ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮಾಮಿ ಗಂಗೆ' ಯೋಜನೆ ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!

By Mahesh
|
Google Oneindia Kannada News

ಬೆಂಗಳೂರು, ಸೆ.9: ಕೇರಳದ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಪ್ರಧಾನಿ ಮೋದಿ ಅವರ ಗಂಗಾ ಶುದ್ದೀಕರಣ ಯೋಜನೆ(ನಮಾಮಿ ಗಂಗೆ)ಗೆ 100 ಕೋಟಿ ರು.ಗಳ ದೇಣಿಗೆ ನೀಡಲಾಗುವುದು ಎಂದು ಅಮ್ಮ ಎಂದೇ ಹೆಸರಾಗಿರುವ ಅಮೃತಾನಂದಮಯಿ ಮಠದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ 28, 2015ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕ್ಲೀನ್ ಗಂಗಾ ಯೋಜನೆಗೆ ಮಠದ ವತಿಯಿಂದ ನೆರವು ನೀಡುವುದಾಗಿ ಮಾತಾ ಅಮೃತಾನಂದಮಯಿ ಅವರು ಭರವಸೆ ನೀಡಿದ್ದರು.

Amritanandamayi to donate Rs 100 cr for ‘Namami Gange’ project

ಸೆ.11ರಂದು ಮಠದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಅಮೃತಾನಂದಮಯಿ ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ 100 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸುವರು ಎಂದು ತಿಳಿದು ಬಂದಿದೆ.

ಇದಲ್ಲದೆ ಗಂಗಾ ನದಿ ತಡದ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೂ ಅಮ್ಮ ಅವರ ಮಠ ನಿರ್ಧರಿಸಿದ್ದಾರೆ. ಈಗಾಗಲೇ ಮಠದ ವತಿಯಿಂದ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. ಅಮಲ ಭಾರತಂ ಕಾರ್ಯಕ್ರಮ(ಎಬಿಸಿ) ಹೆಸರಿನಲ್ಲಿ 2010ರಿಂದಲೇ ಸಾರ್ವಜನಿಕ ಆರೋಗ್ಯ ಹಾಗೂ ನೈರ್ಮಲೀಕರಣ ಯೋಜನೆಯನ್ನು ಮಾತಾ ಅಮೃತಾನಂದಮಯಿ ಮಠ ಸಾಕಾರಗೊಳಿಸುತ್ತಿದೆ.

ಮಾತಾ ಅವರ ಈ ಯೋಜನೆಗೆ ಲಕ್ಷಾಂತರ ಮಂದಿ ಸ್ವಯಂಸೇವಕರು ನೆರವು ನೀಡುತ್ತಿದ್ದು, ಶಬರಿಮಲೆಯ ಪ್ರಸಿದ್ಧ ಪಂಪಾ ನದಿ ನೈರ್ಮಲೀಕರಣಗೊಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ (ಪಿಟಿಐ)

English summary
The Mata Amritanandanmayi Math, founded by spiritual leader and humanitarian Mata Amritanandamayi Devi, will donate a whopping Rs 100 crore towards the Prime Minister’s ‘Namami Gange’ Project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X