• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಫ್ರಿಜರೇಟರ್ ಸ್ಫೋಟ: ಗ್ವಾಲಿಯರ್ ನಲ್ಲಿ ನಾಲ್ವರು ಸಾವು

|

ಗ್ವಾಲಿಯರ್, ಸೆಪ್ಟೆಂಬರ್ 29: ರೆಫ್ರಿಜರೇಟರ್ ಸಿಡಿದು, ಗೋಡೆಯೊಂದು ಕುಸಿದ ಪರಿಣಾಮ ನಾಲ್ವರು ಮೃತರಾದ ದಾರುಣ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಇಂದು(ಸೆ.29) ನಡೆದಿದೆ.

ರೆಫ್ರಿಜರೇಟರ್ ನ ಕಂಪ್ರೆಸ್ಸರ್ ನಲ್ಲಿ ಸಮಸ್ಯೆ ಉಂಟಾಗಿ ಅದು ಸ್ಫೋಟಿಸಿದ ಪರಿಣಾಮ ಈ ದುರ್ಘಟನೆ ನಡೆದಿದ್ದು, ಘತನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದೆಹಲಿಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿತ: ಐವರ ದಾರುಣ ಸಾವು

ಗ್ವಾಲಿಯರ್ ನ ದರ್ಪನ್ ಕಾಲೊನಿ ಎಂಬಲ್ಲಿಯ ಮನೆಯೊಂದರಲ್ಲಿ ಫ್ರಿಡ್ಜ್ ನ ಕಂಪ್ರೆಸ್ಸರ್ ನಲ್ಲಿ ಸಮಸ್ಯೆ ಉಂಟಾಗಿ ಅದು ಸ್ಫೋಟಗೊಂಡಿತ್ತು.

Many dead as wall collapses in Gwalior in Madhya prasdesh

ಇತ್ತೀಚೆಗಷ್ಟೇ ದೆಹಲಿಯ ಅಶೋಕ್ ವಿಹಾರ್ ಎಂಬಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಐವರು ಮೃತರಾಗಿದ್ದರು.

ಗಾಜಿಯಾಬಾದ್‌ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ: ಹಲವರು ಅವಶೇಷಗಳಡಿ

ಕಟ್ಟಡ ಹಳೆಯದಾಗಿದ್ದು, ಹಲವೆಡೆ ಬಿರುಕು ಕಂಡುಬಂದಿವೆ ಎಂದು ದುರ್ಘಟನೆ ನಡೆಯುವು ಸುಮಾರು ದಿನಗಳ ಮೊದಲೇ ದೆಹಲಿ ನಗರಸಭೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸೆ.26 ರಂದು ಕಟ್ಟಡ ಕುಸಿದ ಪರಿಣಾಮ ಐವರು ದಾರುಣ ಸಾವು ಕಂಡಿದ್ದರು.

ಜುಲೈ ತಿಂಗಳಿನಲ್ಲಿ ನೋಯ್ಡಾದದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದ ಪರಿಣಾಮ ಹತ್ತಕ್ಕೂ ಹೆಚ್ಚು ಜನ ಮೃತರಾಗಿದ್ದನ್ನೂ ಇಲ್ಲಿ ಸ್ಮರಿಸಬಹುದು.

English summary
Atleast 4 people died after a wall collapsed due to blast in a refrigerator copressor in Madhya Pradesh's Gwalior.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X