ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದಲ್ಲಿ ಸರ್ಕಾರ ರಚಿಸಲು ಮುಂದಾದ ಕಾಂಗ್ರೆಸ್

|
Google Oneindia Kannada News

ಪಣಜಿ, ಸೆಪ್ಟೆಂಬರ್ 17: ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಅನಾರೋಗ್ಯ ಪೀಡಿತರಾಗಿ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಗೋವಾ ಕಾಂಗ್ರೆಸ್ ಸರ್ಕಾರ ರಚನೆ ಸಾಹಸದಲ್ಲಿ ತೊಡಗಿದೆ. ಈ ಬಗ್ಗೆ ಮಾತುಕತೆ ನಡೆಸಲು ರಾಜ್ಯಪಾಲರ ಅನುಮತಿ ಕೋರಿದ್ದಾರೆ.

ಗೋವಾಕ್ಕೆ ಹೊಸ ಸಿಎಂ ಹುಡುಕಾಟ: ಅವಕಾಶ ಕೊಡುವಂತೆ ಮಿತ್ರ ಪಕ್ಷದ ಬೇಡಿಕೆ ಗೋವಾಕ್ಕೆ ಹೊಸ ಸಿಎಂ ಹುಡುಕಾಟ: ಅವಕಾಶ ಕೊಡುವಂತೆ ಮಿತ್ರ ಪಕ್ಷದ ಬೇಡಿಕೆ

ಗೋವಾ ಕಾಂಗ್ರೆಸ್ ಸಮಿತಿ ಸದಸ್ಯರು ಇಂದು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಆದರೆ, ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರನ್ನು ಭೇಟಿ ಮಾಡುವ ಅವಕಾಶ ಸಿಗಲಿಲ್ಲ ಎಂದು ಎಎನ್ ಐ ವರದಿ ಮಾಡಿದೆ.

ಗೋವಾ ಕಾಂಗ್ರೆಸ್ಸಿನಿಂದ ಭಾರತ್ ಬಂದ್ ಗೆ ಬಹಿಷ್ಕಾರಗೋವಾ ಕಾಂಗ್ರೆಸ್ಸಿನಿಂದ ಭಾರತ್ ಬಂದ್ ಗೆ ಬಹಿಷ್ಕಾರ

ಗೋವಾ ಅಸೆಂಬ್ಲಿಯಲ್ಲಿ 16 ಮಂದಿ ಕಾಂಗ್ರೆಸ್ ಶಾಸಕರಿದ್ದರೆ, ಬಿಜೆಪಿ 14 ಮಂದಿ ಶಾಸಕರನ್ನು ಹೊಂದಿದೆ. ಇತ್ತ ಬಿಜೆಪಿ ಹೈಕಮಾಂಡ್ ನಾಯಕರು ಗೋವಾದಲ್ಲಿ ನಾಯಕತ್ವ ಬದಲಿ ಮಾಡಲು ಚರ್ಚೆ ನಡೆಸಿದ್ದಾರೆ. ಆದರೆ, ಮುಖ್ಯಮಂತ್ರಿ ಸ್ಥಾನ ತೊರೆಯಲು ಮುಂದಾಗಿದ್ದ ಮನೋಹರ್ ಪರಿಕ್ಕರ್ ಅವರ ಮನವಿಯನ್ನು ಪುರಸ್ಕರಿಸಿಲ್ಲ. ಬದಲಿಗೆ ಗೋವಾ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಹೇಳಿದೆ.

Manohar Parrikar In AIIMS, Congress Stakes Claim To Form Government In Goa

ರಾಜ್ಯಪಾಲರಿಗೆ ಸರ್ಕಾರ ರಚನೆಗೆ ಕೋರಿ ಮನವಿ ಸಲ್ಲಿಕೆ ಬಗ್ಗೆ ಯಾವುದೇ ಮಾಹಿತಿಯಿಲ್ಲ ಗೋವಾದಲ್ಲಿ ಬಿಜೆಪಿಯಲ್ಲಿ ಸರ್ಕಾರ ಸ್ಥಿರವಾಗಿದೆ ಎಂದು ಬಿಜೆಪಿ ನಾಯಕ ರಾಮ್ ಲಾಲ್ ಹೇಳಿದ್ದಾರೆ.

English summary
With Chief Minister Manohar Parrikar admitted to AIIMS in Delhi, the Goa Congress today claimed that the state government was not functioning and staked claim to form government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X