ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ ಪವಾಡ... ಈ ಪುರುಷ 2 ಮಕ್ಕಳ ತಾಯಿ!

By Kiran B Hegde
|
Google Oneindia Kannada News

ಲಕ್ನೋ, ಫೆ. 9: ಆಕೆ ದೈಹಿಕವಾಗಿ ಹೊರಗೆ ಮಹಿಳೆಯಂತೆ ಕಾಣಿಸುತ್ತಾಳೆ. ಆದರೆ, ದೇಹದೊಳಗೆ ಪುರುಷನ ಅಂಶಗಳನ್ನು ಹೊಂದಿದ್ದಾಳೆ. ಈ 32 ವರ್ಷ ವಯಸ್ಸಿನ ಮಹಿಳೆ ಎಂದಿಗೂ 'ಕೌಮಾರ್ಯಾವಸ್ಥೆ' ಹೊಂದಲಿಲ್ಲ. ಆದರೂ ಅವಳಿ-ಜವಳಿ ಮಕ್ಕಳಿಗೆ ತಾಯಿಯಾಗಿದ್ದಾಳೆ! ಅವುಗಳಲ್ಲಿ ಒಂದು ಹೆಣ್ಣು ಮತ್ತೊಂದು ಗಂಡು, ಎರಡೂ ಆರೋಗ್ಯವಾಗಿವೆ.

ಇಂತಹ ವೈದ್ಯಕೀಯ ಪವಾಡವೊಂದು ಜರುಗಿರುವುದು ಉತ್ತರ ಪ್ರದೇಶದ ಮೀರತ್ ಆಸ್ಪತ್ರೆಯಲ್ಲಿ. ಈ ಅಚ್ಚರಿಯ ಕುರಿತು ವೈದ್ಯರು, "ಇದು ಪುರುಷನೋರ್ವ ಎರಡು ಮಕ್ಕಳಿಗೆ ಜನ್ಮ ನೀಡಿದಂತೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಆಕೆಯಲ್ಲಿ ಪುರುಷರ ವರ್ಣತಂತುಗಳು ಅತಿಯಾಗಿದ್ದವು. ಅಲ್ಲದೆ, ಮಹಿಳೆಯಂತೆ ಸಂತಾನೋತ್ಪತ್ತಿ ಅಂಗವಿದ್ದರೂ ಸಂಪೂರ್ಣ ಕಾರ್ಯರಹಿತವಾಗಿತ್ತು. ಇದಕ್ಕಿಂತ ಹೆಚ್ಚಾಗಿ ಆಕೆ ಎಂದಿಗೂ ಕೌಮಾರ್ಯಾವಸ್ಥೆ ಹೊಂದಿರಲಿಲ್ಲ. ತಾಯಿಯಾಗಲು ಇದ್ದ ಒಂದೇ ಅವಕಾಶ ಎಂದರೆ ಆಕೆಯಲ್ಲಿ ಗರ್ಭಾಶಯ ಶೈಶವಾವಸ್ಥೆಯಲ್ಲಿತ್ತು. [ಸರ್ಕಾರ ಒಪ್ಪಿದ ವೈದ್ಯರ ಬೇಡಿಕೆಗಳು]

doctor

ಈ ಎಲ್ಲ ಕಾರಣಗಳಿಂದ ಆಕೆ ತಾಯಿಯಾಗುವ ಕುರಿತು ವೈದ್ಯರು ಯಾವುದೇ ಭರವಸೆ ನೀಡಿರಲಿಲ್ಲ. ಆದರೂ ಪ್ರಯತ್ನಿಸಿ ನೋಡುವ ತತ್ವ ಅನುಸರಿಸಲು ವೈದ್ಯರಾದ ಡಾ. ಅಂಶು ಜಿಂದಾಲ್ ಹಾಗೂ ಡಾ. ಸುನಿಲ್ ಜಿಂದಾಲ್ ಬಂದರು. [ವೈದ್ಯಕೀಯ ಕೋರ್ಸ್ ಅವಧಿ ಕಡಿಮೆಯಾಗಬೇಕೆ?]

"ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯಲ್ಲಿ ಪುರುಷ ವರ್ಣತಂತು ಇರುವುದನ್ನು ನಾವು ಪತ್ತೆಹಚ್ಚಿದ್ದೆವು. ಆದ್ದರಿಂದ ಐವಿಎಫ್ ತಂತ್ರಜ್ಞಾನದಿಂದ ಆಕೆ ಮಗು ಪಡೆಯಲು ಅನುವಾಗುವಂತೆ ಚಿಕಿತ್ಸೆ ನೀಡಿದೆವು. ಆಕೆ ಗರ್ಭ ಧರಿಸಿದ ನಂತರ ಸಂಪೂರ್ಣ ವೈದ್ಯಕೀಯ ಪರಿಶೀಲನೆಯಲ್ಲಿಡಲಾಯಿತು. ಈ ಎಲ್ಲದರ ಪರಿಣಾಮವಾಗಿ ಆಕೆ ಶುಕ್ರವಾರ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಇದೊಂದು ವೈದ್ಯಕೀಯ ಕ್ಷೇತ್ರದಲ್ಲಿಯೇ ಅತ್ಯಂತ ಅಪರೂಪದ ಘಟನೆ ಎಂದು ಹಲವು ವೈದ್ಯರು ಪ್ರತಿಕ್ರಿಯಿಸಿದ್ದಾರೆ.

English summary
A 32-year-old ‘Genetically male' woman has given birth to twins in a hospital of Meerat. The doctor who has shaped this miracle in the Meerut hospital said that it is equivalent to 'a male giving birth to children'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X