ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಗಳ ಚೆಕ್ ಇನ್ ಬ್ಯಾಗೇಜ್ ಮಿತಿ ಇಳಿಸಲು ಅನುಮತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ನಾಗರಿಕ ವಿಮಾನಯಾನ ಸಚಿವಾಲಯವು (ಎಂಸಿಎ) ದೇಶಿ ವಿಮಾನ ಪ್ರಯಾಣದಲ್ಲಿನ ಸರಕು ಸಾಗಣೆಯ ಮಿತಿಗೆ ಸಂಬಂಧಿಸಿದಂತೆ ನಿಯಮದಲ್ಲಿ ತಿದ್ದುಪಡಿ ತಂದಿದೆ. ಎಷ್ಟು ಪ್ರಮಾಣದ ಲಗೇಜ್‌ಗಳನ್ನು ಪ್ರಯಾಣಿಕರು ಕೊಂಡೊಯ್ಯಬಹುದು ಎಂಬ ಬಗ್ಗೆ ತಮ್ಮ ಆಂತರಿಕ ನೀತಿಗಳ ಮೂಲಕವೇ ನಿರ್ಧರಿಸುವ ಸ್ವಾತಂತ್ರ್ಯವನ್ನು ವಿಮಾನಯಾನ ಸಂಸ್ಥೆಗಳಿಗೆ ನೀಡಿದೆ.

ಹೊಸದಾಗಿ ಸೂಚನೆ ಹೊರಡಿಸಿರುವ ಎಂಸಿಎ, ವಿಮಾನಯಾನ ಸಂಸ್ಥೆಯ ನೀತಿಗಳಿಗೆ ಅನುಗುಣವಾಗಿ ಬ್ಯಾಗೇಜ್ ಮಿತಿಯನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದೆ. ಈ ನೋಟಿಸ್ ಬಳಿಕ ವಿಮಾನಯಾನ ಸಂಸ್ಥೆಗಳು ದೇಶದೊಳಗಿನ ಸಂಚಾರದಲ್ಲಿ ಚೆಕ್ ಇನ್ ಮಿತಿಯನ್ನು 15 ಕೆಜಿಗೆ ಇಳಿಸಲು ಅವಕಾಶ ಸಿಗಲಿದೆ.

ಭಾರತದಿಂದ ಬರುವಂತಿಲ್ಲ, ಹೋಗುವಂತಿಲ್ಲ: ಪ್ರಯಾಣಕ್ಕೆ ಸೌದಿ ಅರೇಬಿಯಾ ನಿರ್ಬಂಧ ಭಾರತದಿಂದ ಬರುವಂತಿಲ್ಲ, ಹೋಗುವಂತಿಲ್ಲ: ಪ್ರಯಾಣಕ್ಕೆ ಸೌದಿ ಅರೇಬಿಯಾ ನಿರ್ಬಂಧ

ಮೇ 25ರಂದು ಲಾಕ್‌ಡೌನ್ ಬಳಿಕ ದೇಶಿ ವಿಮಾನಗಳಲ್ಲಿನ ಚೆಕ್ ಇನ್ ಲಗೇಜ್ ಮಿತಿಯನ್ನು 20 ಕೆಜಿಗೆ ಹೆಚ್ಚಿಸಲಾಗಿತ್ತು. ಆ ಸಮಯದಲ್ಲಿ ಒಂದು ಚೆಕ್ ಇನ್ ಬ್ಯಾಗೇಜ್‌ಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು.

MCA To Change Check In Baggage Limit To 15 KG In Domestic Flights

ಮೇ 25ರಂದು ಹೊರಡಿಸಿದ್ದ ಸೂಚನೆಯಲ್ಲಿ ಹ್ಯಾಂಡ್ ಬ್ಯಾಗ್ ಜತೆಗೆ ಚೆಕ್‌ ಇನ್‌ನಲ್ಲಿ ಒಂದು ಚೀಲಕ್ಕೆ ಮಾತ್ರವೇ ಅವಕಾಶ ನೀಡಲಾಗುತ್ತದೆ ಎಂದು ಪ್ರಯಾಣಿಕರಿಗೆ ಮಾಹಿತಿ ನೀಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಹೇಳಲಾಗಿತ್ತು. ಜತೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 20 ಕೆಜಿಯಷ್ಟು ತೂಕದ ಲಗೇಜ್ ಸಾಗಿಸಲು ಅವಕಾಶ ನೀಡಲಾಗಿತ್ತು.

ಈಗ ಬ್ಯಾಗೇಜ್ ಮಿತಿಯನ್ನು 15 ಕೆಜಿಗೆ ಇಳಿಸಲು ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ಇದರಿಂದ ಸಂಸ್ಥೆಗಳು ತಮ್ಮ ಆದಾಯವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

English summary
Ministry of Civil Aviation gives freedom to airline carriers to decide on the limit of check in baggage to 15 Kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X