ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳಯಾನ ದುಡ್ಡು ದಂಡ ಎಂದ 'ಮೂನ್ ಮ್ಯಾನ್ '

By Mahesh
|
Google Oneindia Kannada News

Mars mission is a publicity stunt: G Madhavan Nair
ಬೆಂಗಳೂರು, ನ.5: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಧನೆಗೆ ಇಡೀ ವಿಶ್ವವೇ ಅಚ್ಚರಿಯಿಂದ ಭಾರತದತ್ತ ನೋಡುತ್ತಿದೆ. ಆದರೆ, ಇದರ ಬೆನ್ನಲ್ಲೇ ಮತ್ತೊಮ್ಮೆ ಇಸ್ರೋ ವಿಜ್ಞಾನಿಗಳ ನಡುವಿನ ಆಂತರಿಕ ಕಿತ್ತಾಟ ಜಗಜ್ಜಾಹೀರಾಗಿದೆ. 'ಮೂನ್ ಮ್ಯಾನ್' ಎಂದೆ ಕರೆಯಲ್ಪಡುವ ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರು 'ಮಂಗಳಯಾನ' ಯೋಜನೆಗೆ ಹಾಕಿರುವ ಮೊತ್ತ ಎಲ್ಲವೂ ನಷ್ಟ ಎಂದಿದ್ದಾರೆ.

ಮಂಗಳಯಾನ 'ಪಬ್ಲಿಸಿಟಿ ಸ್ಟಂಟ್' ಎನ್ನಬಹುದು. ಜೀವ ಉಗಮಕ್ಕೆ ಕಾರಣವಾಗುವ ರಾಸಾಯನಿಕಗಳ ಅನ್ವೇಷಣೆ ಎಂಬುದು ಬರೀ ಮಾತಿಗಷ್ಟೇ. ಮಂಗಳದ ಅಂಗಳದಲ್ಲಿ ಮಿಥೇನ್ ಸೇರಿದಂತೆ ಯಾವುದೇ ಅಗತ್ಯ ರಾಸಾಯನಿಕಗಳಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಈ ಯೋಜನೆ ಕಡಿಮೆ ವೆಚ್ಚದ್ದು ಎಂದರೂ ಸರಿ ಸುಮಾರು 450 ಕೋಟಿ ರು ಕಡಿಮೆ ಮೊತ್ತವೇನಲ್ಲ. ಈಗಾಗಲೇ ಅಮೆರಿಕ ರೋವರ್ ಸಾಧನಗಳು ಮಂಗಳದ ಅಂಗಳದಲ್ಲಿ ಜೀವ ವಿಕಸನಕ್ಕೆ ಕಾರಣವಾಗಬಲ್ಲ ವಾತಾವರಣ ಕಂಡು ಬಂದಿಲ್ಲ ಎಂದು ಸಾರಿವೆ. ಇದೇ ವಿಷಯದ ಮೇಲೆ ಇಸ್ರೋ ಮತ್ತೆ ಹೊಸದಾಗಿ ಏನು ಸಾಧಿಸಲು ಹೊರಟಿದೆ ಗೊತ್ತಿಲ್ಲ ಎಂದು ನಾಯಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಕಡಿಮೆ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಮೊದಲ ಹಂತ ಯಶಸ್ವಿಯಾಗುತ್ತಿದ್ದಂತೆ ವಿಶ್ವದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ಆದರೆ, ಇದರ ಬೆನ್ನಲ್ಲೇ ಇಸ್ರೋ ಮಾಜಿ ಉದ್ಯೋಗಿಗಳ ಅಪಸ್ವರ ಬೇಸರ ತರಿಸಿದೆ.

ರಷ್ಯಾ, ಅಮೆರಿಕ, ಬ್ರಿಟನ್ ಸಾಲಿಗೆ ಸೇರ್ಪಡೆಯಾಗಿರುವ ಭಾರತ ಮಂಗಳಯಾನದ ಕನಸು 1969ರಿಂದ ಕಾಣುತ್ತಲೇ ಇತ್ತು. ಆದರೆ, 2013ರಲ್ಲಿ 450 ಕೋಟಿ ರು ವೆಚ್ಚದಲ್ಲಿ ಈ ಯೋಜನೆ ಸಫಲಗೊಂಡಿದೆ. 2014ರ ಸೆಪ್ಟೆಂಬರ್ ವೇಳೆಗೆ ಮಂಗಳನ ಅಂಗಳಕ್ಕೆ ಉಪಗ್ರಹ ಕಾಲಿಡುವ ನಿರೀಕ್ಷೆಯಿದೆ.

ನಾಯರ್ ಹಿಸ್ಟರಿ: ನಾಯರ್ ಅಧ್ಯಕ್ಷರಾಗಿದ್ದಾಗ ಇಸ್ರೋ ಚಂದ್ರಯಾನ ಕೈಗೊಂಡಿತ್ತು ಎಂಬುದನ್ನು ಬಿಟ್ಟರೆ ಲಕ್ಷಾಂತರ ಕೋಟಿ ರು. ಅಂತರಿಕ್ಷ್ ಹಗರಣದಲ್ಲಿ ಸಿಲುಕಿ ಜಿ. ಮಾಧವನ್ ನಾಯರ್ ಒದ್ದಾಡಿದ್ದರು. ಚಂದ್ರಯಾನ 2 ಕನಸು ನನಸಾಗುವ ಮುನ್ನವೇ ಅನಿವಾರ್ಯವಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.

ಯಾವುದೇ ಸರ್ಕಾರಿ ನೌಕರಿಗೆ ಮಾಧವನ್ ಅವರು ಅನರ್ಹ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪಟನಾ ಐಐಟಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮಾಧವನ್ ಕಳೆದ ವರ್ಷ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು.

English summary
India’s ‘Moon Man’ G Madhavan Nair has contested ISRO’s contention that the Mars orbiter “ISRO is embarking on an extravagant mission which at best can serve as a publicity stunt”, G Madhavan Nair, a former chief of the Bangalore-headquartered Indian Space Research Organisation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X