ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ ಹೈಜಾಕ್ ಮಾಡಿದ ಮೋದಿ ಸ್ಟ್ರೋಕ್

ಇದು ಮೋದಿಯವರ ಮಾಸ್ಟರ್ ಸ್ಟ್ರೋಕ್ ಅಲ್ಲದೆ ಮತ್ತೇನು? ಜನಸಾಮಾನ್ಯರಿರಲಿ ಅವರನ್ನು ಸದಾ ಟೀಕಿಸುವ ರಾಜಕಾರಣಿಗಳು ಕೂಡ ಕಕ್ಕಾಬಿಕ್ಕಿಯಾದರು, ಕೆಲವರು ಬಾಯಿ ಬಿಡಲು ಹಿಂಜರಿದರು.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 09 : ಮಂಗಳವಾರ ಇಡೀ ಜಗತ್ತು ಅಮೆರಿಕದಲ್ಲಿ ಯಾರು ಯಾರಿಗೆ ವೋಟು ಹಾಕುತ್ತಾರೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕುಳಿತಿದ್ದರೆ, ಅದೇ ಸಮಯದಲ್ಲಿ ಇಡೀ ಜಗತ್ತಿನ ಗಮನವನ್ನು ತನ್ನೆಡೆ ಸೆಳೆದಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಟರ್ ಸ್ಟ್ರೋಕ್!

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರಾ, ಹಿಲರಿ ಕ್ಲಿಂಟನ್ ಗೆಲ್ಲುತ್ತಾರಾ ಎಂದು ಚರ್ಚೆ ನಡೆಯುತ್ತಿದ್ದರೆ, ಆ ಚರ್ಚೆಯನ್ನು ಮೀರಿ ಗಾಂಧೀಜಿ ಚಿತ್ರವಿರುವ ಭಾರತದ ನೋಟುಗಳ ಬಗ್ಗೆ ಬಿಟ್ಟುಬಿಡದಂತೆ ಚರ್ಚೆಯಾಗುವಂತೆ ಮಾಡಿದ್ದು ನರೇಂದ್ರ ಮೋದಿ ಅವರು ಬೋಲ್ಡ್ ನಡೆ.

ನರೇಂದ್ರ ಮೋದಿ ಅವರ ಭಾಷಣ ಶುರುವಾಗುತ್ತಿದ್ದಂತೆ ಭಾರತದ ಭದ್ರತಾ ವ್ಯವಸ್ಥೆಯ ಬಗ್ಗೆ ಅಥವಾ ಕಪ್ಪು ಹಣದ ಬಗ್ಗೆ ಹೇಳಿಕೆ ನೀಡಬಹುದು ಎಂದು ಪತ್ರಕರ್ತರು ಊಹಿಸಿದ್ದರು. ಆದರೆ, ಆದದ್ದೇನು? ಮಂಗಳವಾರ ರಾತ್ರಿಯಿಂದಲೇ 500 ಮತ್ತು 1000 ರು. ನೋಟುಗಳನ್ನು ನಿಷೇಧಿಸುವುದಾಗಿ ಹೇಳಿಕೆ ನೀಡಿದ್ದು, ಜನರಿಗೆ ಮಾತ್ರವಲ್ಲ ಪತ್ರಕರ್ತರಿಗೂ ಶಾಕ್ ನೀಡಿತ್ತು. [ಚಾಯ್ ವಾಲಾ ಪ್ರಧಾನಮಂತ್ರಿಯಾದರೆ ಹೀಗೇ ಆಗೋದು!]

Master stroke by Narendra Modi : How Modi Trumped over the US last night

ಈ ಘೋಷಣೆ ಇದ್ದಕ್ಕಿದ್ದಂತೆ ಸುದ್ದಿ ಬಿತ್ತರಿಸುವ ಪ್ರಿಯಾರಿಟಿಯನ್ನೇ ಅದಲುಬದಲು ಮಾಡಿತು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಕವರ್ ಮಾಡುತ್ತಿದ್ದವರು, ಅದನ್ನು ಅಲ್ಲೇ ಬಿಟ್ಟು, ರುಪಾಯಿ ಕಡೆಗೆ ತಿರುಗಿದರು. ಚುನಾವಣೆಯನ್ನು ಅಲ್ಲೇ ಬಿಟ್ಟು, ಮೋದಿ ಕ್ರಮದಿಂದ ಭಾರತದ ಜನತೆಯ ಮೇಲೆ ಆಗುವ ಪರಿಣಾಮಗಳೇನು, ಯಾರು ಏನು ಮಾಡಬೇಕು ಎಂಬಿತ್ಯಾದಿ ಸುದ್ದಿಗಳು ಬಿತ್ತರವಾಗತೊಡಗಿದವು.

ಸಾರ್ವಜನಿಕರು ಕೂಡ ಟಿವಿ ಆಫ್ ಮಾಡಿ, ಸೀರಿಯಲ್ಲನ್ನು ಅಲ್ಲೇ ಬಿಟ್ಟು, ಊಟವನ್ನು ಅರ್ಧಕ್ಕೇ ನಿಲ್ಲಿಸಿ ಎಟಿಎಂಕಡೆಗೆ ಕಾಲು ಹಾಕಿದರು. ಸರದಿಯಲ್ಲಿ ನಿಂತವರಲ್ಲಿಯೂ, ತಮ್ಮಲ್ಲಿರುವ ಹಣವನ್ನು ಬದಲಿಸಿಕೊಳ್ಳುವುದು ಹೇಗೆ, ಎಟಿಎಂನಲ್ಲಿ ಹಣವೇ ಸಿಗದಿದ್ದರೆ ಏನು ಗತಿ, 500 ಮತ್ತು 1000 ರು. ನೋಟು ಸ್ವೀಕರಿಸದಿದ್ದರೆ ಏನು ಮಾಡುವುದು ಇತ್ಯಾದಿ ಇತ್ಯಾದಿ ಮಾತುಕತೆ. [ಕಪ್ಪು ಹಣ ಮಾಲೀಕರು ರಂಗೋಲಿ ಅಡಿ ತೂರಬಹುದು, ಎಚ್ಚರ!]

ಇದು ಮೋದಿಯವರ ಮಾಸ್ಟರ್ ಸ್ಟ್ರೋಕ್ ಅಲ್ಲದೆ ಮತ್ತೇನು? ಜನಸಾಮಾನ್ಯರಿರಲಿ ಅವರನ್ನು ಸದಾ ಟೀಕಿಸುವ ರಾಜಕಾರಣಿಗಳು ಕೂಡ ಕಕ್ಕಾಬಿಕ್ಕಿಯಾದರು, ಕೆಲವರು ಬಾಯಿ ಬಿಡಲು ಹಿಂಜರಿದರು. ಇಡೀ ವಿಶ್ವವೇ ಕಣ್ಣಿಟ್ಟಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಮೋದಿ ಒಂದೇ ನಡೆಯಲ್ಲಿ ಹೈಜಾಕ್ ಮಾಡಿದ್ದು ಸಣ್ಣ ಸಂಗತಿಯೇನಲ್ಲ. [ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ]

English summary
It was expected to be a busy night and all journalists left their offices with the mindset that they would either cover or watch the US presidential elections. When almost all were speaking about whether it would Donald Trump or Hillary Clinton, an announcement came from the office of the Prime Minister. It said that the PM will address the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X