ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಟ್ಟ ಮೊದಲ ಆಯುಷ್ಮಾನ್ ಭಾರತ್ ಬೇಬಿ ಹೆಸರು ಕರಿಷ್ಮಾ

By Mahesh
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 03: 72ನೇ ಸ್ವಾತಂತ್ರ್ಯ ದಿನ ಸಂಭ್ರಮಾಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಮಹತ್ವದ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಪ್ರಯೋಜನ ಪಡೆದ ಮೊದಲ ಮಗುವನ್ನು ಪತ್ತೆ ಹಚ್ಚಲಾಗಿದೆ.

ಆಗಸ್ಟ್ 17ರಂದು ಹರ್ಯಾಣದ ಕರ್ನಾಲ್ ಜಿಲ್ಲೆಯಲ್ಲಿ ಜನಿಸಿದ ಹೆಣ್ಣುಶಿಶುವಿಗೆ ಈಗ ಸೆಲೆಬ್ರಿಟಿ ಸ್ಥಾನ ಮಾನ ಸಿಗುತ್ತಿದೆ. ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಮಿಷನ್ ಅಥವಾ ಆಯುಷ್ಮಾನ್ ಭಾರತ್ ಅಥವಾ ಮೋದಿ ಕೇರ್ ಯೋಜನೆಯ ಮೊದಲ ಫಲಾನುಭವಿಯಾದ ಹೆಣ್ಣು ಶಿಶುವಿಗೆ ಕರಿಷ್ಮಾ ಎಂದು ಹೆಸರಿಡಲಾಗಿದೆ.

ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂದರೇನು? ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂದರೇನು?

ಪಿಎಂಜೆಎವೈ ಯೋಜನೆಯಡಿಯಲ್ಲಿ ಶಿಶು ಕರಿಷ್ಮಾಳ ತಂದೆ ಅಮಿತ್ ಕುಮಾರ್ ಅವರಿಗೆ 9,000 ರು ಮರು ಪಾವತಿಯಾಗಿದೆ. ಪ್ರಧಾನಿ ಮಂತ್ರಿಗಳು ಘೋಷಿಸಿದ ಈ ಯೋಜನೆಯ ಮೊದಲ ಪ್ರಯೋಜನ ಪಡೆದ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿ ಈ ಯೋಜನೆ ಬಗ್ಗೆ ಘೋಷಣೆ ಹೊರಡಿಸುತ್ತಿದ್ದಂತೆ, ಹರ್ಯಾಣದಲ್ಲಿ 26 ಆಸ್ಪತ್ರೆಗಳಲ್ಲಿ ಈ ಯೋಜನೆ ಸದ್ಯಕ್ಕೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು.

ಅಮಿತ್ ಅವರ ಪತ್ನಿ ಮೌಸಮಿ ಅವರು ಆಗಸ್ಟ್ 15ರಂದು ಆಸ್ಪತ್ರೆ ಸೇರಿ, ಆಗಸ್ಟ್ 17ರಂದು ಮಗುವಿನ ಜನ್ಮ ನೀಡಿದರು.

ನಾವು ನಿಲ್ಲುವುದಿಲ್ಲ, ಬಾಗುವುದಿಲ್ಲ, ದಣಿಯುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ ನಾವು ನಿಲ್ಲುವುದಿಲ್ಲ, ಬಾಗುವುದಿಲ್ಲ, ದಣಿಯುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಸೆಪ್ಟೆಂಬರ್ 25ರಂದು ಪಂಡಿತ್ ದೀನ ದಯಾಳ್ ಉಪಾಧ್ಯಾಯ್ ಹುಟ್ಟುಹಬ್ಬದ ಅಂಗವಾಗಿ ಜನ ಆರೋಗ್ಯ ಯೋಜನೆ ಜಾರಿಗೆ ಬರಲಿದೆ.

ಆಯುಷ್ಮಾನ್ ಭಾರತ್ ಮೊದಲ ಹಂತ

ಆಯುಷ್ಮಾನ್ ಭಾರತ್ ಮೊದಲ ಹಂತ

ಮೊದಲ ಹಂತದಲ್ಲಿ ಈ ಯೋಜನೆ, ಹರ್ಯಾಣ, ಛತ್ತೀಸ್​​ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ದಮನ್ ಮತ್ತು ದಿಯು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜಾರಿಯಾಗಲಿದೆ. ಅನೇಕ ರಾಜ್ಯಗಳಲ್ಲಿ ಸದ್ಯಕ್ಕೆ ಪ್ರಾಯೋಗಿಕವಾಗಿ ಜಾರಿಗೊಂಡಿದೆ.

ಹೆಣ್ಣುಶಿಶುವಿಗೆ ಈಗ ಸೆಲೆಬ್ರಿಟಿ ಸ್ಥಾನ ಮಾನ

ಹೆಣ್ಣುಶಿಶುವಿಗೆ ಈಗ ಸೆಲೆಬ್ರಿಟಿ ಸ್ಥಾನ ಮಾನ

ಅಮಿತ್ ಅವರ ಪತ್ನಿ ಮೌಸಮಿ ಅವರು ಆಗಸ್ಟ್ 15ರಂದು ಆಸ್ಪತ್ರೆ ಸೇರಿ, ಆಗಸ್ಟ್ 17ರಂದು ಮಗುವಿನ ಜನ್ಮ ನೀಡಿದರು.ಆಗಸ್ಟ್ 17ರಂದು ಹರ್ಯಾಣದ ಕರ್ನಾಲ್ ಜಿಲ್ಲೆಯಲ್ಲಿ ಜನಿಸಿದ ಹೆಣ್ಣುಶಿಶುವಿಗೆ ಈಗ ಸೆಲೆಬ್ರಿಟಿ ಸ್ಥಾನ ಮಾನ ಸಿಗುತ್ತಿದೆ. ಪಿಎಂಜೆಎವೈ ಯೋಜನೆಯಡಿಯಲ್ಲಿ ಶಿಶು ಕರಿಷ್ಮಾಳ ತಂದೆ ಅಮಿತ್ ಕುಮಾರ್ ಅವರಿಗೆ 9,000 ರು ಮರು ಪಾವತಿಯಾಗಿದೆ.

50 ಕೋಟಿ ಜನರಿಗೆ ಉಪಯೋಗ

50 ಕೋಟಿ ಜನರಿಗೆ ಉಪಯೋಗ

* ಆಯುಷ್ಮಾನ್ ಭಾರತ್ ಯೋಜನೆಯಿಂದ ಸುಮಾರು 50 ಕೋಟಿ ಜನರಿಗೆ ಅಥವಾ 10 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. * ವಾರ್ಷಿಕವಾಗಿ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ರೂ. 1200 ಕೋಟಿ ಮೀಸಲು ಈಡಲಾಗಿದೆ. ಈ ಯೋಜನೆಯ ಆರೋಗ್ಯದ ಭಾಗವಾಗಿ ಆರೋಗ್ಯ ಕ್ಷೇಮ ಕೇಂದ್ರಗಳಿಗೆ ರೂ. 1200 ಕೋಟಿ ಮೀಸಲಿಡಲಾಗಿದೆ.

ಆರೋಗ್ಯ ಯೋಜನೆಗೂ ಇದೆ ವಿರೋಧ

ಆರೋಗ್ಯ ಯೋಜನೆಗೂ ಇದೆ ವಿರೋಧ

ಪ್ರಸಕ್ತ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಕೇವಲ ಬಡ ಭಾರತೀಯ ಕುಟುಂಬಗಳಿಗೆ 30,000 ರೂ. ಮಾತ್ರ ಒದಗಿಸುತ್ತಿದೆ.ತಮಿಳುನಾಡು, ಒಡಿಶಾ, ಪಂಜಾಬ್​, ಕೇರಳ, ಮಹಾರಾಷ್ಟ್ರ, ಕರ್ನಾಟಕ ಹಾಗೂ ನವದೆಹಲಿ ಈ ಯೋಜನೆಗೆ ಒಳಪಡುವುದಿಲ್ಲ. ತದನಂತರ ಈ ರಾಜ್ಯಗಳು ಈ ಯೋಜನೆಗೆ ಒಳಪಡುವ ಸಾಧ್ಯತೆಯಿದೆ. ಒಡಿಶಾ ಹಾಗೂ ತಮಿಳುನಾಡು ವಿರೋಧ ವ್ಯಕ್ತಪಡಿಸಿವೆ

English summary
At the Kalpana Chawla Hospital in Haryana's Karnal district, a baby girl was born, just two days after Prime Minister Narendra Modi rolled out the National Health Protection Mission or the Ayushman Bharat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X