ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ನಕಲಿ ವರರಿಗೆ ಮನೇಕಾ ಗಾಂಧಿ ಬರೆ

|
Google Oneindia Kannada News

ನವದೆಹಲಿ, ನ. 7: ಮದುವೆಯಾಗಿದ್ದರೂ ಮದುವೆಯಾಗಿಲ್ಲ ವಧು ಬೇಕು ಎಂದು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ ನಲ್ಲಿ ಪ್ರೋಪೈಲ್ ಹಾಕಿಕೊಳ್ಳುವವರಿಗೆ ಬ್ರೇಕ್ ಹಾಕಲು ಕೇಂದ್ರದ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಮುಂದಾಗಿದ್ದಾರೆ.

ವೆಬ್‌ಸೈಟ್‌ ಮೂಲಕ ಸುಳ್ಳು ಹೇಳಿ ಹೆಣ್ಣು ಮಕ್ಕಳನ್ನು ವಂಚಿಸುತ್ತಿರುವವರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಭಾರತ್ ಮ್ಯಾಟ್ರಿಮನಿ, ಜೀವನ್‌ಸಾಥಿ ಡಾಟ್ ಕಾಂನಂತಹ ವೆಬ್‌ಸೈಟ್‌ಗಳ ಪ್ರತಿನಿಧಿಗಳೊಂದಿಗೆ ಮನೇಕಾ ಸಭೆ ನಡೆಸಿ ಯಾವ ಯಾವ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.[ಹುಡಗಿ ಐಕ್ಯೂ ನೋಡಿ ಮದವಿ ಆಗ್ರೀಪಾ ಮತ್ತ!]

menaka gandhi

ವೆಬ್‌ಸೈಟ್‌ಗಳಲ್ಲಿ ಭದ್ರತಾ ಅಂಶಗಳನ್ನು ಸೇರಿಸಬೇಕು. ಅಲ್ಲದೇ ನೋಂದಣಿ ಮಾಡಿಕೊಳ್ಳುವ ಮೊದಲು ಆಧಾರ್ ಕಾರ್ಡ್ ಕಡ್ಡಾಯ ಎಂಬ ನಿಯಮ ಜಾರಿ ಮಾಡಬೇಕು. ಇದರಿಂದ ವ್ಯಕ್ತಿಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ.[ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೆ?]

ವಿವಾಹ ವೆಬ್‌ಸೈಟ್‌ಗಳಿಗೆ ನೋಂದಣಿ ಮಾಡಿಕೊಳ್ಳಲು ಮೊಬೈಲ್ ಸಂಖ್ಯೆ ಸಾಕು ಎಂಬ ನಿಯಮ ಈಗ ಚಾಲ್ತಿಯಲ್ಲಿದೆ. ಆದರೆ ಇದರಿಂದ ವ್ಯಕ್ತಿ ಮದುವೆಯಾಗಿದ್ದಾನೋ? ಇಲ್ಲವೋ? ಎಂಬುದನ್ನು ಕಂಡು ಹಿಡಿಯಲು ಅಸಾಧ್ಯ. ಹಾಗಾಗಿ ಆಧಾರ್ ಸಂಖ್ಯೆ ಬಳಸಿಕೊಳ್ಳಬೇಕು ಎಂದು ಮನೇಕಾ ಸಲಹೆ ನೀಡಿದ್ದಾರೆ.

English summary
Married men posing as single, serial daters looking to hook up and stalkers on the prowl, beware. Matrimonial websites may soon set up firewalls against men who put up fake profiles.Increasing instances of women being cheated while looking for grooms online has prompted women and child development minister Maneka Gandhi to intervene.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X