ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್: ಪರಿಕ್ಕರ್ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ!

|
Google Oneindia Kannada News

ಕೊಚ್ಚಿ, ಜನವರಿ 30: "ಹೊಸ ರಫೇಲ್ ಡೀಲ್ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಏನೂ ಗೊತ್ತಿಲ್ಲ. ಇದರಲ್ಲಿ ಅವರ ಪಾತ್ರವಿಲ್ಲ ಎಂದು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಗೋವಾದ ಪಣಜಿಯಲ್ಲಿ ಮಂಗಳವಾರ ಪರಿಕ್ಕರ್ ಅವರನ್ನು ಭೇಟಿಯಾದ ರಾಹುಲ್ ಗಾಂಧಿ, ರಫೇಲ್ ಡೀಲ್ ವಿಚಾರವಾಗಿಯೂ ಮಾತುಕತೆ ನಡೆಸಿದ್ದಾರಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಖಾಸಗಿ ಪ್ರವಾಸದ ಮೇಲೆ ಗೋವಾದಲ್ಲಿದ್ದ ರಾಹುಲ್, ಅನಾರೋಗ್ಯದಿಂದ ಬಳಲುತ್ತಿರುವ ಪರಿಕ್ಕರ್ ಅವರ ಯೋಗಕ್ಷೇಮ ವಿಚಾರಿಸಲು ಅವರನ್ನು ಭೇಟಿಯಾಗಿದ್ದರು ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.

ಅಚ್ಚರಿ ಮೂಡಿಸಿದ ಮನೋಹರ್ ಪರಿಕ್ಕರ್-ರಾಹುಲ್ ಗಾಂಧಿ ಭೇಟಿ!ಅಚ್ಚರಿ ಮೂಡಿಸಿದ ಮನೋಹರ್ ಪರಿಕ್ಕರ್-ರಾಹುಲ್ ಗಾಂಧಿ ಭೇಟಿ!

ಆದರೆ ಈ ಭೇಟಿಯ ನಂತರ ಕೇರಳದ ಕೊಚ್ಚಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಗೆಳೆಯರೇ, ಮಾಜಿ ರಕ್ಷಣಾ ಸಚಿವ ಪರಿಕ್ಕರ್ ಅವರು, ಹೊಸ ರಫೇಲ್ ಒಪ್ಪಂದದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರೆ ಈ ಹೊಸ ಒಪ್ಪಂದದ ಸೂತ್ರಧಾರಿ ಪ್ರಧಾನಿ ನರೇಂದ್ರ ಮೋದಿ. ಅನಿಲ್ ಅಂಬಾನಿ ಅವರಿಗೆ ಸಹಾಯ ಮಾಡುವುದಕ್ಕಾಗಿ ಅವರು ಈ ಡೀಲ್ ಮಾಡಿಕೊಂಡಿದ್ದಾರೆ" ಎಂದರು.

Manohar Parrikar has no role in new rafale deal: Rahul Gandhi

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳುರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

ಇಷ್ಟು ದಿನ ರಫೇಲ್ ಡೀಲ್ ಗೆ ಸಂಬಂಧಿಸಿದ ಸಾಲು ಸಾಲು ಟ್ವೀಟ್ ಮೂಲಕ ಮನೋಹರ್ ಪರಿಕ್ಕರ್ ಅವರನ್ನೂ ಟೀಕಿಸುತ್ತಿದ್ದ ರಾಹುಲ್ ಗಾಂಧಿ, ಇದೀಗ ವರಸೆ ಬದಲಿಸಿ, ಪರಿಕ್ಕರ್ ಬೆಂಬಲಕ್ಕೆ ನಿಂತಿದ್ದು ಸೋಜಿಗವೆನ್ನಿಸಿದೆ.

'ಮೂರು' ಮರೆತ ರಾಹುಲ್ ಗಾಂಧಿ, ಕಾಲೆಳೆದ ಟ್ರೋಲ್ ಹೈಕ್ಳು! 'ಮೂರು' ಮರೆತ ರಾಹುಲ್ ಗಾಂಧಿ, ಕಾಲೆಳೆದ ಟ್ರೋಲ್ ಹೈಕ್ಳು!

ಭಾರತ ಮತ್ತು ಫ್ರಾನ್ಸ್ ಸರ್ಕಾರದ ನಡುವೆ ನಡೆದ ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ಅದರ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದನ್ನೇ ತನ್ನ ಪ್ರಧಾನ ಅಸ್ತ್ರವನ್ನಾಗಿ ಬಳಸಲು ನಿರ್ಧರಿಸಿದೆ.

English summary
Hours after a "personal visit" to Goa Chief Minister Manohar Parrikar at his office in Panaji, Congress President Rahul Gandhi today claimed that the former Defence Minister had clearly stated he had nothing to do with the "new deal" on Rafale fighter jets, and targeted Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X