ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

LIVE: ಮೇಘಾಲಯ : ಅತಂತ್ರ ಸ್ಥಿತಿಯಲ್ಲಿ ಮೇಘಾಲಯದ ಸರ್ಕಾರ ರಚನೆ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 03: ಮೋಡಗಳಿಂದ ಆವರಿಸಿರುವ ಸುಂದರ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಮೋದಿ ಅಲೆ ಬೀಸುವುದೇ ಅಥವಾ ದಶಕಗಳಿಂದ ನೆಲೆ ನಿಂತಿರುವ ಕಾಂಗ್ರೆಸ್ಸಿನ ಹಸ್ತಕ್ಕೆ ಮತ್ತೊಮ್ಮೆ ಮತದಾರರು ತಲೆ ಬಾಗುವರೇ ಫಲಿತಾಂಶ ಶನಿವಾರದಂದು ಪ್ರಕಟವಾಗಲಿದೆ.

Meghalaya Elections 2018 Results Live Updates

ಮೇಘಾಲಯ ಅಸೆಂಬ್ಲಿ ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಸ್ ಇಲ್ಲಿದೆ...

Newest FirstOldest First
3:27 PM, 3 Mar

3 ಗಂಟೆಗೆ ಫಲಿತಾಂಶ ಗೆಲುವುಸ : 29/59 : ಕಾಂಗ್ರೆಸ್ 11, ಎನ್ ಪಿಪಿ 5, ಬಿಜೆಪಿ 2
3:24 PM, 3 Mar

ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಸ್ಥಾಪಕ ಪಿ.ಎ ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ ಹಾಗೂ ಪುತ್ರ ಜೇಮ್ಸ್ ಸಂಗ್ಮಾ ಇಬ್ಬರು ಕ್ರಮವಾಗಿ ಡೌತ್ ಟುರಾ ಹಾಗೂ ಡಡೆಂಗ್ರೆ ಕ್ಷೇತ್ರಗಳಿಂದ ಜಯಭೇರಿ.
3:23 PM, 3 Mar

ಸಿಎಂ ಮುಕುಲ್ ಸಂಗ್ಮಾ ಅವರು ಅಂಪತಿ ಹಾಗೂ ಸಂಗ್ಸಾಕ್ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ.
3:23 PM, 3 Mar

ಮುಕುಲ್ ಸಂಗ್ಮಾ ಪತ್ನಿ ಡಿಕಾಂಚಿ ಡಿ ಶಿರಾ ಅವರು ಮಹೇಂದ್ರ ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರೇಮಾನಂದ್ ಕೋಚ್ ವಿರುದ್ಧ 6 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.
2:08 PM, 3 Mar

ಅತಂತ್ರ ಸ್ಥಿತಿಯಲ್ಲಿ ಮೇಘಾಲಯದ ಸರ್ಕಾರ ರಚನೆ
1:33 PM, 3 Mar

ಮೇಘಾಲಯ ಟ್ರೆಂಡ್, ಮುನ್ನಡೆ: ಕಾಂಗ್ರೆಸ್ 21, ಎನ್ ಪಿಪಿ 18, ಬಿಜೆಪಿ 03, ಯುಡಿಪಿ 6 ಹಾಗೂ ಇತರೆ 11
11:46 AM, 3 Mar

ಮೇಘಾಲಯ : ಮುಕುಲ್ ಸಂಗ್ಮಾ(ಕಾಂಗ್ರೆಸ್) ಗೆ ಸಂಗ್ಸಾಕ್ ನಲ್ಲಿ ಗೆಲುವು. ಚೆರಾಕ್ ಮೊಮಿನ್ (ಕಾಂಗ್ರೆಸ್) ಗೆ ಖಾರ್ಕುಟ್ಟದಲ್ಲಿ ಗೆಲುವು, ಎನ್ ಪಿಪಿಯ ಪೊಗ್ಸೆಂಗ್ ಮರಾಕ್ ಗೆ ಬಜೆಂಗ್ದೊಬಾದಲ್ಲಿ ಗೆಲುವು
Advertisement
9:55 AM, 3 Mar

ಮುನ್ನಡೆ ಟ್ರೆಂಡ್ : ಕಾಂಗ್ರೆಸ್ಸಿಗೆ 7; ಯುಡುಪಿ 3; ಎನ್ ಪಿಪಿ 2; ಬಿಜೆಪಿ 1; ಇತರೆ 3
9:07 AM, 3 Mar

ಶಿಲ್ಲಾಂಗ್ ನ ಪೋಲೋ ಮೈದಾನದ ಬಳಿ ದೊಡ್ಡ ಪರದೆಯಲ್ಲಿ ಫಲಿತಾಂಶ ವೀಕ್ಷಣೆಗೆ ಸೇರಿರುವ ಜನ ಸಂದಣಿ
7:20 AM, 3 Mar

ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರದ ಹಾಲಿ ವಿಧಾನಸಭೆಯ ಕಾಲಾವಧಿ ಕ್ರಮವಾಗಿ ಮಾರ್ಚ್ 6, 13 ಮತ್ತು 14 ರಂದು ಅಂತ್ಯಗೊಳ್ಳಲಿದೆ.
7:18 AM, 3 Mar

ಕಳೆದ 10 ವರ್ಷಗಳಿಂದ ಇಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
7:17 AM, 3 Mar

ಬಿಜೆಪಿ 60 ಸ್ಥಾನಗಳ ಪೈಕಿ 47 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಜತೆ ಮೈತ್ರಿ ಹೊಂದಿರುವ ಪಿ.ಎ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ 52 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದಿದೆ.
Advertisement
7:11 AM, 3 Mar

ಮೇಘಾಲಯದಲ್ಲಿ 60 ವಿಧಾನಸಭಾ ಸ್ಥಾನಗಳಿವೆ. ಮೇಘಾಲಯ, ತ್ರಿಪುರಾ ಹಾಗೂ ನಾಗಾಲ್ಯಾಂಡ್ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 03ರಂದು ಪ್ರಕಟವಾಗಲಿದೆ.
7:07 AM, 3 Mar

ಒಟ್ಟು 18.09 ಲಕ್ಷ ಮತದಾರರ ಪೈಕಿ 3.5 ಲಕ್ಷ ಮಂದಿಗೂ ಅಧಿಕ ಮತದಾರರು ಮತ ಚಲಾಯಿಸಿದ್ದರು.
7:03 AM, 3 Mar

ಫೆಬ್ರವರಿ 27ರಂದು ಮೇಘಾಲಯದ ಅಸೆಂಬ್ಲಿಗೆ ಶೇ 75ರಷ್ಟು ಮತದಾನ ದಾಖಲಾಗಿತ್ತು.

English summary
Meghalaya Elections 2018 Results Live Updates : The ruling Congress, which had won 29 seats in the 2013 elections fielded 59 candidates. BJP is fighting election alone in 47 constituencies. PA Sangma's NPP is contesting in 52 constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X