• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಷ್ಟು ಕಾರ್ಮಿಕ ದಿನಾಚರಣೆಗಳು ಬಂದರೂ ಕಾರ್ಮಿಕನ ಬದುಕು ಹೀಗೆಯೇ!

By Nayana
|
Google Oneindia Kannada News

ನವದೆಹಲಿ, ಮೇ.2: ವಿಶ್ವದ ಎಲ್ಲಾ ಶ್ರಮಜೀವಿಗಳನ್ನು ನೆನೆದು ವಿಶ್ವ ಕಾರ್ಮಿಕ ದಿನವನ್ನು ಆಚರಣೆಯೇನೋ ಮಾಡುತ್ತೇವೆ. ಆದರೆ ಕಾರ್ಮಿಕರು ಯಾವ ಸ್ಥಿತಿಯಲ್ಲಿದ್ದಾರೆ. ಅವರ ಕಷ್ಟಗಳೇನು ಎಂದು ನೋಡಿದಾಗ ಕಣ್ಣಿಂದ ನೀರು ಬರದೆ ಇರಲಾರದು.
ಅವರ ಹಕ್ಕನ್ನು ದಕ್ಕಿಸಿಕೊಡಲು ಎಷ್ಟು ಜನ ಪ್ರಯತ್ನ ಪಡುತ್ತಿದ್ದಾರೆ ?ಇಡೀ ದಿನ ದಣಿವೆನ್ನದೆ ದುಡಿದು, ರಾತ್ರಿ ವಿಶ್ರಾಂತಿಗೆ ಜಾಗವಿಲ್ಲದೆ, ತಿನ್ನಲು ಮೂರು ಹೊತ್ತು ಊಟವಿಲ್ಲದೆ ಅಲೆದಾಡುವ ಕಾರ್ಮಿಕರನ್ನೂ ನೋಡಿದ್ದೇವೆ. ಕೇವಲ ಕಾರ್ಮಿಕ ದಿನಾಚರಣೆ ಆಚರಣೆಗಷ್ಟೇ ಸೀಮಿತವಾಯಿತೇ, ಅವರ ಪರವಾಗಿ ನಮ್ಮ ಮನಸ್ಸಿನಲ್ಲಿ ಯಾವುದೇ ಭಾವನೆಗಳಿಲ್ಲವೇ?

ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ 1889 ಮೇ 1 ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ ಓವೆನ್ ಸೂಚಿಸಿದ್ದ. 1889ರಲ್ಲಿ ಪ್ಯಾರಿಸಿನಲ್ಲಿ ಸಮಾವೇಶಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯ ಪ್ರಥಮ ಅಧಿವೇಶನದಲ್ಲಿ ಮೇ 1 ನೇ ದಿನಾಂಕವನ್ನು ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಯಿತು.

ಕಾರ್ಮಿಕಶಕ್ತಿಗೆ ಡೂಡಲ್ ಮೂಲಕ ಗೌರವಿಸಿದ ಗೂಗಲ್ ಕಾರ್ಮಿಕಶಕ್ತಿಗೆ ಡೂಡಲ್ ಮೂಲಕ ಗೌರವಿಸಿದ ಗೂಗಲ್

ಈ ದಿನದ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು.

ಭಾರತದಲ್ಲಿ ಮೇ ದಿನವೇ ಕಾರ್ಮಿಕರ ದಿನ. 20 ನೇ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕ ಸಂಘ ಚಳುವಳಿಯ ಪ್ರಭಾವ ಹೆಚ್ಚಿಸಿದಾಗಿನಿಂದ ಇದರ ಆಚರಣೆ ಆರಂಭವಾಯಿತು.

ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಘೋಷಣೆಯನ್ನೊಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ.

ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು. ಭಾರತದಲ್ಲಿ 1923 ಮೇ 1ರಂದು ಚೆನ್ನೈನಲ್ಲಿ(ಮದ್ರಾಸ್‌) ಮೊದಲಿಗೆ ಈ ದಿನ ಆಚರಿಸಲಾಯಿತು. ಅಂದಿನ ಹಿಂದೂಸ್ತಾನ್‌ ಕಿಸಾನ್‌ ಪಕ್ಷವು ಈ ಆಚರಣೆಗೆ ನಾಂದಿಹಾಡಿತು.

ಈ ದಿನವನ್ನು ರಾಷ್ಟ್ರೀಯ ರಜಾ ದಿನವೆಂದು ಘೋಷಿಸಲು ಪಕ್ಷವು ಅಂದೇ ಒತ್ತಾಯಿಸಿತ್ತು. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮೇ 1ನ್ನು ಕಾರ್ಮಿಕ ದಿನಾಚರಣ ಪ್ರಯುಕ್ತ ಸಾರ್ವಜನಿಕ ರಜೆ ಇರುತ್ತದೆ. 1923ರ ಇದೇ ದಿನದಂದು, ಲೇಬರ್‌ ಕಿಸಾನ್‌ ಪಕ್ಷ ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಿತ್ತು.

ವಿವಿಧ ವೃತ್ತಿರಂಗದ ಕಾರ್ಮಿಕರು ಬಳಸುವ ಸಲಕರಣೆ-ಸಾಧನಗಳ ಚಿತ್ರಗಳನ್ನು ಡೂಡಲ್‌ನಲ್ಲಿ ಬಿಂಬಿಸಿದೆ. ಕಾರ್ಮಿಕರಿಗೆ ಗೌರವ ಸೂಚಕವಾಗಿ ಆಚರಿಸುವ ಈ ದಿನಕ್ಕೆ 'ಮೇ ಡೇ' ಎಂತಲೂ ಕರೆಯುತ್ತಾರೆ.

ಕಾಂಕ್ರೀಟ್‌ ಸ್ಲ್ಯಾಬ್‌ ಈ ಕಾರ್ಮಿಕನಿಗೆ ಆಶ್ರಯ ತಾಣ

ಕಾಂಕ್ರೀಟ್‌ ಸ್ಲ್ಯಾಬ್‌ ಈ ಕಾರ್ಮಿಕನಿಗೆ ಆಶ್ರಯ ತಾಣ

ವಿಶ್ವ ಕಾರ್ಮಿಕರ ದಿನದಂದು ಮೋರಾದಾಬಾದ್‌ನಲ್ಲಿ ರೈಲ್ವೆ ಗೋಡಾನ್‌ನ ಕಾರ್ಮಿಕರೊಬ್ಬರು ಕಾಂಕ್ರೀಟ್‌ ಸ್ಲ್ಯಾಬ್‌ ಮೇಲೆ ಮಲಗಿ ವಿಶ್ರಾಂಥಿ ಪಡೆಯುತ್ತಿರುವ ದೃಶ್ಯ ಕಂಡುಬಂತು. ಇದನ್ನು ನೋಡಿದಾಗ ಕಾರ್ಮಿಕನ ಸ್ಥಿತಿ ಹೇಗಿದೆ ಎನ್ನುವುದು ಅರ್ಥವಾಗದೇ ಇರಲಾರದು.

ಮುಂಬೈ ಇಂಡಿಯನ್ಸ್ ಮಣಿಸಿದ ಆರ್‌ಸಿಬಿ

ಮುಂಬೈ ಇಂಡಿಯನ್ಸ್ ಮಣಿಸಿದ ಆರ್‌ಸಿಬಿ

ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮಧ್ಯದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 14 ರನ್‌ಗಳಿಂದ ಆರ್‌ಸಿಬಿಯನ್ನು ಮಣಿಸಿತು. ಆರ್‌ಸಿಬಿ ಗೆಲುವಿನ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿಯ ಸಂಭ್ರದ ನಗು.

ಕ್ಯೂಬಾದಲ್ಲಿ ನದಿಯಂತೆ ಕಂಡ ಕಾರ್ಮಿಕರ ಮೆರವಣಿಗೆ

ಕ್ಯೂಬಾದಲ್ಲಿ ನದಿಯಂತೆ ಕಂಡ ಕಾರ್ಮಿಕರ ಮೆರವಣಿಗೆ

ಹವಾನಾದ ಕ್ಯೂಬಾದಲ್ಲಿ ಮಂಗಳವಾರ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರು, ಕ್ಯೂಬನ್ಸ್ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ನೆರೆದಿದ್ದ ಜನರು ಒಂದು ನಂದಿಯಂತೆ ಗೋಚರಿಸುತ್ತಿತ್ತು.

ಮರಳಿನ ಮೇಲೆ ನೃತ್ಯ ಚಮತ್ಕಾರ

ಮರಳಿನ ಮೇಲೆ ನೃತ್ಯ ಚಮತ್ಕಾರ

ಮುಂಬೈನ ಸಮುದ್ರವೊಂದರ ದಡದಲ್ಲಿ ಮರಳಿನ ಮೇಲೆ ಯುವಕನೊಬ್ಬನು ನೃತ್ಯ ಮಾಡಿ ಎಲ್ಲರ ಗಮನ ಸೆಳೆದನು. ನೃತ್ಯಕ್ಕೆ ವೇಳೆ, ಜಾಗವೆನ್ನುವುದಿಲ್ಲ, ಮನಸ್ಸಿಗೆ ಸಂತೋಷ ಸಿಕ್ಕರೆ ಸಾಕೆಂದು ಡ್ಯಾನ್ಸ್ ಮಾಡುತ್ತಾ, ಅಲ್ಲಿದ್ದವರ ಗಮನ ಸೆಳೆದನು.

ಹೂವಿಗಾಗಿ ನಿಂತ ಮಹಿಳೆಯರು

ಹೂವಿಗಾಗಿ ನಿಂತ ಮಹಿಳೆಯರು

ರಾಂಚಿಯಲ್ಲಿ ಮಂದ ಪೂಜಾ ಹಬ್ಬದ ಕೊನೆಯ ದಿನವಾದ ಮಂಗಳವಾರ ಭೋಕ್ತಾದಿಂದ ಬೀಳುವ ಹೂವಿಗಾಗಿ ಗಂಟೆಗಟ್ಟಲೆ ಕಾದುನಿಂತ ಮಹಿಳೆಯರು,

English summary
Since more than a century, May day is being celebrated across the world in the name of working class, but these very people still struggling for minimum welfare themselves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X