ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲು ಗಣಿಯೊಳಗೆ ಹಠಾತ್‌ ಪ್ರವಾಹ, 13 ಕಾರ್ಮಿಕರು ಸತ್ತಿರುವ ಶಂಕೆ

|
Google Oneindia Kannada News

ಶಿಲ್ಲಾಂಗ್, ಡಿಸೆಂಬರ್ 14: ಮೆಘಾಲಯ ರಾಜ್ಯದ ಈಸ್ಟ್‌ ಜೈನ್‌ಟಿಯಾ ಹಿಲ್ಸ್‌ ಎಂಬಲ್ಲಿ ಕಲ್ಲು ಗಣಿಗಾರಿಕೆ ಸುರಂಗದೊಳಕ್ಕೆ ಪ್ರವಾಹ ಒಳನುಗ್ಗಿದ ಕಾರಣ 13 ಜನ ಕಾರ್ಮಿಕರು ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಗ್ರಾನೈಟ್ ಗಣಿಗಾರಿಕೆ ಪರವಾನಗಿ ಪ್ರಕ್ರಿಯೆ ಸರಳಗೊಳಿಸಲು ಕುಮಾರಸ್ವಾಮಿ ಸೂಚನೆಗ್ರಾನೈಟ್ ಗಣಿಗಾರಿಕೆ ಪರವಾನಗಿ ಪ್ರಕ್ರಿಯೆ ಸರಳಗೊಳಿಸಲು ಕುಮಾರಸ್ವಾಮಿ ಸೂಚನೆ

ಗಣಿಯಲ್ಲಿ ಇನ್ನೂ ಹಲವು ಕಾರ್ಮಿಕರಿದ್ದು, ಬದುಕಿರಬಹುದಾದ ಕಾರ್ಮಿಕರ ರಕ್ಷಣೆಗೆ ಪೊಲೀಸರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಪಂಪ್‌ಗಳ ಮೂಲಕ ಸುರಂಗದೊಳಗಿನ ನೀರನ್ನು ಹೊರಕ್ಕೆ ಅಟ್ಟಲಾಗುತ್ತಿದೆ.

ಬನ್ನೇರುಘಟ್ಟ ಗಣಿಗಾರಿಕೆ ಪರವಾನಗಿ ರದ್ದತಿಗೆ ಪತ್ರ ಬನ್ನೇರುಘಟ್ಟ ಗಣಿಗಾರಿಕೆ ಪರವಾನಗಿ ರದ್ದತಿಗೆ ಪತ್ರ

ಬುಧವಾರ ರಾತ್ರಿಯೇ ಘಟನೆ ನಡೆದಿದೆ. ಆದರೆ ಘಟನೆ ನಿನ್ನೆ ಸಂಜೆ ವೇಳೆಗೆ ಬೆಳಕಿಗೆ ಬಂದಿದೆ. ಇದೊಂದು ಅಕ್ರಮ ಕಲ್ಲು ಗಣಿಗಾರಿಕೆ ಸುರಂಗವಾಗಿತ್ತು ಎನ್ನಲಾಗಿದೆ.

Meghalaya: sudden flood in coal mine 13 miners feared dead

ದೊಡ್ಡ ಬಂಡೆಯೊಂದಕ್ಕೆ ರಂಧ್ರ ಕೊರೆಯುವಾಗ ಹಠಾತ್ ನೀರು ನುಗ್ಗಿ ಗಣಿ ಪೂರಾ ಜಲದಿಂದ ಆವೃತ್ತವಾಗಿದೆ. ಬಂಡೆ ಕೊರೆಯುವಲ್ಲಿ 13 ಜನ ಕಾರ್ಮಿಕರು ನಿರತರಾಗಿದ್ದರು ಎನ್ನಲಾಗಿದ್ದು, ಅಷ್ಟೂ ಮಂದಿ ಅಸುನೀಗಿದ್ದಾರೆ ಎಂಬ ಶಂಕೆ ಇದೆ. ಗಣಿಯಲ್ಲಿ ಇನ್ನೂ ಕೆಲವು ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

ಚಾಲಕನೇ ಇಲ್ಲದೆ 110 ಕಿ.ಮೀ. ವೇಗದಲ್ಲಿ ಚಲಿಸಿದ ರೈಲು, ಏನಾಯ್ತು ನೋಡಿ ಚಾಲಕನೇ ಇಲ್ಲದೆ 110 ಕಿ.ಮೀ. ವೇಗದಲ್ಲಿ ಚಲಿಸಿದ ರೈಲು, ಏನಾಯ್ತು ನೋಡಿ

2012ರಲ್ಲಿ ಸೌತ್ ಗ್ಯಾರೋ ಹಿಲ್ಸ್‍ನ ನಂಗಲ್‍ಬಿಬ್ರಾ ಪ್ರದೇಶದ ಬಳಿ ಅಕ್ರಮ ಕಲ್ಲಿದ್ದಲು ಗಣಿಯೊಳಗೆ ಪ್ರವಾಹದಿಂದಾಗಿ 15 ಮಂದಿ ಜಲಸಮಾಧಿಯಾದರು. ಅವರ ಮೃತದೇಹಗಳು ಪತ್ತೆಯಾಗಲೇ ಇಲ್ಲ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2014ರಲ್ಲಿ ಮೇಘಾಲಯದ ಎಲ್ಲ ಅವೈಜ್ಞಾನಿಕ ಮತ್ತು ಅಸುರಕ್ಷಿತ ಕಲ್ಲಿದ್ದಲು ಗಣಿಗಳನ್ನು ನಿಷೇಧಿಸಿದೆ. ಆದರೂ ಸಹ ಅಲ್ಲಿಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇದೆ.

English summary
Sudden flood in coal mine in Meghalaya's East Jaintia Hills district 13 miners feared dead. accident happen when miners trying to hole a big rock. water flooded from the rock.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X