• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಸ್ಥಾನ : ಕಾಂಗ್ರೆಸ್ ಸೇರಿದ ಜಸ್ವಂತ್ ಪುತ್ರ, ಬಿಜೆಪಿಗೆ ಭಾರಿ ಹಿನ್ನಡೆ

|

ಜೈಪುರ, ಅಕ್ಟೋಬರ್ 18: ವಿಧಾನಸಭೆ ಚುನಾವಣೆಗೂ ಮುನ್ನ ರಾಜಸ್ಥಾನದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯುಂಟಾಗಿದೆ. ಬಿಜೆಪಿಯ ಸಂಸ್ಥಾಪಕ ಸದಸ್ಯ, ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರ​ ಪುತ್ರ, ಶಾಸಕ ಮಾನವೇಂದ್ರ ಸಿಂಗ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ರಾಜಸ್ಥಾನ ವಿಧಾನಸಭೆ ಚುನಾವಣೆಗೂ ಇಲ್ಲಿ ತನಕ ಬಂದಿರುವ ಸಮೀಕ್ಷೆಗಳಲ್ಲೂ ಬಿಜೆಪಿಗೆ ಶುಭ ಸುದ್ದಿ ಸಿಕ್ಕಿಲ್ಲ. ಸೋಲಿನ ಭಯದಲ್ಲಿರುವ ವಸುಂಧರಾ ರಾಜೆ ಸರ್ಕಾರಕ್ಕೆ ಈಗ ಮತ್ತೊಂದು ಆಘಾತ ಉಂಟಾಗಿದೆ.

ರಾಜಸ್ಥಾನ ಸಿಎಂ ಸಮೀಕ್ಷೆ : ವಸುಂಧರಾಗಿಂತ ಸಚಿನ್ ಪೈಲಟ್ ಮುಂದೆ

ರಜಪೂತ ಸಮುದಾಯದಲ್ಲಿ ಪ್ರಮುಖ ನಾಯಕ, 54 ವರ್ಷದ ಮನ್ವೇಂದ್ರ ಅವರು ಕಳೆದ ತಿಂಗಳು, ರಾಜಸ್ಥಾನದ ಬರ್ಮೆರ್ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪಾಚ್​ಪಾದ್ರದಲ್ಲಿ ನಡೆದ ಸಮಾವೇಶದಲ್ಲೇ ಈ ಬಗ್ಗೆ ಸುಳಿವು ನೀಡಿದ್ದರು. ಬಿಜೆಪಿ ಸೇರಿದ್ದು ದೊಡ್ಡ ಪ್ರಮಾದ ಎಂದಿದ್ದರು.

ಮೈಸೂರು ದಸರಾ - ವಿಶೇಷ ಪುರವಣಿ

'ನನ್ನನ್ನು ಯಾವೊಬ್ಬ ಕಾಂಗ್ರೆಸ್ ನಾಯಕರು ಸಂಪರ್ಕಿಲ್ಲ. ನಾನು ಕಾಂಗ್ರೆಸ್ ಸೇರುವ ಯಾವುದೇ ಯೋಜನೆ ಹಾಕಿಕೊಂಡಿಲ್ಲ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಂತೂ ಖಚಿತ. ಈ ಬಗ್ಗೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು.

ಸಚಿನ್ ಪೈಲಟ್ ಪ್ರಯತ್ನಕ್ಕೆ ಸಿಕ್ಕಿದ ಫಲ

ಸಚಿನ್ ಪೈಲಟ್ ಪ್ರಯತ್ನಕ್ಕೆ ಸಿಕ್ಕಿದ ಫಲ

ಪೈಲಟ್ ಪ್ಲ್ಯಾನ್ : ಮನ್ವೇಂದ್ರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹ್ಲೋಟ್ ಅವರು, ಮನ್ವೇಂದ್ರ ಅವರನ್ನು ಕಾಂಗ್ರೆಸ್ಸಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.ಅವರ ಆಗಮನ ಪಕ್ಷಕ್ಕೆ ಲಾಭ ತಂದುಕೊಡಲಿದೆ,ಜತೆಗೆ ಬಿಜೆಪಿ ಪಕ್ಷ ಬಿಡುವವರ ಪಟ್ಟಿ ದೊಡ್ಡದಿದೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್‌ ಪೈಲಟ್‌. ರಾಜಸ್ಥಾನದ ಪೂರ್ವ ಸಮೀಕ್ಷೆಗಳಲ್ಲಿ ಸಚಿನ್ ಪೈಲಟ್ ಪರ ಫಲಿತಾಂಶಗಳು ಬಂದಿದ್ದು, ಸಿಎಂ ಸ್ಥಾನಕ್ಕೆ ಪೈಲಟ್ ಸಮರ್ಥ ಎಂದು ರಾಜಸ್ಥಾನದ ಜನತೆ ಬಯಸಿದ್ದಾರೆ. ಸದ್ಯಕ್ಕೆ ಪೈಲಟ್ ಹಾಗೂ ರಾಹುಲ್ ಅವರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದೆಲ್ಲವೂ ಶುರುವಾಗಿದ್ದು 2014ರಲ್ಲಿ

ಇದೆಲ್ಲವೂ ಶುರುವಾಗಿದ್ದು 2014ರಲ್ಲಿ

ಇದೆಲ್ಲವೂ ಶುರುವಾಗಿದ್ದು 2014ರಲ್ಲಿ ಎನ್ನಬಹುದು. ಮೋದಿ ನೇತೃತ್ವದ ಬಿಜೆಪಿ ಚುನಾವಣೆ ಎದುರಿಸುವಾಗ ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಬಗ್ಗೆ ಮೋದಿ ಅವರು ನನಗೆ ಕರೆ ಮಾಡಿ, ಅಂದು ಟಿಕೆಟ್ ಆಯ್ಕೆ ಬಗ್ಗೆ ನಡೆದ ಸಭೆಯಲ್ಲಿ ತಾವೂ ಪಾಲ್ಗೊಂಡಿರಲಿಲ್ಲ. ಹೀಗಾಗಿ ನನಗೇನು ಗೊತ್ತಿಲ್ಲ ಎಂದಿದ್ದರು. ನನ್ನ ತಂದೆ ಜಸ್ವಂತ್​ಸಿಂಗ್​ವಿರುದ್ಧದ ನಡೆದ ಪಿತೂರಿಯಲ್ಲಿ ಜೈಪುರದ ಒಬ್ಬರು ಮತ್ತು ದೆಹಲಿಯ ಇಬ್ಬರ ಕೈವಾಡವಿದೆ. ಅವರ ಹೆಸರುಗಳನ್ನು ನಾನು ಬಹಿರಂಗಪಡಿಸಲಾರೆ ಎಂದು ಮನ್ವೇಂದ್ರ ಸಿಂಗ್ ಹೇಳಿದ್ದಾರೆ

ಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳು

ಅಪ್ಪ ಜಸ್ವಂತ್ ಹಾದಿಯಲ್ಲಿ ಮನ್ವೇಂದ್ರ ಸಿಂಗ್

ಅಪ್ಪ ಜಸ್ವಂತ್ ಹಾದಿಯಲ್ಲಿ ಮನ್ವೇಂದ್ರ ಸಿಂಗ್

2004ರಲ್ಲಿ ಸಂಸದರಾಗಿದ್ದ ಸಿಂಗ್, 2013ರ ಚುನಾವಣೆಯಲ್ಲಿ ಬಾರ್ಮೆರ್‌ನ ಶಿಯೋ ಕ್ಷೇತ್ರದಲ್ಲಿ ಮನ್ವೇಂದ್ರ ಸಿಂಗ್‌ ಬಿಜೆಪಿಯಿಂದಲೇ ಸ್ಪರ್ಧಿಸಿ ಶಾಸಕರಾಗಿದ್ದರು.

ಇನ್ನು 2014ರಲ್ಲಿ ಜಸ್ವಂತ್‌ ಸಿಂಗ್‌ ಅವರಿಗೆ ಬರ್ಮೇರ್‌ - ಜೈಸಲ್ಮೇರ್‌ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಸಿಗಲಿಲ್ಲ. ಬಿಜೆಪಿ ವಿರುದ್ಧ ಬಂಡಾಯ ಸಾರಿ, ಜಸ್ವಂತ್‌ ಸಿಂಗ್‌ ಸ್ವತಂತ್ರವಾಗಿ ಸ್ಪರ್ಧಿಸಿ, ಸೋಲು ಕಂಡಿದ್ದರು.

ಪಶ್ಚಿಮ ರಾಜಸ್ಥಾನ ಭಾಗದಲ್ಲಿ ರಜಪೂತರ ಮತಗಳು

ಪಶ್ಚಿಮ ರಾಜಸ್ಥಾನ ಭಾಗದಲ್ಲಿ ರಜಪೂತರ ಮತಗಳು

ಪಶ್ಚಿಮ ರಾಜಸ್ಥಾನ ಭಾಗದಲ್ಲಿ ರಜಪೂತರ ಮತಗಳು ನಿರ್ಣಾಯಕವಾಗಿದೆ. ಮನ್ವೇಂದ್ರ ಸಿಂಗ್‌ ಅವರು ಕಾಂಗ್ರೆಸ್ಸಿಗೆ ಸೇರಿರುವುದರಿಂದ ರಜಪುರೋಹಿತ, ಚರಣ, ಪ್ರಜಾಪತಿ ಸಮುದಾಯದವರು ಕಾಂಗ್ರೆಸ್ ಬೆಂಬಲಿಸುವ ನಿರೀಕ್ಷೆಯಿದೆ. ಆದರೆ, ರಾಜಸ್ಥಾನದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಡಳಿತದಿಂದ ಬೇಸತ್ತಿದ್ದರೂ ಮೋದಿ ಬಗ್ಗೆ ಇನ್ನೂ ನಂಬಿಕೆಯಿದೆ. ಕಾಂಗ್ರೆಸ್ಸಿಗೆ ಮತ ವಿಭಜನೆ ಅಷ್ಟು ಸುಲಭವಲ್ಲ ಎಂಬ ಮಾತು ಕೂಡಾ ಇದೆ.

ಡಿಸೆಂಬರ್ 7ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್‌ 11ರ ಫಲಿತಾಂಶ ಎಲ್ಲಕ್ಕೂ ಉತ್ತರ ನೀಡಲಿದೆ.

ಎಬಿಪಿ ನ್ಯೂಸ್ ಸಮೀಕ್ಷೆ : 3 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rajasthan BJP MLA Manvendra Singh joined the Congress in the presence of party president Rahul Gandhi in New Delhi on Wednesday. Singh, son of ailing BJP stalwart and former Union minister Jaswant Singh, as well as state Congress president Sachin Pilot and former Chief Minister Ashok Gehlot confirmed the development on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more