ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್‌ ಅಗತ್ಯವಿಲ್ಲ; DGHS ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಜೂನ್ 10: ಕೊರೊನಾ ಎರಡನೇ ಅಲೆ ತಗ್ಗುತ್ತಿದ್ದಂತೆ ಮೂರನೇ ಅಲೆಯಲ್ಲಿನ ಕೊರೊನಾ ಸೋಂಕಿನ ನಿರ್ವಹಣೆ ಕುರಿತು ಸಿದ್ಧತೆಗಳು ಸಾಗುತ್ತಿವೆ. ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಕೊರೊನಾ ಸೋಂಕು ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯ ಬುಧವಾರ ಹೊಸ ಮಾರ್ಗಸೂಚಿ ಹೊರಡಿಸಿದೆ.

ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಏನು ಮಾಡಬೇಕು ಎಂಬುದರ ಕುರಿತು ಈ ಹೊಸ ಮಾರ್ಗಸೂಚಿಯಲ್ಲಿ ವಿವರಣೆ ನೀಡಿದ್ದು, ಮುಖ್ಯವಾಗಿ, ಮಕ್ಕಳಿಗೆ ರೆಮ್ಡೆಸಿವಿರ್ ಔಷಧಿ ಹಾಗೂ ಎಚ್‌ಆರ್‌ಸಿಡಿ ಸ್ಕ್ಯಾನ್ ಅನ್ನು ಸುಖಾಸುಮ್ಮನೆ ಬಳಸುವಂತಿಲ್ಲ ಎಂದು ಸೂಚಿಸಿದೆ.

 ಮಕ್ಕಳಿಗೆ ಕೊರೊನಾ ಬಂದರೆ ಏನು ಮಾಡಬೇಕು; ಕೇಂದ್ರದಿಂದ ಮಾರ್ಗಸೂಚಿ ಪ್ರಕಟ ಮಕ್ಕಳಿಗೆ ಕೊರೊನಾ ಬಂದರೆ ಏನು ಮಾಡಬೇಕು; ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ಇದರೊಂದಿಗೆ ಮಕ್ಕಳಲ್ಲಿ ಮಾಸ್ಕ್ ಬಳಕೆ ಕುರಿತು ನಿರ್ದೇಶನ ನೀಡಲಾಗಿದೆ. ಕೊರೊನಾ ಸೋಂಕಿನ ಹರಡುವಿಕೆ ತಡೆಗೆ ಐದು ವರ್ಷದ ಒಳಗಿನ ಮಕ್ಕಳಿಗೆ ಮಾಸ್ಕ್‌ ಹಾಕುವಂತಿಲ್ಲ ಎಂದು ಶಿಫಾರಸ್ಸು ಮಾಡಿದೆ.

Masks Not Recommended For Children Under 5 As New DGCH Guidelines

5 ವರ್ಷದ ಒಳಗಿನ ಮಕ್ಕಳಿಗೆ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದು, 6 ವರ್ಷದಿಂದ 11 ವರ್ಷದ ಮಕ್ಕಳು ಪೋಷಕರು ಹಾಗೂ ವೈದ್ಯರ ಸಲಹೆ ಅಥವಾ ನಿಗಾದಲ್ಲಿ ಮಾಸ್ಕ್ ಧರಿಸಬಹುದು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

English summary
Wearing masks to prevent coronavirus disease is not recommended for children below five years of age, as new guidelines by Directorate general of health services,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X