ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ: ಆದಿತ್ಯನಾಥ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಮಾಂಸದಂಗಡಿಗಳಿಗೆ ಬೆಂಕಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲು ಮುಂದಾಗಿದೆ. ಇದರ ಬೆನ್ನಲ್ಲೇ ಗುಂಪೊಂದು ಹಥ್ರಾಸ್ ನಲ್ಲಿ ಮಾಂಸದಂಗಡಿಗಳಿಗೆ ಬೆಂಕಿ ಇಟ್ಟಿದೆ.

By ಅನುಶಾ ರವಿ
|
Google Oneindia Kannada News

ಲಕ್ನೊ, ಮಾರ್ಚ್ 22: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲು ಮುಂದಾಗಿದೆ. ಇದರ ಬೆನ್ನಲ್ಲೇ ಗುಂಪೊಂದು ಹಥ್ರಾಸ್ ನಲ್ಲಿ ಮಾಂಸದಂಗಡಿಗಳಿಗೆ ಬೆಂಕಿ ಇಟ್ಟಿದೆ.

ಗೋ ರಕ್ಷಕರು ಈ ಅಂಗಡಿಗಳಿಗೆ ಬೆಂಕಿ ಇಟ್ಟಿರಬಹುದು ಎನ್ನಲಾಗಿದೆ. ಆದರೆ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೂರೇ ದಿನಗಳಲ್ಲಿ ಈ ಎಲ್ಲಾ ಘಟನೆಗಳು ನಡೆಯುತ್ತಿವೆ.[ರಾಮಮಂದಿರ ನಿರ್ಮಾಣ: ಸಿಎಂ ಯೋಗಿ ಕೈಲಿದೆ 'ಪವರ್' ಅಸ್ತ್ರ]

Meat shops vandalised in Uttar Pradesh's Hathras

ಆದಿತ್ಯನಾಥ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚುವುದಾಗಿ ಹೇಳಿದ್ದರು. ಸರಕಾರ ಸ್ಪಷ್ಟವಾಗಿ ಅಕ್ರಮ ಕಸಾಯಿಖಾನೆಗಳನ್ನು ಮಾತ್ರ ಮುಚ್ಚುವುದಾಗಿ ಹೇಳಿತ್ತು. ಆದರೆ ಶಂಕಿತ ಗೋ ರಕ್ಷಕರು ಇದೀಗ ಮಾಂಸದಂಗಡಿಗಳಿಗೆ ಬೆಂಕಿ ಇಟ್ಟಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು ಯಾರಾದರೂ ಮುಂದೆ ಬಂದು ದೂರು ದಾಖಲಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.[ಉ.ಪ್ರ: ಗೋಮಾಂಸ ಮಾರಾಟ ಅಂಗಡಿಗಳ ಮೇಲೆ ಪೊಲೀಸರ ದಾಳಿ]

ಇದೇ ವೇಳೆ ಸ್ಥಳೀಯ ಸಂಸ್ಥೆಗಳು ಅಕ್ರಮ ಕಸಾಯಿಖಾನೆಗಳಿಗೆ ನೊಟೀಸ್ ನೀಡುವ ಕೆಲಸದಲ್ಲಿ ನಿರತವಾಗಿದ್ದು, ಮುಚ್ಚಲು ಅಣಿಯಾಗಿವೆ. ಈಗಾಗಲೇ ಗಾಝಿಯಾಬಾದ್ ನಲ್ಲಿ 20 ಮಾಂಸದಂಗಡಿಗಳನ್ನು ಮಂಗಳವಾರ ಮುಚ್ಚಲಾಗಿದೆ.

ಅಕ್ರಮ ಕಸಾಯಿಖಾನೆಗಳನ್ನು ಮತ್ತು ಅಂಗಡಿಗಳನ್ನು ಮುಚ್ಚುವುದರ ಜತೆಗೆ ಜಾನುವಾರುಗಳ ಕಳ್ಳ ಸಾಗಣೆಯ ಮೇಲೆಯೂ ಕಣ್ಣಿಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. (ಒನ್ ಇಂಡಿಯಾ ಸುದ್ದಿ)

English summary
Even as BJP government began its crackdown on illegal slaughterhouses in Uttar Pradesh, a mob set several meat shops in UP's Hathras ablaze on Tuesday night. Suspected cow vigilantes set shops on fire and indulged in vandalism but police claim that no complaints have been filed so far in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X