• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಶ್ಮೀರಿ ಸರಕುಗಳನ್ನು ಬಹಿಷ್ಕರಿಸಿ ಎಂದ ಮೇಘಾಲಯ ರಾಜ್ಯಪಾಲ

|

ಶ್ರೀನಗರ, ಫೆಬ್ರವರಿ 19: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಮೇಘಾಲಯ ರಾಜ್ಯಪಾಲ ತಥಾಗತ ರಾಯ್, ಕಾಶ್ಮೀರಿ ಸರಕುಗಳನ್ನು ಬಹಿಷ್ಕರಿಸಿ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

'ಭಾರತ ಸೇನೆಯ ನಿವೃತ್ತ ಕರ್ನಲ್ ಒಬ್ಬರ ಮನವಿಯಿದು: ಕಾಶ್ಮೀರಕ್ಕೆ ಭೇಟಿ ನೀಡಬೇಡಿ, ಮುಂದಿನ ಎರಡು ವರ್ಷ ಅಮರನಾಥಕ್ಕೆ ಹೋಗಬೇಡಿ. ಕಾಶ್ಮೀರದ ಎಂಪೋರಿಯಾ ಮತ್ತು ಪ್ರತಿ ಚಳಿಗಾಲದಲ್ಲಿ ಬರುವ ಅಲ್ಲಿನ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿ ಮಾಡದಿರಿ. ಕಾಶ್ಮೀರದ ಎಲ್ಲವನ್ನೂ ಬಹಿಷ್ಕರಿಸಿ' ಎಂದು ತಥಾಗತ ಟ್ವೀಟ್ ಮಾಡಿದ್ದಾರೆ.

ಪಾಕ್ ನಾಗರಿಕರಿಗೆ 48 ಗಂಟೆಗಳ ಗಡುವು ಕೊಟ್ಟ ಜಿಲ್ಲಾಡಳಿತ!

ಹಾಗೆಯೇ ಇದು ಹಿಂಸಾಚಾರ ರಹಿತ ಪ್ರತಿಕ್ರಿಯೆ ಎಂದು ಅವರು ಮತ್ತೊಂದು ಸಲಹೆಯನ್ನು ನೀಡಿದ್ದಾರೆ. ನಮ್ಮ ನೂರಾರು ಸೈನಿಕರನ್ನು ಕೊಂದಿದ್ದಕ್ಕೆ ಮತ್ತು 3.5 ಲಕ್ಷ ಕಾಶ್ಮೀರಿ ಪಂಡಿತರನ್ನು ಹೊರದಬ್ಬಿದ್ದಕ್ಕೆ ಸಂಪೂರ್ಣ ಹಿಂಸಾಚಾರರಹಿತ ಪ್ರತಿಕ್ರಿಯೆ ಇದು. ನಿವೃತ್ತ ಕರ್ನಲ್ ಒಬ್ಬರ ಸಲಹೆಯನ್ನು ನಾನು ಪ್ರತಿಧ್ವನಿಸುತ್ತೇನೆ ಎಂದು ಹೇಳಿದ್ದಾರೆ.

ಪಾಕ್ ನಾಗರಿಕರಿಗೆ 48 ಗಂಟೆಗಳ ಗಡುವು ಕೊಟ್ಟ ಜಿಲ್ಲಾಡಳಿತ!

ಇದಕ್ಕೂ ಮೊದಲು ಶಿವಸೇನಾ ವಕ್ತಾರೆ ಮನೀಷಾ ಕಾಯಂಡೆ, ಭಾರತೀಯರು ಮತ್ತು ಪ್ರವಾಸಿ ಕಂಪೆನಿಗಳು ಕಾಶ್ಮೀರ ಪ್ರವಾಸೋದ್ಯಮವನ್ನು ಎರಡು ವರ್ಷ ಬಹಿಷ್ಕರಿಸಬೇಕು ಎಂದು ಸಲಹೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮವನ್ನು ಬಹಿಷ್ಕರಿಸುವುದರಿಂದ ಭದ್ರತಾ ಪಡೆಗಳ ಮೇಲೆ ಕಲ್ಲುತೂರುವ ಯುವಕರು, ಮಹಿಳೆಯರು ಮತ್ತು ಮಕ್ಕಳ ಆರ್ಥಿಕ ಮೂಲಕ್ಕೆ ಹೊಡೆತ ಬೀಳಲಿದೆ ಎಂದಿದ್ದರು.

English summary
Against the backdrop of the Pulwama terrorist attack that claimed lives of 40 CRPF personnel, Meghalaya Governor Tathagata Roy on Wednesday asked the people to boycott Kashmiri goods and also urged people not to visit Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more