ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ಸಚಿವರಾಗಿ ಪರಿಕ್ಕರ್ ಮಾಡಬೇಕೆಂದಿದ್ದ ಈ ಕೆಲಸ ಕನಸಾಗಿಯೇ ಉಳಿಯದಿರಲಿ

|
Google Oneindia Kannada News

ಮಾತೃಭೂಮಿಗಾಗಿ ಸೈನಿಕ ಮಾಡುವ ತ್ಯಾಗಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ವೈರಿಯನ್ನು ಹೊಡೆದುರುಳಿಸಿದಾಗ ಆಗುವ ಸಂತೋಷ, ಅದೇ ನಮ್ಮ ಸೈನಿಕ ಹುತಾತ್ಮನಾದಾಗ ಆಗುವ ದುಃಖ ಅಷ್ಟಿಷ್ಟಲ್ಲ, ವಿಶ್ವದ ಶಕ್ತಿಶಾಲಿ ಸೇನೆಯ ಪಟ್ಟಿಯಲ್ಲಿ ನಮ್ಮ ದೇಶ ಮಂಚೂಣಿಯಲ್ಲಿ ಬರಬೇಕು ಎನ್ನುವ ತವಕ ನನ್ನದು ಎನ್ನುವ ಮಾತನ್ನು ಮನೋಹರ್ ಪರಿಕ್ಕರ್ ಹಿಂದೊಮ್ಮೆ ಹೇಳಿದ್ದರು.

ವರ್ಷಗಳ ಕಾಲ ಮಾಹಾಮಾರಿ ಕ್ಯಾನ್ಸರ್ ಜೊತೆಗಿನ ಹೋರಾಟದಲ್ಲಿ ಕೊನೆಗೂ ಸೋತ ಮಾಜಿ ರಕ್ಷಣಾ ಸಚಿವ, ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಭಾನುವಾರ (ಮಾರ್ಚ್ 17) ನಿಧನರಾಗಿದ್ದಾರೆ. ಆದರೆ, ಅವರ ಜೀವನಶೈಲಿ, ಜೀವನೋತ್ಸಾಹ ಮತ್ತು ಕರ್ತವ್ಯಪ್ರಜ್ಞೆ, ದೇಶದ ರಾಜಕೀಯ ಮುಖಂಡರಿಗೆ ಆದರ್ಶಪ್ರಾಯವಾಗಿ ಉಳಿಯಬೇಕಾಗಿದೆ.

ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ವ್ಯಕ್ತಿತ್ವವನ್ನು ಹೊಂದಿದ್ದ ಮನೋಹರ್ ಪರಿಕ್ಕರ್, ತಮ್ಮ ಶಾಲಾ ಜೀವನದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದವರು. 1978ರಲ್ಲಿ ಮುಂಬೈ ಐಐಟಿಯಲ್ಲಿ ಲೋಹವಿಜ್ಞಾನ ಇಂಜಿನಿಯರಿಂಗ್ (metallurgical engineering) ನಲ್ಲಿ ಡಿಗ್ರಿಯನ್ನು ಪರಿಕ್ಕರ್ ಪಡೆದುಕೊಂಡಿದ್ದರು.

ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳುಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳು

ತಾವು ರಕ್ಷಣಾ ಸಚಿವರಾಗಿದ್ದ ವೇಳೆ, ಸ್ವಾತಂತ್ಯಾನಂತರ ಭಾರತದ ಯಾವ ಯಾವ ಸರಕಾರವಾಗಲಿ, ರಕ್ಷಣಾ ಇಲಾಖೆಯಾಗಲಿ ಕೈಗೆತ್ತಿಕೊಳ್ಳದ ಕೆಲಸವನ್ನು ತಾನು ಮಾಡಬೇಕು ಎನ್ನುವ ಆಶಯವನ್ನು ಪರಿಕ್ಕರ್ ಹೊಂದಿದ್ದರು. ಅದು ನನ್ನಿಂದ ಸಾಧ್ಯವಾಗಿಲ್ಲ ಎನ್ನುವ ನೋವಿನ ಮಾತನ್ನೂ ಪರಿಕ್ಕರ್ ಆಡಿದ್ದರು. ಪರಿಕ್ಕರ್ ಕಂಡಿದ್ದ ಕನಸನ್ನು ಕೇಂದ್ರದಲ್ಲಿ ಮುಂಬರುವ ಸರಕಾರ ಆದ್ಯತೆಯಲ್ಲಿ ತೆಗೆದುಕೊಳ್ಳಲಿ. ಪರಿಕ್ಕರ್ ಕಂಡಿದ್ದ ಕನಸು, ನಮ್ಮ ಯೋಧರಿಗಾಗಿ..

ಸರಕಾರ ರಚಿಸಲು ಮಾಡಿದ್ದ ಸರ್ಕಸ್ಸಿಗೂ ಪರಿಕ್ಕರ್ ವಿರೋಧ ವ್ಯಕ್ತಪಡಿಸಿದ್ದರು

ಸರಕಾರ ರಚಿಸಲು ಮಾಡಿದ್ದ ಸರ್ಕಸ್ಸಿಗೂ ಪರಿಕ್ಕರ್ ವಿರೋಧ ವ್ಯಕ್ತಪಡಿಸಿದ್ದರು

ಗೋವಾದ ಮುಖ್ಯಮಂತ್ರಿಯಾಗಿದ್ದ ವೇಳೆ, ಬಿಜೆಪಿ ಸರಕಾರ ರಚಿಸಲು ತಾನು ಮಾಡಿದ್ದ ಕೆಲವೊಂದು ಸರ್ಕಸ್ಸಿಗೂ ಪರಿಕ್ಕರ್ ವಿರೋಧ ವ್ಯಕ್ತಪಡಿಸಿದ್ದರು. ವಿದೇಶದಲ್ಲಿ ಚಿಕಿತ್ಸೆಗೂ ಬಾಗದ ತನ್ನ ದೇಹದ ಪರಿಸ್ಥಿತಿಯ ನಡುವೆಯೂ ಪರಿಕ್ಕರ್, ಮೂಗಿಗೆ ಪೈಪ್ ಇಟ್ಟುಕೊಂಡು, ಪ್ರಸಕ್ತ ಸಾಲಿನ ಆಯವ್ಯಯವನನ್ನು ಮಂಡಿಸಿದ್ದರು. ನನ್ನ ಈಗಿನ ಪರಿಸ್ಥಿತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಬಜೆಟ್ ಮಂಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಆದರೆ, ಮತ್ತೆ ಬರುತ್ತೇನೆ.. ಫುಲ್ ಜೋಷ್ ನಿಂದ ಅಸೆಂಬ್ಲಿಗೆ ಬರುತ್ತೇನೆ ಎಂದು ಪರಿಕ್ಕರ್ ಹೇಳಿದ್ದರು. ಆದರೆ, ವಿಧಿಯ ಆಟ ಬೇರೆಯಿತ್ತು..

ಕೊನೆಯುಸಿರುವವರೆಗೂ ಸೇವೆ ಸಲ್ಲಿಸಲು ಬಯಸಿದ್ದ ಮನೋಹರ್ ಪರಿಕರ್ ಕೊನೆಯುಸಿರುವವರೆಗೂ ಸೇವೆ ಸಲ್ಲಿಸಲು ಬಯಸಿದ್ದ ಮನೋಹರ್ ಪರಿಕರ್

ಸಾಧ್ಯವಾದ ಕಡೆಯೆಲ್ಲಾ ತಮ್ಮ ಸ್ಕೂಟರ್ ನಲ್ಲೇ ಪ್ರಯಾಣಿಸುತ್ತಿದ್ದ ಪರಿಕ್ಕರ್

ಸಾಧ್ಯವಾದ ಕಡೆಯೆಲ್ಲಾ ತಮ್ಮ ಸ್ಕೂಟರ್ ನಲ್ಲೇ ಪ್ರಯಾಣಿಸುತ್ತಿದ್ದ ಪರಿಕ್ಕರ್

ಸಾಧ್ಯವಾದ ಕಡೆಯೆಲ್ಲಾ ತಮ್ಮ ಸ್ಕೂಟರ್ ನಲ್ಲೇ ಪ್ರಯಾಣಿಸುತ್ತಿದ್ದ ಪರಿಕ್ಕರ್, ತಮ್ಮ 26ನೇ ವಯಸ್ಸಿನಲ್ಲಿ ಆರ್ ಎಸ್ ಎಸ್ ಸಂಘಟನೆಯ ಸಂಘ ಸಂಚಾಲಕನಾಗಿ ಕೆಲಸ ನಿರ್ವಹಿಸಿದ್ದರು. ಗೋವಾದ ಮುಖ್ಯಮಂತ್ರಿಯಾಗಿ ಅಕ್ರಮ ಮರಳುಗಾರಿಕೆಯನ್ನು ತಡೆಯುವಲ್ಲಿ ವಿಫಲರಾದರು ಎನ್ನುವ ಅಪವಾದದ ನಡುವೆಯೂ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆ, ಗೃಹಿಣಿಯರಿಗೆ ಮಾಸಿಕ ಸಂಬಳ ಮುಂತಾದ ಯೋಜನೆಗಳು, ಪರಿಕ್ಕರ್ ಅವರಿಗೆ ಗೋವಾದಲ್ಲಿ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

ಸಾವಿನ ಪಕ್ಕದಲ್ಲೇ ಕೂತು ಕೊನೆಯ ಬಾರಿ ಫೈಲ್ ಗೆ ಸಹಿ ಮಾಡಿದ್ದ ಪರಿಕ್ಕರ್ ಸಾವಿನ ಪಕ್ಕದಲ್ಲೇ ಕೂತು ಕೊನೆಯ ಬಾರಿ ಫೈಲ್ ಗೆ ಸಹಿ ಮಾಡಿದ್ದ ಪರಿಕ್ಕರ್

ದೇಶದ ಆಯಕಟ್ಟಿನ ರಕ್ಷಣಾ ಇಲಾಖೆಯ ಮುಖ್ಯಸ್ಥ

ದೇಶದ ಆಯಕಟ್ಟಿನ ರಕ್ಷಣಾ ಇಲಾಖೆಯ ಮುಖ್ಯಸ್ಥ

ನವೆಂಬರ್ 2014 ರಿಂದ ಮಾರ್ಚ್ 2018ರ ಅವಧಿಯಲ್ಲಿ ದೇಶದ ಆಯಕಟ್ಟಿನ ರಕ್ಷಣಾ ಇಲಾಖೆಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ ಮನೋಹರ್ ಪರಿಕ್ಕರ್, ತಮ್ಮ ಅವಧಿಯಲ್ಲಿ ಹಲವು ಸುಧಾರಣಾ ಯೋಜನೆಗಳನ್ನು ಕೈಗೊಂಡಿದ್ದರು. ಗೋವಾ ಸಿಎಂ ಹುದ್ದೆ ತ್ಯಜಿಸಲು ಒಲ್ಲದ ಮನಸ್ಸಿನಲ್ಲೇ ರಕ್ಷಣಾ ಮಂತ್ರಿಯಾಗಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದ ಪರಿಕ್ಕರ್, ಕರ್ತವ್ಯದ ವೇಳೆ ಅಂಗವಿಕಲರಾಗುವ ಸೈನಿಕರಿಗೆ ವಿಶೇಷ ಸವಲತ್ತು ನೀಡಲು ಪ್ರಯತ್ನಿಸಿದ್ದರು. ಅದರಲ್ಲೂ ಪ್ರಮುಖವಾಗಿ ಗಡಿಯಲ್ಲಿ ಕೆಲಸ ಮಾಡುವ ಸೈನಿಕರು ಅಂಗವಿಕಲರಾದರೆ, ಅವರಿಗೆ ಮತ್ತು ಅವರ ಕುಟುಂಬದವರಿಗೆ ಸ್ಪೆಷಲ್ ಕೋಟಾದಡಿ ಮಾಸಿಕ ಇಂತಿಷ್ಟು ವರಮಾನ ಬರುವ ಹಾಗೇ, ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದರು.

ಅಂಗವಿಕಲರಾಗುವ ಸೈನಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗಲಿಲ್ಲ

ಅಂಗವಿಕಲರಾಗುವ ಸೈನಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗಲಿಲ್ಲ

ಪ್ರಮುಖವಾಗಿ ಸೈನಿಕರಿಗೆ ನೆರವಾಗುವಂತಹ ಹಲವು ಯೋಜನೆಗಳನ್ನು ನಾವು ತೆಗೆದುಕೊಂಡಿದ್ದೇವೆ. ಆದರೆ, ಅಂಗವಿಕಲರಾಗುವ ಸೈನಿಕರಿಗೆ ನನ್ನ ಯೋಚನೆಯಂತೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗಲಿಲ್ಲ ಎನ್ನುವ ನೋವು ನನಗಿದೆ. ಒಟ್ಟಾರೆಯಾಗಿ, ರಕ್ಷಣಾ ಸಚಿವನಾಗಿ ನಾನು ಏನು ಮಾಡಿದೆ ಎಂದು ಅವಲೋಕಿಸಿದರೆ, ಮಾಡಿದ್ದು ಕಮ್ಮಿ, ಮಾಡಬೇಕಾಗಿರುವುದು ಇನ್ನೂ ಬೇಕಾದಷ್ಟು ಇದೆ ಎಂದು ಮನೋಹರ್ ಪರಿಕ್ಕರ್ ಹೇಳಿದ್ದರು.

ರಫೇಲ್ ಬಗ್ಗೆ ಎಲ್ಲಾ ಸತ್ಯವನ್ನು ಪಾರಿಕರ್ ಮಾತ್ರ ಬಹಿರಂಗ ಪಡಿಸಲು ಸಾಧ್ಯ

ರಫೇಲ್ ಬಗ್ಗೆ ಎಲ್ಲಾ ಸತ್ಯವನ್ನು ಪಾರಿಕರ್ ಮಾತ್ರ ಬಹಿರಂಗ ಪಡಿಸಲು ಸಾಧ್ಯ

ಪರಿಕ್ಕರ್ ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲೇ ರಫೇಲ್ ಯುದ್ದವಿಮಾನ ಡೀಲ್ ಗೆ ಸಹಿಹಾಕಿದ್ದು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಪರಿಕ್ಕರ್ ಅವರಿಗೆ ಇಂಚಿಂಚು ಮಾಹಿತಿಯಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು. ರಫೇಲ್ ಬಗ್ಗೆ ಎಲ್ಲಾ ಸತ್ಯವನ್ನು ಪರಿಕ್ಕರ್ ಮಾತ್ರ ಬಹಿರಂಗ ಪಡಿಸಲು ಸಾಧ್ಯ ಎಂದು ಕಾಂಗ್ರೆಸ್ ದೂರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

English summary
As defence minister Manohar Parrikar tried to address disable jawans issues. He tried to address the problems faced by the soldiers disabled due to injuries received in the line of duty, but he was telling "what we did was nothing".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X