ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿನಲ್ಲಿ ಚರಂಡಿಗೆ ಉರುಳಿದ ಲಾರಿ: 26 ಜನ ದುರ್ಮರಣ

|
Google Oneindia Kannada News

ಭಾವ್ನಗರ್, ಮಾರ್ಚ್ 06: ಲಾರಿಯೊಂದು ಸ್ಕಿಡ್ ಆಗಿ ಬೃಹತ್ ಚರಂಡಿಗೆ ಬಿದ್ದ ಪರಿಣಾಮ 26 ಜನ ಸಾವಿಗೀಡಾದ ದಾರುಣ ಘಟನೆ ಗುಜರಾತಿನ ಭಾವ್ನಗರದಲ್ಲಿ ನಡೆದಿದೆ.

ಭಾವ್ನಗರದ ರಂಘೋಲಾದ ರಾಜ್ ಕೋಟ್-ಭಾವ್ನಗರ ಹೆದ್ದಾರಿಯಲ್ಲಿ ಇಂದು(ಮಾ.6) ಬೆಳಿಗ್ಗೆ ಈ ದುರ್ಘಟನೆ ನಡೆದಿದೆ. ಲಾರಿಯಲ್ಲಿದ್ದವರೆಲ್ಲ ಮದುವೆ ಸಮಾರಂಭವೊಂದನ್ನು ಮುಗಿಸಿ ವಾಪಸ್ಸಾಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕಾರಿನ ಫ್ಯೂಯೆಲ್ ಟ್ಯಾಂಕ್ ಸ್ಫೋಟ: ಹರ್ಯಾಣದಲ್ಲಿ ನಾಲ್ವರು ಸಾವುಕಾರಿನ ಫ್ಯೂಯೆಲ್ ಟ್ಯಾಂಕ್ ಸ್ಫೋಟ: ಹರ್ಯಾಣದಲ್ಲಿ ನಾಲ್ವರು ಸಾವು

ಗಾಯಗೊಂಡ 12 ಜನರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಆಗಮಿಸಿರುವ ಪೊಲಿಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

English summary
Over 26 people dead, 12 injured after a truck they were travelling in fell into a drain in Gujarat's Bhavnagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X