• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಎದುರಿಸಲು ಭಾರತಕ್ಕೆ ನೆರವು ನೀಡಿದ ರಾಷ್ಟ್ರಗಳ ವಿವರ

|
Google Oneindia Kannada News

ನವದೆಹಲಿ, ಏಪ್ರಿಲ್ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಸಿಲುಕಿ ನಲುಗಿದ ಭಾರತಕ್ಕೆ ಜಗತ್ತಿನ ಹಲವು ರಾಷ್ಟ್ರಗಳು ಸಹಾಯಹಸ್ತ ಚಾಚಿವೆ. ವೈದ್ಯಕೀಯ ಆಮ್ಲಜನಕ ಸಾಂದ್ರಕ, ವೆಂಟಿಲೇಟರ್, ಸರ್ಜಿಕಲ್ ಮಾಸ್ಕ್ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿವೆ.

ಯುನೈಟೆಡ್ ಕಿಂಗ್ ಡಮ್, ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಸೌದಿ ಅರೇಬಿಯಾ ಮತ್ತು ದುಬೈ ರಾಷ್ಟ್ರಗಳು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ನೆರವು ನೀಡುವುದಾಗಿ ಘೋಷಿಸಿವೆ.

ಕೋವಿಡ್ 19: ಕರ್ನಾಟಕ ಸೇರಿ 10 ರಾಜ್ಯಗಳಿಂದ ಶೇ.69.1ರಷ್ಟು ಹೊಸ ಪ್ರಕರಣಕೋವಿಡ್ 19: ಕರ್ನಾಟಕ ಸೇರಿ 10 ರಾಜ್ಯಗಳಿಂದ ಶೇ.69.1ರಷ್ಟು ಹೊಸ ಪ್ರಕರಣ

ಜಗತ್ತಿನ ಈ ಪ್ರಮುಖ ರಾಷ್ಟ್ರಗಳ ಪೈಕಿ ಯುನೈಟೆಡ್ ಕಿಂಗ್ ಡಮ್ 495 ಆಮ್ಲಜನಕ ಸಾಂದ್ರಕ, 120 ನಾನ್ ಇನ್ವೆಸಿವ್ ವೆಂಟಿಲೇಟರ್ ಮತ್ತು 20 ಮ್ಯಾನುವೆಲ್ ವೆಂಟಿಲೇಟರ್ ಅನ್ನು ಇದೇ ವಾರದಲ್ಲಿ ರವಾನಿಸಲಿದೆ. ಈ ಪೈಕಿ ಏಪ್ರಿಲ್ 27ರಂದೇ 100 ವೆಂಟಿಲೇಟರ್ ಮತ್ತು 95 ಆಮ್ಲಜನಕ ಸಾಂದ್ರಕಗಳು ಭಾರತಕ್ಕೆ ತಲುಪಿವೆ.

ಫ್ರಾನ್ಸ್ ರಾಷ್ಟ್ರದಿಂದ 2 ಹಂತಗಳಲ್ಲಿ ನೆರವು

ಫ್ರಾನ್ಸ್ ರಾಷ್ಟ್ರದಿಂದ 2 ಹಂತಗಳಲ್ಲಿ ನೆರವು

ಕೊರೊನಾವೈರಸ್ ಸವಾಲನ್ನು ಸಮರ್ಥವಾಗಿ ಎದುರಿಸಲು ಭಾರತಕ್ಕೆ ಫ್ರಾನ್ಸ್ ಎರಡು ಹಂತಗಳಲ್ಲಿ ನೆರವು ನೀಡಲು ಮುಂದಾಗಿದೆ. ಮೊದಲ ಹಂತದಲ್ಲಿ ಇದೇ ವಾರ ಎಂಟು ಬೃಹತ್ ಆಮ್ಲಜನಕ ಉತ್ಪಾದನಾ ಘಟಕ, 28 ದ್ರವರೂಪದ ಆಮ್ಲಜನಕ, 200 ಎಲೆಕ್ಟ್ರಿಕ್ ಸಿರೆಂಜ್ ಅನ್ನು ಕಳುಹಿಸಿ ಕೊಡಲಾಗುತ್ತದೆ. ಎರಡನೇ ಹಂತದಲ್ಲಿ ಮುಂದಿನ ವಾರ ಐದು ದ್ರವರೂಪದ ಆಮ್ಲಜನಕ ಸಾಂದ್ರಕಗಳನ್ನು ರವಾನಿಸಲಾಗುತ್ತದೆ.

ಭಾರತದ ನೆರವಿಗೆ ನಿಂತ ಜರ್ಮನಿ, ಐರ್ಲೆಂಡ್

ಭಾರತದ ನೆರವಿಗೆ ನಿಂತ ಜರ್ಮನಿ, ಐರ್ಲೆಂಡ್

ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಿರ್ವಹಣೆಗೆ ಐರ್ಲೆಂಡ್ ರಾಷ್ಟ್ರದಿಂದ ಇದೇ ವಾರ ಭಾರತಕ್ಕೆ 700 ಆಮ್ಲಜನಕ ಸಾಂದ್ರಕ ಕಳುಹಿಸಲಾಗುತ್ತಿದೆ. ಜರ್ಮನಿಯು ಸಂಚಾರಿ ಆಮ್ಲಜನಕ ಉತ್ಪಾದನಾ ಘಟಕ, 120 ವೆಂಟಿಲೇಟರ್, 8 ಕೋಟಿ ಕೆಎನ್-95 ಮಾಸ್ಕ್ ಅನ್ನು ರವಾನಿಸುತ್ತದೆ. ಇದರ ಜೊತೆಗೆ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಭಾರತಕ್ಕೆ ನೆರವಿನ ಹಸ್ತ ಚಾಚಿದ ಆಸ್ಟ್ರೇಲಿಯಾ

ಭಾರತಕ್ಕೆ ನೆರವಿನ ಹಸ್ತ ಚಾಚಿದ ಆಸ್ಟ್ರೇಲಿಯಾ

ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಆಸ್ಟ್ರೇಲಿಯಾ ಸಹ ಭಾರತಕ್ಕೆ ನೆರವಿನ ಹಸ್ತ ಚಾಚಿದೆ. 500 ವೆಂಟಿಲೇಟರ್, 10 ಲಕ್ಷ ಸರ್ಜಿಕಲ್ ಮಾಸ್ಕ್, 5 ಲಕ್ಷ ಪಿ2 ಹಾಗೂ 5 ಲಕ್ಷ ಎನ್-95 ಮಾಸ್ಕ್ 10 ಲಕ್ಷ ಗೂಗಲ್ಸ್ ಹಾಗೂ 10 ಲಕ್ಷ ಜೊಡೆ ಹ್ಯಾಂಡ್ ಗ್ಲೌಸ್ 20,000 ಫೇಸ್ ಶೀಲ್ಡ್ ಅನ್ನು ಕಳುಹಿಸುವುದಾಗಿ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ.

ಸೌದಿ ಅರೇಬಿಯಾ, ರಷ್ಯಾ ಮತ್ತು ಕುವೈತ್

ಸೌದಿ ಅರೇಬಿಯಾ, ರಷ್ಯಾ ಮತ್ತು ಕುವೈತ್

ಭಾರತದಲ್ಲಿ ರಷ್ಯಾ, ಕುವೈತ್ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳಿಂದಲೂ ಅಗತ್ಯ ವೈದ್ಯಕೀಯ ಸಲಕರಣಗಳು ಬಂದಿವೆ. ಸಿಂಗಾಪೂರ 500 BiPAP's, 250 ಆಮ್ಲಜನಕ ಸಾಂದ್ರಕ, 4 ಕ್ರಯೋಜೆನಿಕ್ ಆಮ್ಲಜನಕ ಸಾಂದ್ರಕ ಹಾಗೂ ಇತರೆ ವೈದ್ಯಕೀಯ ಸರಕುಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದೆ. ಸೌದಿ ಅರೇಬಿಯಾ 80 ಮೆಟ್ರಿಕ್ ಟನ್ ದ್ರವರೂಪದ ಆಮ್ಲಜನಕ, ಹಾಂಗ್ ಕಾಂಗ್ ನಿಂದ 800 ಆಮ್ಲಜನಕ ಸಾಂದ್ರಕ, ಥೈಲ್ಯಾಂಡ್ ನಿಂದ 4 ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕ್, ಹಾಗೂ 6 ಕ್ರಯೋಜೆನಿಕ್ ಆಮ್ಲಜನಕ ಸಾಂದ್ರಕ ರವಾನಿಸುವುದಾಗಿ ಯುಎಇ ಘೋಷಿಸಿದೆ.

English summary
Many Countries Support India To Face Coronavirus Pandemic: Here Read The List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X