ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಡ್ ವಿತರಣೆ: ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿ

By Mahesh
|
Google Oneindia Kannada News

ಶಿಲ್ಲಾಂಗ್, ಫೆಬ್ರವರಿ 21: ನಟ ಅಕ್ಷಯ್ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಚಿತ್ರದ ಪ್ರಭಾವ, ವಿಧಾನಸಭೆ ಚುನಾವಣೆ ಮೇಲಾಗುತ್ತಿದೆ. ಮೇಘಾಲಯದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರರಿದ್ದು, ಮಹಿಳೆಯರಿಗೆ ಪ್ಯಾಡ್(ನ್ಯಾಪ್ ಕಿನ್) ವಿತರಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿ ನಡೆಸಿರುವ ಸುದ್ದಿ ಬಂದಿದೆ.

ಫೆಬ್ರವರಿ 27ರಂದು ಮೇಘಾಲಯದಲ್ಲಿ ಮತದಾನ ನಡೆಯಲಿದೆ. ಇಲ್ಲಿನ ಚುನಾವಣೆಯಲ್ಲಿ ವೈವಿಧ್ಯಮಯ ಪ್ರಚಾರ ಹಾಗೂ ಮತದಾರರ ಓಲೈಕೆ ವಿಧಾನವನ್ನು ಕಾಣಬಹುದಾಗಿದೆ. ಪ್ರಧಾನಿ ಮೋದಿ ಅವರೇ ಸಂಗೀತದ ಮೂಲಕ ಯುವ ಜನರನ್ನು ಸೆಳೆಯಲು ಕರೆ ನೀಡಿದ್ದಾರೆ.

ಮೇಘಾಲಯ: ಮತದಾರರ ಮೋಡಿ ಮಾಡಲು ಮೋದಿ 'ಮ್ಯೂಸಿಕ್' ಮೇಘಾಲಯ: ಮತದಾರರ ಮೋಡಿ ಮಾಡಲು ಮೋದಿ 'ಮ್ಯೂಸಿಕ್'

ಈಗ ಅರುಣಾಚಲಂ ಮುರುಗನಾಥಮ್ ಅವರ ಜೀವನ ಆಧಾರಿತ ಚಿತ್ರ ಪ್ಯಾಡ್ ಮ್ಯಾನ್ ನಿಂದ ಸ್ಫೂರ್ತಿ ಪಡೆದ ಪಕ್ಷಗಳು, ಮಹಿಳೆಯರ ಪರ ನಿಂತಿವೆ.

PadMan effect: BJP, Congress promise free sanitary napkins to women in Meghalaya

ಕೇಂದ್ರ ಸರ್ಕಾರವು ನ್ಯಾಪ್ ಕಿನ್ ಮೇಲೆ ಜಿ ಎಸ್ ಟಿ ಹಾಕಿರುವುದನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಮುಖಂಡರು, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಉಚಿತವಾಗಿ ನ್ಯಾಪ್ ಕೀನ್ ಪಡೆಯಿರಿ ಎಂದು ಆಮಿಷ ಒಡ್ಡುತ್ತಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ಹವಾ: ತಿಳಿಯಬೇಕಾದ 8 ಸಂಗತಿ ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ಹವಾ: ತಿಳಿಯಬೇಕಾದ 8 ಸಂಗತಿ

ಇದಲ್ಲದೆ, ಕ್ರೈಸ್ತರನ್ನೇ ಹೆಚ್ಚಾಗಿ ಹೊಂದಿರುವ ಮೇಘಾಲಯದಲ್ಲಿ ಈ ಬಾರಿ ಜೇರುಸಲೇಮ್ ಗೆ ಯಾತ್ರೆ ಕಳಿಸುವ ಆಶ್ವಾಸನೆ ನೀಡಲಾಗಿದೆ. 50 ಮಂದಿ ಹಿರಿಯ ನಾಗರಿಕರಿಗೆ ಸಬ್ಸಿಡಿ ದರದಲ್ಲಿ ಜೇರುಸಲೇಮ್ ಯಾತ್ರೆ ಮಾಡಿಸಲು ಬಿಜೆಪಿ ಮುಂದಾಗಿದೆ.

ಮೇಘಾಲಯದಲ್ಲಿ ಖಾಸಿ, ಗರೋ ಹಾಗೂ ಜೈನ್ತಿಯಾ ಬುಡಕಟ್ಟು ಜನಾಂಗದ ಮಹಿಳೆಯರನ್ನು ಗುರಿಯನ್ನಾಗಿಸಿಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಪ್ರಚಾರ ಕಾರ್ಯ ನಡೆಸುತ್ತಿವೆ. ಮೇಘಾಲಯದಲ್ಲಿ 9.29 ಲಕ್ಷ ಮಹಿಳಾ ಮತದಾರರಿದ್ದರೆ, 9.12 ಪುರುಷ ಮತದಾರರಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ ಮೇಘಾಲಯ ಸಿಎಂ ಸಂಗ್ಮಾ ಎರಡು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ ಮೇಘಾಲಯ ಸಿಎಂ ಸಂಗ್ಮಾ

ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ತಂತ್ರ ಇಲ್ಲಿ ನಡೆಯುವುದಿಲ್ಲ. ಇಲ್ಲಿನ ಗ್ರಾಮೀಣ ಹಾಗೂ ಬುಡಕಟ್ಟು ಮಹಿಳೆಯರಿಗೆ ನ್ಯಾಪ್ ಕೀನ್ ಬಳಕೆ ಬಗ್ಗೆ ಅರಿವು ಮೂಡಿಸುವಷ್ಟು ಸಮಯ ಈಗ ಇಲ್ಲ ಎಂದು ಮಹಿಳಾ ಸಂಘಟನೆಯ ಮುಖ್ಯಸ್ಥರಾದ ಆಗ್ನೆಸ್ ಖಾರ್ಸಿಂಗ್ ಹೇಳಿದ್ದಾರೆ.

2013ರಲ್ಲಿ 60 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ 29 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಮತದಾನ ಫೆಬ್ರವರಿ 27ರಂದು ನಡೆಯಲಿದ್ದು, ಮಾರ್ಚ್ 03ರಂದು ಫಲಿತಾಂಶ ಹೊರಬರಲಿದೆ.

English summary
Meghalaya Assembly Elections 2018 : the Bharatiya Janata Party (BJP) and the ruling Congress have promised free sanitary napkins to women in the state, which has a higher female voter population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X