ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಭೀತಿ ನಡುವೆಯೂ ಭಾರತದ ಈ ರಾಜ್ಯಗಳು ಸೇಫ್!

|
Google Oneindia Kannada News

ನವದೆಹಲಿ, ಜುಲೈ.07: ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಪ್ರತಿನಿತ್ಯ 24 ಸಾವಿರಕ್ಕಿಂತಲೂ ಹೆಚ್ಚಾಗುತ್ತಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,22,007ಕ್ಕೆ ಏರಿಕೆಯಾಗಿದ್ದು, 1661 ಹೊಸ ಪ್ರಕರಣಗಳು ಪತ್ತೆಯಾಗಿವೆ.

Recommended Video

ಬೆಂಗಳೂರಿನಿಂದ ಬರುವವರಿಗೆ ಇಲ್ಲ ಪ್ರವೇಶ | Oneindia Kannada

ಮಂಗಳವಾರದ ಕೊರೊನಾವೈರಸ್ ಸೋಂಕಿತರ ಅಂಕಿ-ಅಂಶವನ್ನು ನೋಡುವುದಾದರೆ 20,185 ಜನರು ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. 4,40,287 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದರೆ, 2,61,535 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

ಭಾರತದಲ್ಲಿ ಕೊರೊನಾ ಲಕ್ಷದಿಂದ‌ ಲಕ್ಷಕ್ಕೆ ಏರುತ್ತಿರುವ ಗ್ರಾಫ್ ಹೀಗಿದೆಭಾರತದಲ್ಲಿ ಕೊರೊನಾ ಲಕ್ಷದಿಂದ‌ ಲಕ್ಷಕ್ಕೆ ಏರುತ್ತಿರುವ ಗ್ರಾಫ್ ಹೀಗಿದೆ

ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸರಾಸರಿ ಪ್ರಮಾಣವು ಶೇ.6.73ರಷ್ಟಿದೆ. ಕೊರೊನಾವೈರಸ್ ಸೋಂಕು ತಪಾಸಣೆ ಪ್ರಮಾಣವನ್ನು ಗಮನಿಸುವುದಾದರೆ ಪ್ರತಿ 10 ಲಕ್ಷದಲ್ಲಿ ಪ್ರತಿನಿತ್ಯ 6859 ಜನರನ್ನು ಕೊರೊನಾವೈರಸ್ ಸೋಂತು ತಪಾಸಣೆಗೆ ಒಳಪಡಿಸಲಾಗುತ್ತದೆ. ಆದರೆ ಭಾರತದಲ್ಲಿನ ಎಂಟು ರಾಜ್ಯಗಳು ರಾಷ್ಟ್ರೀಯ ಸರಾಸರಿ ಪ್ರಮಾಣಕ್ಕಿಂತಲೂ ಕಡಿಮೆ ಸರಾಸರಿ ಪ್ರಮಾಣವು ದಾಖಲಾಗಿರುವ ಅಂಶ ಇದೀಗ ಬೆಳಕಿಗೆ ಬಂದಿದೆ. ಅಲ್ಲದೇ ಸರಿಸಾರಿ ಕೊರೊನಾವೈರಸ್ ಸೋಂಕು ತಪಾಸಣೆ ಪ್ರಮಾಣವು ಕೇಂದ್ರಕ್ಕಿಂತ ಹೆಚ್ಚಾಗಿದೆ.

ಅತಿ ಕಡಿಮೆ ಸರಾಸರಿ ಪ್ರಮಾಣ ದಾಖಲಿಸಿದ ಪಂಜಾಬ್

ಅತಿ ಕಡಿಮೆ ಸರಾಸರಿ ಪ್ರಮಾಣ ದಾಖಲಿಸಿದ ಪಂಜಾಬ್

ಪಂಜಾಬ್ ನಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣವು ರಾಷ್ಟ್ರದಲ್ಲಿ ಅತ್ಯಂತ ಕಡಿಮೆ ಎನಿಸಿದೆ. ಶೇ.1.92ರಷ್ಟು ಸರಾಸರಿ ಪ್ರಮಾಣವನ್ನು ದಾಖಲಿಸಿರುವ ರಾಜ್ಯದಲ್ಲಿ ಒಟ್ಟು 6,491 ಮಂದಿ ಕೊರೊನಾವೈರಸ್ ಸೋಂಕಿತರಿದ್ದಾರೆ. 1,828 ಸಕ್ರಿಯ ಪ್ರಕರಣಗಳಿದ್ದರೆ, 4,494 ಸೋಂಕಿತರು ಗುಣಮುಖರಾಗಿದ್ದಾರೆ. 169 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು, ಪಂಜಾಬ್ ನಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 10,257 ಜನರನ್ನು ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ.

ಶೇ.2.05ರಷ್ಟು ಸರಾಸರಿ ಪ್ರಮಾಣವನ್ನು ಹೊಂದಿರುವ ಗೋವಾ

ಶೇ.2.05ರಷ್ಟು ಸರಾಸರಿ ಪ್ರಮಾಣವನ್ನು ಹೊಂದಿರುವ ಗೋವಾ

ಗೋವಾದಲ್ಲಿ ಒಟ್ಟು ಸರಾಸರಿ ಸೋಂಕಿತರ ಪ್ರಮಾಣವು ಶೇ.2.05ರಷ್ಟಿದೆ. ಇನ್ನು, ರಾಜ್ಯದಲ್ಲಿ ಒಟ್ಟು 1,813 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದ್ದು, ಈ ಪೈಕಿ 745 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 1,061 ಮಂದಿ ಸೋಂಕಿತರು ಗುಣಮುಖರಾಗಿದ್ದು, 7 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನು, ಗೋವಾದಲ್ಲಿ ಕೊವಿಡ್-19 ಸೋಂಕಿತರ ತಪಾಸಣೆ ಪ್ರಮಾಣವು 44,129ರಷ್ಟಿದೆ.

ಅತಿಕಡಿಮೆ ಸರಾಸರಿ ಪ್ರಮಾಣದಲ್ಲಿ ರಾಜಸ್ಥಾನಕ್ಕೆ 3ನೇ ಸ್ಥಾನ

ಅತಿಕಡಿಮೆ ಸರಾಸರಿ ಪ್ರಮಾಣದಲ್ಲಿ ರಾಜಸ್ಥಾನಕ್ಕೆ 3ನೇ ಸ್ಥಾನ

ರಾಜಸ್ಥಾನದಲ್ಲಿ ಕೊರೊನಾವೈರಸ್ ಸೋಂಕಿತರ ಸರಾಸರಿ ಪ್ರಮಾಣ ಶೇ.2.51ರಷ್ಟಿದ್ದು, ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ರಾಜಸ್ಥಾನದಲ್ಲಿ ಒಟ್ಟು 20,922 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದು, 4,137 ಸಕ್ರಿಯ ಪ್ರಕರಣಗಳಿವೆ. 16,320 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಒಟ್ಟು 465 ಸೋಂಕಿತರು ಕೊರೊನಾವೈರಸ್ ಗೆ ಬಲಿಯಾಗಿದ್ದಾರೆ. ರಾಜಸ್ಥಾನದಲ್ಲಿ ಪ್ರತಿ 10 ಲಕ್ಷದಲ್ಲಿ 10,445 ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.

ಒಟ್ಟು ಸರಾಸರಿ ಪ್ರಮಾಣದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ

ಒಟ್ಟು ಸರಾಸರಿ ಪ್ರಮಾಣದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ

ಕೊರೊನಾವೈರಸ್ ಸೋಂಕಿತರ ಒಟ್ಟು ಸರಾಸರಿ ಪ್ರಮಾಣದಲ್ಲಿ ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸೋಂಕಿತರ ಒಟ್ಟು ಸರಾಸರಿ ಪ್ರಮಾಣವು ಶೇ.2.64ರಷ್ಟಿದೆ. ಕರುನಾಡಿನಲ್ಲಿ ಇದುವರೆಗೂ 25,317 ಮಂದಿಗೆ ಕೊರೊನಾವೈರಸ್ ಪತ್ತೆಯಾಗಿದ್ದು, ಈ ಪೈಕಿ 14,382 ಸಕ್ರಿಯ ಪ್ರಕರಣಗಳಿದ್ದರೆ 10,529 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಮಹಾಮಾರಿಗೆ ಒಟ್ಟು 402 ಜನರು ಪ್ರಾಣ ಬಿಟ್ಟಿದ್ದಾರೆ. ಇನ್ನು, ಕರ್ನಾಟಕದಲ್ಲಿ ಪ್ರತಿ 10 ಲಕ್ಷದಲ್ಲಿ 9803 ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.

ರಾಷ್ಟ್ರಕ್ಕಿಂತ ಅಸ್ಸಾಂ, ತ್ರಿಪಾ, ಚಂಡೀಘರ್ ಕಂಡೀಷನ್ ಬೆಸ್ಟ್

ರಾಷ್ಟ್ರಕ್ಕಿಂತ ಅಸ್ಸಾಂ, ತ್ರಿಪಾ, ಚಂಡೀಘರ್ ಕಂಡೀಷನ್ ಬೆಸ್ಟ್

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಒಟ್ಟು ಸರಾಸರಿಯನ್ನು ಅವಲೋಕಿಸಿ ನೋಡಿದರೆ ರಾಷ್ಟ್ರಕ್ಕಿಂತ ಅಸ್ಸಾಂ, ತ್ರಿಪುರಾ, ಚಂಡೀಘರ್, ಪುದುಚೇರಿಯಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಏಕೆಂದರೆ ತ್ರಿಪುರಾ 2.72, ಅಸ್ಸಾಂ 2.84, ಚಂಡೀಘರ್ 4.36 ಹಾಗೂ ಪುದುಚೇರಿ 5.55ರಷ್ಟು ಕೊರೊನಾವೈರಸ್ ಸೋಂಕಿತರ ಸರಾಸರಿ ಪ್ರಮಾಣವಿದೆ. ಇನ್ನು, ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ ಎಷ್ಟು ಜನರನ್ನು ಪ್ರತಿನಿತ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂಬ ಅಂಕಿ-ಅಂಶಗಳನ್ನು ನೋಡಿದರೆ ತ್ರಿಪುರಾ 10941, ಅಸ್ಸಾಂ 9987, ಚಂಡೀಘರ್ 9090 ಹಾಗೂ ಪುದುಚೇರಿ 12592 ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.

English summary
Many States Report Lower #COVID19 Positivity Rate Than The National Average Of 6.73: Ministry Of Health And Family Welfare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X