ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷ ಹೊಸದಾಗಿ 10 ಸಾವಿರ ಪಿಜಿ ವೈದ್ಯಕೀಯ ಸೀಟುಗಳು

|
Google Oneindia Kannada News

ನವದೆಹಲಿ, ಜನವರಿ 26: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗೆ ಹೆಚ್ಚುವರಿ 10 ಸಾವಿರ ಸೀಟುಗಳು ಸೇರ್ಪಡೆಯಾಗುತ್ತಿವೆ.

ಭಾರತೀಯ ವೈದ್ಯಕೀಯ ಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 10 ಸಾವಿರ ಪಿಜಿ ಸೀಟುಗಳು ದೊರೆಯಲಿವೆ.

ಈ ಹೆಚ್ಚಳದಿಂದ ಭಾರತದಲ್ಲಿನ ಒಟ್ಟಾರೆ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಸಂಖ್ಯೆ 33 ಸಾವಿರಕ್ಕೆ ಏರಿಕೆಯಾಗಲಿದೆ.

medical

ಸದ್ಯಕ್ಕೆ ಈ 23 ಸಾವಿರ ವೈದ್ಯಕೀಯ ಸ್ನಾತಕೋತ್ತರ ಹಾಗೂ 68,500 ಎಂಬಿಬಿಎಸ್ ಸೀಟುಗಳು ಭಾರತಲ್ಲಿ ಲಭ್ಯವಿದೆ. ಈ ಎರಡೂ ಸೀಟುಗಳ ಸಂಖ್ಯೆ ಕಡಿಮೆಯಿರುವ ಹಿನ್ನೆಲೆಯಲ್ಲಿ ಭಾರತವು ತಜ್ಞ ವೈದ್ಯರ ವಿಭಾಗದಲ್ಲಿ ಶೇ.86 ರಷ್ಟು ಕೊರತೆ ಹೊಂದಿದೆ.

ಈಗ ಪಿಜಿ ಸೀಟುಗಳ ಸಂಖ್ಯೆ ಹೆಚ್ಚಳದಿಂದ ಈ ಕೊರತೆ ಪ್ರಮಾಣ ತಗ್ಗಲಿದೆ. ತಜ್ಞ ವೈದ್ಯರ ಕೊರತೆ ನೀಗಿಡುವ ನಿಟ್ಟಿನಲ್ಲಿ ಶೀಘ್ರ ಸೀಟುಗಳ ಹೆಚ್ಚಳಕ್ಕೆ ವೈದ್ಯಕೀಯ ಮಂಡಳಿಗೆ ನೀತಿ ಆಯೋಗ ಶಿಫಾರಸು ಮಾಡಿತ್ತು.

ಗ್ರಾಮೀಣ ಸೇವೆಗೆ ಒತ್ತು: ಸ್ನಾತಕೋತ್ತರ ಕೋರ್ಸ್‌ಗಳನ್ನು ಮುಗಿಸಿದ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆಗಳಲ್ಲಿ ಆರಂಭದಲ್ಲಿ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದರಿಂದಾಗಿ ಜಿಲ್ಲಾಸ್ಪತ್ರೆಗಳಲ್ಲಿ ನುರಿತ ವೈದ್ಯರ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಗ್ರಾಮೀಣ ಆರೋಗ್ಯ ಸೇವೆ ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂದು ನೀತಿ ಆಯೋಗ ಹೇಳಿದೆ.

English summary
Medical Post Graduate students will get 10 thousand more seats from this academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X