ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

121 ವರ್ಷಗಳಲ್ಲೇ ದೇಶದಲ್ಲಿ ಎರಡನೇ ಬಾರಿ ಅತಿ ಹೆಚ್ಚು ಮಳೆ ದಾಖಲು

|
Google Oneindia Kannada News

ನವದೆಹಲಿ, ಜೂನ್ 11: ಮೇ ತಿಂಗಳಿನಲ್ಲಿ 121 ವರ್ಷಗಳಲ್ಲೇ ಎರಡನೇ ಬಾರಿ ಅತಿ ಹೆಚ್ಚು ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ಒಂದರ ನಂತರ ಒಂದರಂತೆ ಕಾಣಿಸಿಕೊಂಡ ಚಂಡಮಾರುತಗಳು ಅತಿ ಹೆಚ್ಚಿನ ಮಳೆ ದಾಖಲಾಗಲು ಕಾರಣವಾಗಿವೆ ಎಂದು ತಿಳಿಸಿದೆ.

ಈ ಮೇ ತಿಂಗಳಿನಲ್ಲಿ ಭಾರತದಲ್ಲಿ ಸರಾಸರಿ 34.18 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, 1901ರ ನಂತರ ನಾಲ್ಕನೇ ಬಾರಿ ದಾಖಲಾಗಿರುವ ಅತಿ ಕಡಿಮೆ ತಾಪಮಾನ ಇದಾಗಿದೆ ಎಂದು ತಿಳಿಸಿದೆ. 1917ರ ಮೇ ತಿಂಗಳಿನಲ್ಲಿ 32.68 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಅತ್ಯಂತ ಕಡಿಮೆ ತಾಪಮಾನ ಇದಾಗಿತ್ತು. 1977ರಲ್ಲಿ 33.84 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಆ ನಂತರ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ ಎಂದು ಐಎಂಡಿ ತಿಳಿಸಿದೆ.

 ದೇಶದ ಅರ್ಧಭಾಗಕ್ಕೆ ಈ ವಾರ ಮುಂಗಾರು: ಹವಾಮಾನ ಇಲಾಖೆ ಮಾಹಿತಿ ದೇಶದ ಅರ್ಧಭಾಗಕ್ಕೆ ಈ ವಾರ ಮುಂಗಾರು: ಹವಾಮಾನ ಇಲಾಖೆ ಮಾಹಿತಿ

2021ರ ಮೇ ತಿಂಗಳಿನಲ್ಲಿ ದೇಶಾದ್ಯಂತ 107.9 ಮಿ.ಮೀ ಮಳೆ ದಾಖಲಾಗಿದ್ದು, ದೀರ್ಘಾವಧಿ ಸರಾಸರಿ ಮಳೆಗಿಂತ 74% ಹೆಚ್ಚು ಮಳೆ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ. 1990ರಲ್ಲಿ 110.7 ಮಿ.ಮೀ ಮಳೆ ದಾಖಲಾಗಿದ್ದು, 1901ರ ನಂತರ ಎರಡನೇ ಬಾರಿ ಮೇ ತಿಂಗಳಿನಲ್ಲಿ ಅತಿ ಹೆಚ್ಚು ದಾಖಲಾಗಿದೆ.

May Records Second Highest Rainfall In 121 Years IMD

ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇ ತಿಂಗಳಿನಲ್ಲಿ ಒಂದರ ನಂತರ ಒಂದು ಕಾಣಿಸಿಕೊಂಡ ತೌಕ್ತೆ ಹಾಗೂ ಯಾಸ್ ಚಂಡಮಾರುತಗಳು ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಎರಡು ಚಂಡಮಾರುತಗಳು ಪಶ್ಚಿಮ ಹಾಗೂ ಪೂರ್ವ ಕರಾವಳಿಗಳ ಜೊತೆಗೆ ದೇಶದ ಹಲವು ಭಾಗಗಳಲ್ಲಿಯೂ ಮಳೆಗೆ ಕಾರಣವಾಗಿತ್ತು.

ಈ ಬಾರಿ ಭಾರತದ ಯಾವುದೇ ಭಾಗಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶಾಖ ಕಂಡುಬಂದಿಲ್ಲ ಎಂದು ತಿಳಿಸಿದೆ.

English summary
May received the second highest rainfall in 121 years, the India Meteorological Department (IMD) said in its monthly report Thursday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X