ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಿ 370 ರದ್ದತಿಗೆ ಬೆಂಬಲ ಸೂಚಿಸಲು ಕಾರಣ ಬಿಚ್ಚಿಟ್ಟ ಮಾಯಾವತಿ

|
Google Oneindia Kannada News

ಲಕ್ನೋ, ಆಗಸ್ಟ್ 26: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿಗೆ ಬಿಎಸ್‌ಪಿ ಯಾವ ಕಾರಣಕ್ಕಾಗಿ ಬೆಂಬಲ ಸೂಚಿಸಿತು ಎನ್ನುವುದನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಬಿಚ್ಚಿಟ್ಟಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಮಾನ್ಯತೆ ನೀಡುವ ವಿಧಿ 370ಗೆ ಅಂಬೇಡ್ಕರ್ ಬೆಂಬಲ ಇರಲಿಲ್ಲ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ರಾಹುಲ್ ಗಾಂಧಿ ವರ್ತನೆಗೆ ಮಾಯಾವತಿ ಆಕ್ರೋಶರಾಹುಲ್ ಗಾಂಧಿ ವರ್ತನೆಗೆ ಮಾಯಾವತಿ ಆಕ್ರೋಶ

ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂಬೇಡ್ಕರ್ ಅವರು ಯಾವಾಗಲೂ ದೇಶದ ಸಮಾನತೆ , ಏಕತೆ, ಅಖಂಡತೆ ಪರವಾಗಿದ್ದರು ಆದರೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ಪರವಾಗಿ ಇರಲಿಲ್ಲ ಎಂದರು.

ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?

Recommended Video

Lok Sabha Elections 2019: ಮೋದಿ ಹಾದಿಗೆ ವಿಪಕ್ಷಗಳು ಅಡ್ಡಗಾಲು ಹಾಕಲು ಸಾಧ್ಯವಾಗದಿರಲು 4 ಕಾರಣಗಳು

ಹಾಗಾಗಿ ಬಿಎಸ್‌ಪಿಯು ಕೂಡ ಈ ವಿಧಿಯನ್ನು ರದ್ದುಗೊಳಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿತು. ಬೆಂಬಲಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಕಾರಣ ಎಂದು ಹೇಳಿದರು.

69 ವರ್ಷಗಳ ಬಳಿಕ ಒಂದು ಬದಲಾವಣೆಯಾಗಿದೆ

69 ವರ್ಷಗಳ ಬಳಿಕ ಒಂದು ಬದಲಾವಣೆಯಾಗಿದೆ

ಸುಮಾರು 69 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಬದಲಾವಣೆಯೊಂದು ನಡೆದಿದೆ. ವಿಧಿ 370 ರದ್ದು ಮಾಡಿರುವುದರಿಂದ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ. ಸಹಜ ಸ್ಥಿತಿಗೆ ಬರಲು ಸಾಕಷ್ಟು ಕಾಲವಕಾಶ ಬೇಕು. ಇದಕ್ಕಾಗಿ ಸ್ವಲ್ಪ ಸಮಾಧಾನದಿಂದ ಕಾಯಬೇಕು ಎಂದು ಅವರು ಹೇಳಿದರು.

ಕಾಶ್ಮೀರಕ್ಕೆ ತೆರಳುವ ಅವಸರ ಕಾಂಗ್ರೆಸ್‌ಗೆ ಏನಿತ್ತು?

ಕಾಶ್ಮೀರಕ್ಕೆ ತೆರಳುವ ಅವಸರ ಕಾಂಗ್ರೆಸ್‌ಗೆ ಏನಿತ್ತು?

ಕಾಂಗ್ರೆಸ್ ನಾಯಕರು ಅವಸರವಸರವಾಗಿ ಕಶ್ಮೀರಕ್ಕೆ ತೆರಳುವ ಅಗತ್ಯವೇನಿತ್ತು ಎಂದು ಅಲ್ಲಿಗೆ ಹೋಗುವ ಮುನ್ನ ಸ್ವಲ್ಪ ಯೋಚನೆ ಮಾಡಬೇಕಿತ್ತು.ಅಲ್ಲಿಗೆ ಹೋಗದಿದ್ದರೆ ಒಳಿತು ಎಂದು ಸಲಹೆ ನೀಡಿದ್ದಾರೆ.

ರಾಹುಲ್‌ಗೆ ಕಾಶ್ಮೀರಕ್ಕೆ ಬರಬೇಡಿ ಎಂದು ಸರ್ಕಾರ ಮನವಿ ಮಾಡಿತ್ತು

ರಾಹುಲ್‌ಗೆ ಕಾಶ್ಮೀರಕ್ಕೆ ಬರಬೇಡಿ ಎಂದು ಸರ್ಕಾರ ಮನವಿ ಮಾಡಿತ್ತು

ಯಾವುದೇ ಕಾರಣಕ್ಕೂ ಕಾಶ್ಮೀರಕ್ಕೆ ಬರಬೇಡಿ ಎಂದು ಕಾಶ್ಮೀರ ಸರ್ಕಾರ ರಾಹುಲ್ ಗಾಂಧಿ ಹಾಗೂ ಅವರ ಆಯೋಗಕ್ಕೆ ಮೊದಲೇ ಮನವಿ ಮಾಡಿತ್ತು. ಆದರೂ ಹಠ ಮಾಡಿ ಅವರು ಕಾಶ್ಮೀರ ಏರ್‌ಪೋರ್ಟ್‌ಗೆ ಬಂದಿದ್ದರು.

ರಾಹುಲ್ ಗಾಂಧಿ ನಿಯೋಗವನ್ನು ವಾಪಸ್ ಕಳಿಸಿದ ಸರ್ಕಾರ

ರಾಹುಲ್ ಗಾಂಧಿ ನಿಯೋಗವನ್ನು ವಾಪಸ್ ಕಳಿಸಿದ ಸರ್ಕಾರ

ಜಮ್ಮು ಕಾಶ್ಮೀರ ಸರ್ಕಾರ ರಾಹುಲ್ ಗಾಂಧಿ ನಿಯೋಗವನ್ನು ಕಾಶ್ಮೀರ ಏರ್‌ಪೋರ್ಟ್‌ನಿಂದಲೇ ವಾಪಸ್ ದೆಹಲಿಗೆ ಕಳುಹಿಸಿದೆ. ಜಮ್ಮು ಕಾಶ್ಮೀರದ ಪ್ರಸ್ತುತ ಸ್ಥಿತಿಯನ್ನು ಅರಿಯಲು ರಾಹುಲ್ ಗಾಂಧಿ ಹಾಗೂ ಇನ್ನಿತರೆ ನಾಯಕರು ಕಾಶ್ಮೀರಕ್ಕೆ ಬರಲು ತುದಿಗಾಲಿನಲ್ಲಿ ನಿಂತಿದ್ದರು. ಅದಕ್ಕೂ ಮುನ್ನ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಕೂಡ ಕಾಶ್ಮೀರಕ್ಕೆ ಬಂದು ವಾಪಸ್ ತೆರಳಿದ್ದರು.

English summary
The BSP supported the cancellation of the status of Jammu and Kashmir. Reason is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X