• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ಸಾವನ್ನಪ್ಪಿದ 18ನೇ ವ್ಯಕ್ತಿ ಮನೋಹರ್ ಪರಿಕರ್

By ಅನಿಲ್ ಆಚಾರ್
|

ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವಾಗಲೇ ನಿಧನರಾದ ಹದಿನೆಂಟನೇ ಹಾಗೂ ಗೋವಾದ ಎರಡನೇ ಮುಖ್ಯಮಂತ್ರಿ ಮನೋಹರ್ ಪರಿಕರ್. ಹೀಗೆ ಅಧಿಕಾರದಲ್ಲಿ ಇರುವಾಗಲೇ ನಿಧನರಾದ ಭಾರತದ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ.

* ಹುದ್ದೆಯಲ್ಲಿದ್ದಾಗಲೇ ಮೃತಪಟ್ಟ ಭಾರತದ ಹದಿನೆಂಟನೇ ಹಾಗೂ ಗೋವಾದ ಎರಡನೇ ಮುಖ್ಯಮಂತ್ರಿ ಮನೋಹರ್ ಪರಿಕರ್

ರಕ್ಷಣಾ ಸಚಿವರಾಗಿ ಪರಿಕ್ಕರ್ ಮಾಡಬೇಕೆಂದಿದ್ದ ಈ ಕೆಲಸ ಕನಸಾಗಿಯೇ ಉಳಿಯದಿರಲಿ

* ಮಹಾರಾಷ್ಟ್ರ ಗೋಮಂತಕ್ ಪಾರ್ಟಿಯ ನೇತಾರ ದಯಾನಂದ್ ಬಂಡೋಕರ್ 1973ರ ಆಗಸ್ಟ್ ನಲ್ಲಿ ನಿಧನರಾದರು. 1963ರಲ್ಲಿ ಅದ್ಬುತ ಗೆಲುವು ಸಾಧಿಸಿ, ಗೋವಾದ ಮೊದಲ ಮುಖ್ಯಮಂತ್ರಿ ಆಗಿದ್ದರು. 1967 ಹಾಗೂ 1972ರಲ್ಲೂ ಮಹಾರಾಷ್ಟ್ರ ಗೋಮಂತಕ್ ಪಾರ್ಟಿ ಗೆಲುವು ಸಾಧಿಸಿತ್ತು.

* ತಮಿಳುನಾಡಿನ ಮೂವರು ಅಧಿಕಾರಾರೂಢ ಮುಖ್ಯಮಂತ್ರಿಗಳು ಸಾವನ್ನಪ್ಪಿದ್ದಾರೆ. ಮೊದಲನೆಯವರು ಸಿ.ಎನ್.ಅಣ್ಣಾದುರೈ. 1967ರ ತಮಿಳುನಾದು ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾದುರೈ ಅವರ ನೇತೃತ್ವದಲ್ಲೇ ಕಾಂಗ್ರೆಸ್ ಅನ್ನು ಸೋಲಿಸಲಾಯಿತು. ಮುಖ್ಯಮಂತ್ರಿ ಹುದ್ದೆಗೆ ಏರಿದ ಎರಡು ವರ್ಷದಲ್ಲಿ ಅವರು ನಿಧನರಾದರು.

* ತಮಿಳುನಾಡಿನ ಜನಪ್ರಿಯ ನಟ, ಅಲ್ ಇಂಡಿಯನ್ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಸ್ಥಾಪಕ ಎಂ.ಜಿ.ರಾಮಚಂದ್ರನ್ ಅಧಿಕಾರದಲ್ಲಿ ಇದ್ದಾಗಲೇ 1987ರ ಡಿಸೆಂಬರ್ ನಲ್ಲಿ ನಿಧನರಾದರು.

ಮನೋಹರ್ ಪರಿಕ್ಕರ್ ಹೇಳಿದ ಕಲ್ಲಂಗಡಿ ಹಣ್ಣಿನ ಕಥೆ

* ಎಐಎಡಿಎಂಕೆಯಿಂದ ಮತ್ತೊಬ್ಬ ಅಧಿಕಾರಾರೂಢ ಮುಖ್ಯಮಂತ್ರಿ ಜೆ.ಜಯಲಲಿತಾ ಡಿಸೆಂಬರ್ 2016ರಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದರು.

* ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಸ್ಥಾಪಕ, ಮೂರು ಬಾರಿ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದ ಶೇಕ್ ಅಬ್ದುಲ್ಲಾ ತಾವು ನಿಧನರಾಗುವ ತನಕ ಮುಖ್ಯಮಂತ್ರಿಯಾಗಿದ್ದು, 1982ರಲ್ಲಿ ಸಾವನ್ನಪ್ಪಿದರು.

ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳು

* ಪಿಡಿಪಿ ಸ್ಥಾಪಕ ಮುಫ್ತಿ ಮೊಹ್ಮದ್ ಸಯೀದ್ ಜನವರಿ 7, 2016ರಲ್ಲಿ ಅಧಿರದಲ್ಲಿ ಇರುವಾಗಲೇ ನಿಧನರಾದರು. ವಿವಿಧ ಸಂದರ್ಭದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು.

* ಗುಜರಾತ್ ನ ಇಬ್ಬರು ಮುಖ್ಯಮಂತ್ರಿ ಅಧಿಕಾರದಲ್ಲಿ ಇದ್ದಾಗಲೇ ಸಾವನ್ನಪ್ಪಿದ್ದಾರೆ. ಭಾರತ-ಪಾಕಿಸ್ತಾನ ಮಧ್ಯೆ 1965ರಲ್ಲಿ ನಡೆದ ಯುದ್ಧದಲ್ಲಿ ಪಾಕ್ ವಾಯು ಸೇನೆ ವಿಮಾನ ಹೊಡೆದುರುಳಿಸಿ ಬಲ್ವಂತ್ ರಾಯ್ ಮೆಹ್ತಾ ಮರಣ ಹೊಂದಿದರು.

* 1990ರಿಂದ 1994ರಲ್ಲಿ ತಾವು ನಿಧನರಾಗುವ ತನಕ ಗುಜರಾತ್ ಮುಖ್ಯಮಂತ್ರಿ ಆಗಿದ್ದರು ಚಿಮ್ನಾಭಾಯ್ ಪಟೇಲ್. ಮೆಹ್ತಾ ಸೇರಿದಂತೆ ಮೂವರು ಮುಖ್ಯಮಂತ್ರಿಗಳು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಆ ಮೂವರೂ ಕಾಂಗ್ರೆಸ್ ನವರು.

ಹುಬ್ಬಳ್ಳಿ ನನಗೆ ಎರಡನೇ ತವರು ಮನೆ ಇದ್ದಂತೆ ಎಂದಿದ್ದ ಪರಿಕ್ಕರ್

* ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ 2009ರ ಸೆಪ್ಟೆಂಬರ್ ನಲ್ಲಿ ವಿಮಾನ ದುರಂತದಲ್ಲಿ ದುರ್ಮರಣಕ್ಕೆ ಈಡಾದರು. ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿದ ಕೆಲ ತಿಂಗಳಲ್ಲಿ ಸಾವನ್ನಪ್ಪಿದರು.

* ಅರುಣಾಚಲ ಪ್ರದೇಶದ ದೋರ್ಜಿ ಖಂಡು ಮೇ 2011ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದರು.

* ಪಂಜಾಬ್ ನ ಮುಖ್ಯಮಂತ್ರಿ ಬೇಅಂತ್ ಸಿಂಗ್ ಚಂಡೀಗಢದಲ್ಲಿನ ರಾಜ್ಯ ಕಾರ್ಯಾಲಯದಲ್ಲಿ ಸಿಖ್ ಉಗ್ರವಾದಿಗಳಿಂದ 1995ರಲ್ಲಿ ಹತ್ಯೆಗೀಡಾದರು.

* ಮಹಾರಾಷ್ಟ್ರದ ಎರಡನೇ ಮುಖ್ಯಮಂತ್ರಿ ಮಾರುತ್ ರಾವ್ ಕನ್ನಮ್ ವರ್ (1962-63) ಮುಖ್ಯಮಂತ್ರಿ ಆಗಿದ್ದಾಗಲೇ ನಿಧನರಾದರು.

* ಸ್ವಾತಂತ್ರ್ಯ ಹೋರಾಟಗಾರ ಬಿಧನ್ ಚಂದ್ರ ರಾಯ್ ಪಶ್ಚಿಮ ಬಂಗಾಲಕ್ಕೆ 1952ರಿಂದ ಅವರು ನಿಧನರಾಗುವ 1962ರ ತನಕ ಮುಖ್ಯಮಂತ್ರಿಯಾಗಿದ್ದರು.

* ಬರ್ಕತ್ ಉಲ್ಲಾ ಖಾನ್ 1971ರಿಂದ 1973ರಲ್ಲಿ ನಿಧನರಾಗುವ ತನಕ ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದರು.

* ಕಾಂಗ್ರೆಸ್ ನ ಶ್ರೀಕೃಷ್ಣ ಸಿಂಗ್ ಬಿಹಾರದ ಮೊದಲ ಮುಖ್ಯಮಂತ್ರಿಯಾಗಿ 1952ರಿಂದ ಅವರು ನಿಧನರಾಗುವ 1961ರ ತನಕ ಇದ್ದರು.

* ಕೇಂದ್ರ ಪ್ರಾಂತ್ಯದ ಮುಖ್ಯಮಂತ್ರಿ ಆಗಿದ್ದಾಗಲೇ ಡಿಸೆಂಬರ್ 1956ರಲ್ಲಿ ನಿಧನರಾದವರು ರವಿಶಂಕರ್ ಶುಕ್ಲಾ.

* ಗೋಪಿನಾಥ್ ಬೋರ್ಡೋಲಾಯ್ ಆಸ್ಸಾಂನ ಮುಖ್ಯಸ್ಥರಾಗಿದ್ದವರು 1950ರ ಆಗಸ್ಟ್ ನಲ್ಲಿ ನಿಧನರಾದರು. ಆ ಸ್ಥಾನವನ್ನು ಎರಡು ಸಲ ಅಲಂಕರಿಸಿದ್ದರು.

English summary
Manohar Parrikar to MG Ramachandran: Check out the list of chief ministers who died while still in office .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more