ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆರಿಗೆ ರಜೆ: ಮಹಿಳೆಯರಿಗೆ ಕೆಲಸ ಕೊಡಲು ಕಂಪನಿಗಳು ಹಿಂದೇಟು

By Nayana
|
Google Oneindia Kannada News

ಬೆಂಗಳೂರು, ಜೂನ್‌ , 30: ಮಹಿಳೆಯರು ಗರ್ಭಿಣಿಯರಾದರೆ ದೀರ್ಘಾವಧಿಯ ರಜೆ ಕೊಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ದೇಶದ ಕೈಗಾರಿಕೆಗಳು ಮಹಿಳೆಯರಿಗೆ ಕೆಲಸವನ್ನೇ ನೀಡಲು ಹಿಂದೇಟು ಹಾಕುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

21 ನೇ ಶತಮಾನದಲ್ಲಿ ಸ್ತ್ರೀ ಮತ್ತು ಪುರುಷ ಸರಿಸಮಾನ ಎಂದು ಜಾಗತಿಕವಾಗಿ ಹೇಳಲಾಗುತ್ತಿದ್ದರೂ ಭಾರತದಂತಹ ಪ್ರಗತಿಪರ ದೇಶದಲ್ಲಿ ಮಹಿಳೆಯರಿಗೆ 26 ವಾರಗಳ ಕಾಲ ಹೆರಿಗೆ ರಜೆ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಆ ಕುರಿತಾಗಿ ಜಾರಿಯಾದ ಕಾಯ್ದೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವ ಪ್ರಮಾಣವನ್ನೇ ಕೈಗಾರಿಕೆಗಳು ಕಡಿತಗೊಳಿಸಿವೆ.

ಹೆರಿಗೆ ರಜೆ ನಿರಾಕರಣೆ: ಕೇಂದ್ರ,ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಹೆರಿಗೆ ರಜೆ ನಿರಾಕರಣೆ: ಕೇಂದ್ರ,ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಉದಯೋಗನಿರತ ಮಹಿಳೆಯರಿಗೆ ಹೆರಿಗೆ ಪೂರ್ವದ 12 ವಾರಗಳು ಸೇರಿ ಒಟ್ಟು 26 ವಾರಗಳ ರಜೆ ಸವಲತ್ತನ್ನು ತಿದ್ದುಪಡಿ ಕಾಯ್ದೆ ನೀಡಿತು. ಭಾರತದ ಖಾಸಗಿ ವಲಯಗಳಲ್ಲಿ ದುಡಿಯುವ ಮಹಿಳೆಯರ ಪ್ರಮಾಣ ಕಡಿಮೆ ಇದೆ. 2005ರಲ್ಲಿ ಶೇ.37ರಷ್ಟಿದ್ದ ಈ ಪ್ರಮಾಣ 2013ರ ಹೊತ್ತಿಗೆ ಶೇ.27ಕ್ಕೆ ಕುಸಿತ ಕಂಡಿತ್ತು.

Maternity leave act: Decline in job opportunity for women in India

ಇದರಲ್ಲಿ ಸುಧಾರಣೆ ತರುವ ಕನಸನ್ನು ತಿದ್ದುಪಡಿ ಕಾಯ್ದೆ ಕಂಡಿತ್ತು. ಆದರೆ ಅದೆಲ್ಲಾ ಹುಸಿಯಾಗಿದೆ. ಟೀಮ್‌ಲೀಸ್‌ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿದೆ. ಕಾಯ್ದೆ ಜಾರಿಯಾದ ಬಳಿಕ ವಿತ್ತೀಯ ವರ್ಷ 2018-19ರಲ್ಲಿ ಮಹಿಳೆಯರ ಪಾಲಿನ 11 ರಿಂದ 18 ಲಕ್ಷ ದಷ್ಟು ಭಾರಿ ಪ್ರಮಾಣದ ನೇಮಕ ಕುಸಿತ ಉಂಟಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯು ವಿಮಾನಯಾನ, ಬಿಪಿಒ, ಐಟಿಇಎಸ್‌, ರಿಯಲ್‌ ಎಸ್ಟೇಟ್‌, ಶಿಕ್ಷಣ, ಇ-ಕಾಮರ್ಸ್‌, ಬಿಎಫ್‌ಎಸ್‌ಐ, ಐಟಿ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಕೈಗೊಂಡಿತ್ತು.2017ರಲ್ಲಿ ಮಹಿಳಾ ಉದ್ಯೋಗ ಸೃಷ್ಟಿ 60 ಲಕ್ಷ ಆಗಿದ್ದರೆ, ಮಹಿಳಾ ಉದ್ಯೋಗ ನಷ್ಟ ಅಂದರೆ ಉದ್ಯೋಗ ತೊರೆದರೆ ಸಂಖ್ಯೆ 50 ಲಕ್ಷ ದಾಟಿದೆ. ಇದರಲ್ಲಿ 24 ಲಕ್ಷ ಮಹಿಳಾ ಉದ್ಯೋಗಿಗಳು ನೌಕರಿ ತೊರೆದಿರುವುದು 2017ರ ಜನವರಿಯಿಂದ ಏಪ್ರಿಲ್‌ ಅವಧಿಯಲ್ಲಿ, ಈ ದಿಢೀರ್‌ ಕುಸಿತಕ್ಕೆ ನೋಟು ಅಮಾನ್ಯೀಕರಣದ ಕೊಡುಗೆಯೂ ಇದೆ ಎಂದು ಸಂಸ್ಥೆ ತಿಳಿಸಿದೆ.

English summary
After implementation of maternity act which provides 26 weeks of leave for women, companies in have back foot in providing job for women, a survey revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X