದಾರೆ.

ಕೋವಿಡ್ 19 ಪ್ರತಿಕಾಯ ಪತ್ತೆ ಕಿಟ್ ಅಭಿವೃದ್ಧಿಪಡಿಸಿದ ಡಿಆರ್‌ಡಿಒಕೋವಿಡ್ 19 ಪ್ರತಿಕಾಯ ಪತ್ತೆ ಕಿಟ್ ಅಭಿವೃದ್ಧಿಪಡಿಸಿದ ಡಿಆರ್‌ಡಿಒ

ಈ ಪರೀಕ್ಷಾ ಸಾಧನದಲ್ಲಿ ಒಂದು ಸ್ಟೆರೈಲ್ ನೇಸಲ್ ಸ್ವಾಬ್, ಬಫರ್ ಟ್ಯೂಬ್ ಇರಲಿದೆ. ಒಂದು ಪ್ಯಾಕ್‌ಗೆ 250 ರೂ ದರ ನಿಗದಿ ಮಾಡಲಾಗಿದೆ. 3, 5, 25 ಪರೀಕ್ಷಾ ಪ್ಯಾಕ್‌ಗಳೂ ಸೇರಿದಂತೆ ಹೆಚ್ಚುವರಿ ಖರೀದಿ ಆಯ್ಕೆಗಳಿವೆ

ಎರಡು ವಾರಗಳ ನಂತರ ರೀಟೇಲ್ ಫಾರ್ಮಸಿಗಳಲ್ಲಿ ಹಾಗೂ ಅಮೇಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ.

English summary
Meril has said it has received approval from the Indian Council of Medical Research (ICMR) for its self-use rapid antigen test kit for Covid-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X