ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

India China border- ಅತಿಕ್ರಮಿತ ಪ್ರದೇಶದಲ್ಲಿ ಚೀನೀ ನಿರ್ಮಿತ ಸೇತುವೆಗಳು: ಭಾರತ ಸ್ಪಷ್ಟನೆ

|
Google Oneindia Kannada News

ಲಡಾಖ್, ಮೇ 21: ಎರಡು ವರ್ಷಗಳಿಂದ ಲಡಾಖ್ ಗಡಿಭಾಗದಲ್ಲಿ ಉದ್ವಿಗ್ನ ಸ್ಥಿತಿಗೆ ಕಾರಣವಾಗಿರುವ ವಿವಾದಿತ ಪ್ಯಾಂಗೋಂಗ್ ತ್ಸೋ ಸರೋವರದಲ್ಲಿ ಚೀನಾ ಎರಡನೇ ಸೇತುವೆ ಕಟ್ಟುತ್ತಿದೆ. ಎರಡೂ ಸೇತುವೆಗಳು ಅಕ್ರಮ ಕಟ್ಟಡ ಎಂಬಂತಹ ವರದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪ್ಯಾಂಗಾಂಗ್ ಟ್ಸೋ ಸರೋವರದಲ್ಲಿ ಚೀನಾದಿಂದ ಸೇತುವೆ ನಿರ್ಮಿಸಲಾಗುತ್ತಿರುವ ಸಂಗತಿ ನಿಜ ಎಂದು ಕೇಂದ್ರ ಸರಕಾರ ಕೂಡ ಖಚಿತಪಡಿಸಿದೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, 1960ರ ದಶಕದಿಂದಲೂ ಚೀನಾ ಅತಿಕ್ರಮಿಸಿಕೊಂಡಿರುವ ಜಾಗದಲ್ಲಿ ಈ ಎರಡು ಸೇತುವೆಗಳು ಇವೆ. ಈ ಕಟ್ಟಡಗಳನ್ನು ಭಾರತ ಮಾನ್ಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

"ಪ್ಯಾಂಗೋಂಗ್ ಲೇಕ್‌ನಲ್ಲಿ ಚೀನಾದಿಂದ ಸೇತುವೆ ನಿರ್ಮಿಸಲಾಗುತ್ತಿರುವ ಬಗ್ಗೆ ವರದಿಗಳನ್ನು ನೋಡಿದ್ದೇವೆ. ಈ ಎರಡೂ ಸೇತುವೆಗಳು 1960ರ ದಶಕದಿಂದಲೂ ಚೀನಾ ಅತಿಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿವೆ. ನಮ್ಮ ಭೂಭಾಗದ ಅತಿಕ್ರಮಣವನ್ನು ನಾವು ಎಂದೂ ಒಪ್ಪಿಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಹೇಳಿಕೆ ನೀಡಿದ್ದಾರೆ.

ಚೀನಾ ಗಡಿಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಭಾರತೀಯ ಸೇನಾ ಪಡೆ ನಿಯೋಜನೆಚೀನಾ ಗಡಿಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಭಾರತೀಯ ಸೇನಾ ಪಡೆ ನಿಯೋಜನೆ

ವಾಸ್ತವ ಗಡಿ ನಿಯಂತ್ರಣ ರೇಖೆಗಿಂತ 20 ಕಿಮೀ ಗೂ ದೂರದಷ್ಟು ಭಾರತದ ಭೂಭಾಗದೊಳಗೆ ಚೀನಾ ಸೇತುವೆ ಕಟ್ಟಿದೆ. ಈ ವರ್ಷದ ಆರಂಭದಲ್ಲಿ ಚೀನಾ ಮೊದಲ ಸೇತುವೆ ನಿರ್ಮಿಸಿತ್ತು. ಈಗ ಎರಡನೇ ಸೇತುವೆ ಕಟ್ಟಲಾಗುತ್ತಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದಿದೆ.

ಹೊಸ ಮಾಹಿತಿ ಸಿಕ್ಕರೆ ತಿಳಿಸುತ್ತೇವೆ

ಹೊಸ ಮಾಹಿತಿ ಸಿಕ್ಕರೆ ತಿಳಿಸುತ್ತೇವೆ

"ಎರಡನೇ ಸೇತುವೆ ಎಂದು ಭಾವಿಸಲಾಗಿರುವ ಈ ಕಟ್ಟಡ ಏನೆಂದು ಗೊತ್ತಿಲ್ಲ. ಇದು ಮೊದಲ ಸೇತುವೆಯ ವಿಸ್ತರಣೆಯೋ ಅಥವಾ ಎರಡನೇ ಸೇತುವೆಯೋ ಸ್ಪಷ್ಟವಾಗಿಲ್ಲ. ಸೇನೆಯ ದೃಷ್ಟಿಯಿಂದ ನಾನು ಈ ಬಗ್ಗೆ ಪ್ರಕ್ರಿಯಿಸಲು ಸಾಧ್ಯವಾಗುವುದಿಲ್ಲ. ರಕ್ಷಣಾ ಇಲಾಖೆ ಈ ಬಗ್ಗೆ ವಿವರಣೆ ನೀಡುವುದು ಸೂಕ್ತ. ನಾವು ಈ ಬೆಳವಣಿಗೆಗಳ ಬಗ್ಗೆ ನಿಗಾ ಇರಿಸಿದ್ದು, ಏನಾದರೂ ಹೊಸ ಮಾಹಿತಿ ಸಿಕ್ಕರೆ ತಿಳಿಸುತ್ತೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ ಪತ್ತೆಗೆ 12 ರಡಾರ್‌ ಖರೀದಿಸಿದ ಭಾರತೀಯ ಸೇನೆಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ ಪತ್ತೆಗೆ 12 ರಡಾರ್‌ ಖರೀದಿಸಿದ ಭಾರತೀಯ ಸೇನೆ

ಗಡಿಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗುತ್ತಿರುತ್ತದೆ

ಗಡಿಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗುತ್ತಿರುತ್ತದೆ

ಭಾರತ ಮತ್ತು ಚೀನಾ ಮಧ್ಯೆ ಇರುವ ವಾಸ್ತವ ಗಡಿ ನಿಯಂತ್ರಣ ರೇಖೆ ಎರಡೂ ದೇಶಗಳಿಗೆ ತಲೆನೋವಿನ ಸಂಗತಿಯಾಗಿದೆ. ಭಾರತ ಅಂದಾಜು ಮಾಡಿರುವ ಎಲ್‌ಎಸಿ ಒಂದು ತೆರನಾಗಿದ್ದರೆ, ಚೀನಾ ಅಂದಾಜಿನ ಎಲ್‌ಎಸಿ ಬೇರೆ ತೆರನಾಗಿದೆ. ಹೀಗಾಗಿ, ಭಾರತ ಚೀನಾ ಗಡಿಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗುತ್ತಿರುತ್ತದೆ. ಆದರೆ, ಚೀನಾ ತನ್ನ ಅಂದಾಜಿನ ಎಲ್‌ಎಸಿಯನ್ನೂ ದಾಟಿ ಭಾರತದ ಭೂಭಾಗವನ್ನು ಅತಿಕ್ರಮಿಸುತ್ತಾ ಬರುತ್ತಿದೆ ಎಂಬುದು ಭಾರತೀಯರ ಆರೋಪ. ಇಂಥದ್ದೇ ಬೆಳವಣಿಗೆಯನ್ನು ಭಾರತ ಪ್ರತಿರೋಧಿಸಿದ ಪರಿಣಾಮ ಎರಡು ವರ್ಷಗಳ ಹಿಂದೆ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಲಘು ಸಂಘರ್ಷ ಏರ್ಪಟ್ಟು ಕೊನೆಗೆ ಪೂರ್ಣಪ್ರಮಾಣದ ಯುದ್ಧ ನಡೆದೇ ಬಿಡಬಹುದು ಎಂಬ ಆತಂಕದ ಸ್ಥಿತಿಗೆ ಹೋಗಿಬಿಟ್ಟಿತ್ತು.

ಚೀನಾದಿಂದ ದುರುಪಯೋಗ

ಚೀನಾದಿಂದ ದುರುಪಯೋಗ

ಅಂದಿನ ಈ ಸಂಘರ್ಷದ ಕೇಂದ್ರಬಿಂದುವಾಗಿದ್ದು ಪ್ಯಾಂಗೋಂಗ್ ಟ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ ಪ್ರದೇಶಗಳು. ಇಲ್ಲಿಯೇ ಭಾರತ ಮತ್ತು ಚೀನಾ ಸೈನಿಕರು ಯುದ್ಧಸ್ಥಿತಿಗೆ ಹೋಗುವಂತಾಗಿದ್ದು. ಎರಡೂ ಸೇನೆಗಳ ಮಧ್ಯೆ ಸಂಧಾನಗಳಾಗಿ ಕೊನೆಗೆ 2021 ಫೆಬ್ರವರಿ ತಿಂಗಳಲ್ಲಿ ಸೈನಿಕರನ್ನು ಹಿಂಪಡೆಯಲು ನಿರ್ಧರಿಸಲಾಗಿತ್ತು. ಆದರೆ, ಚೀನಾ ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಪ್ಯಾಂಗಾಂಗ್ ಸರೋವರದಲ್ಲಿ ಸೇತುವೆ ಕಟ್ಟಿರುವುದು ತಿಳಿದುಬಂದಿದೆ.

ಎರಡನೇ ಸೇತುವೆ ಖಾಯಂ ಕಟ್ಟಡ

ಎರಡನೇ ಸೇತುವೆ ಖಾಯಂ ಕಟ್ಟಡ

ಸರೋವರದ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಮಿಲಿಟರಿ ಪಡೆಗಳು ಅಡ್ಡಾಡಲು ನೆರವಾಗುವಂತೆ ಚೀನಾ ಸೇತುವೆ ನಿರ್ಮಿಸಿದೆ ಎನ್ನಲಾಗಿದೆ. ಮೊದಲ ಸೇತುವೆ 400 ಮೀಟರ್ ಉದ್ದವಿದ್ದು, ಎಂಟು ಮೀಟರ್ ಅಗಲ ಇದೆ. ಇದು ತಾತ್ಕಾಲಿಕ ಕಟ್ಟಡ ಎಂಬ ವಾದ ಇದೆ. ಈಗ ನಿರ್ಮಿಸಲಾಗುತ್ತಿರುವ ಎರಡನೇ ಸೇತುವೆ ಖಾಯಂ ಕಟ್ಟಡವಾಗಿದೆ. ಎರಡನೇ ಸೇತುವೆ ನಿರ್ಮಾಣಕ್ಕೆ ನೆರವಾಗಲು ಅನುವಾಗುವಂತೆ ಮೊದಲ ಸೇತುವೆ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
Ministry of External Affairs confirms reports of a second bridge being built by China across Pangong Tso lake in eastern Ladakh. “both these bridges are in areas that have continued to be under the illegal occupation of China since the 1960s” said MEA spokesperson.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X