ಗೋವಾ ಮುಖ್ಯಮಂತ್ರಿಯಾಗಿ ಪರಿಕ್ಕರ್ ಮಂಗಳವಾರ ಪ್ರಮಾಣ

Posted By:
Subscribe to Oneindia Kannada

ಪಣಜಿ, ಮಾರ್ಚ್ 13 : ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮತ್ತೊಮ್ಮೆ ಗೋವಾದ ಮುಖ್ಯಮಂತ್ರಿಯಾಗಿ ಮಂಗಳವಾರ ಸಂಜೆ 5.30ಕ್ಕೆ ಪ್ರಮಾಣ ಸ್ವೀಕರಿಸಲಿದ್ದಾರೆ.

40 ಕ್ಷೇತ್ರಗಳಿರುವ ಗೋವಾದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ 13 ಸ್ಥಾನ ಗಳಿಸಿದರೂ ಆಡಳಿತದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಕಾಂಗ್ರೆಸ್ 17 ಸ್ಥಾನ ಗಳಿಸಿದರೂ ಅಧಿಕಾರದಿಂದ ವಂಚಿತವಾಗಿದೆ.

ಬಹುಮತಕ್ಕೆ 21 ಸ್ಥಾನಗಳ ಅವಶ್ಯಕತೆಯಿದೆ. ಇತರ ಪಕ್ಷಗಳು 10 ಸ್ಥಾನಗಳನ್ನು ಗೆದ್ದಿದ್ದು, ಬಹುತೇಕ ಶಾಸಕರು ಮನೋಹರ್ ಪರಿಕ್ಕರ್ ಅವರೇ ಮುಖ್ಯಮಂತ್ರಿಯಾಗಬೇಕೆಂದು ಬೆಂಬಲ ಸೂಚಿಸಿದ್ದರಿಂದ, ಕೇಂದ್ರ ಸ್ಥಾನವನ್ನು ತ್ಯಜಿಸಿ ಮತ್ತೆ ರಾಜ್ಯ ರಾಜಕಾರಣಕ್ಕೆ ಪರಿಕ್ಕರ್ ಮರಳುವಂತಾಗಿದೆ. [ಅಂತಿಮ ಫಲಿತಾಂಶ: ಗೋವಾ ಅತಂತ್ರ, ಮುಂದೇನಾಗಬಹುದು?]

Manohar Parrikar to take oath as Goa Chief Minister on Tuesday

ಗೋವಾದಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ 3, ಗೋವಾ ಫಾರ್ವರ್ಡ್ 3, ಎನ್ ಸಿ ಪಿ 1 ಮತ್ತು ಪಕ್ಷೇತರರು 3 ಸ್ಥಾನಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ಪಾಲಿಗೆ ತುತ್ತು ಕೈಗೆ ಬಂದರೂ ಬಾಯಿಗೆ ಬರದಂತಾಗಿದೆ. ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಪರಿಕ್ಕರ್ ಅವರಿಗೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ.

ಒಂದು ವೇಳೆ ಮನೋಹರ್ ಪರಿಕ್ಕರ್ ಅವರು ಬಹುಮತ ಸಾಬೀತುಪಡಿಸಲು ಯಶಸ್ವಿಯಾದರೆ, ಕಾಂಗ್ರೆಸ್ ಮತ್ತೊಂದು ರಾಜ್ಯವನ್ನೂ ಕಳೆದುಕೊಂಡಂತಾಗಿದೆ. 5 ರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಮಾತ್ರ ಕಾಂಗ್ರೆಸ್ ಸಂಪೂರ್ಣ ಬಹುಮತ ಗಳಿಸಿದೆ. [ಗೋವಾದ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ನೇಮಕ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Defence minister Manohar Parrikar to take oath as Goa Chief Minister on Tuesday, 14th March at 5 pm.
Please Wait while comments are loading...