ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಆಪ್ತ ಖಟ್ಟರ್ ಈಗ ಹರ್ಯಾಣ ಮುಖ್ಯಮಂತ್ರಿ

By Mahesh
|
Google Oneindia Kannada News

ಪಂಚಕುಲ(ಹರ್ಯಾಣ), ಅ.26: ಹರ್ಯಾಣ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪನೆಯಾಗಿದೆ. ಪ್ರಪ್ರಥಮ ಬಾರಿಗೆ ಚುನಾವಣೆ ಎದುರಿಸಿ ಶಾಸಕರಾಗಿರುವ ಮನೋಹರ್ ಲಾಲ್ ಖಟ್ಟರ್ ಅವರು ಬಿಜೆಪಿಯಿಂದ ಪ್ರಥಮ ಸಿಎಂ ಆಗಿ ಅ.26ರಂದು ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಹರ್ಯಾಣದ ಪಂಚಕುಲದಲ್ಲಿ ಭಾನುವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕಪ್ತಾನ್ ಸಿಂಗ್ ಸೊಲಂಕಿ ಅವರು ನೂತನ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಹರ್ಯಾಣ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಭಿಮನ್ಯು, ರಾಮ್ ಬಿಲಾಸ್ ಶರ್ಮ, ಅನಿಲ್ ವಿಜ್, ಓಂ ಧಾಂಕರ್ ಮುಂತಾದವರ ಹೆಸರು ಕೇಳಿ ಬಂದಿತ್ತು. ಅದರೆ, ವೀಕ್ಷಕರಾಗಿದ್ದ ಕೇಂದ್ರ ವಸತಿ ಸ‌ಚಿವ ಎಂ. ವೆಂಕಯ್ಯ ನಾಯ್ಡು ಹಾಗೂ ದಿನೇಶ್ ಶರ್ಮ ಅವರು ಖಟ್ಟರ್ ಅವರನ್ನು ಸಿಎಂ ಎಂದು ಘೋಷಿಸಿದರು. [ಖಟ್ಟರ್ ಅವರ ವ್ಯಕ್ತಿ ಚಿತ್ರ ಓದಿ]

ಸುಮಾರು 1೦ ವರ್ಷಗಳ ಕಾಂಗ್ರೆಸ್ ಅಧಿಪತ್ಯಕ್ಕೆ ಮೋದಿ-ಶಾ ಜೋಡಿ ಅಂತ್ಯ ಹಾಡುವ ಮೂಲಕ ಹರ್ಯಾಣದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. 90 ಸ್ಥಾನಗಳಲ್ಲಿ ಬಿಜೆಪಿ 47 ಸ್ಥಾನಗಳಿಸಿದರೆ, ಐಎನ್ ಎಲ್ ಡಿ 20, ಕಾಂಗ್ರೆಸ್ 15, ಎಚ್ ಜೆಸಿ 2 ಸ್ಥಾನ, ಇತರೆ 6 ಸ್ಥಾನ ಪಡೆದುಕೊಂಡಿತ್ತು.ಪ್ರಮಾಣ ವಚನ ಸ್ವೀಕಾರ ಸಮಾರಂಭದ ಚಿತ್ರಗಳು ಮುಂದಿವೆ ನೋಡಿ...[ಹರ್ಯಾಣ ಆಳ್ವಿಕೆ ಮಾಡಿದ ಪಕ್ಷಗಳು]

ಜಾತ್ ಸಮುದಾಯಕ್ಕೆ ಸೇರದ 4ನೇ ಸಿಎಂ

ಜಾತ್ ಸಮುದಾಯಕ್ಕೆ ಸೇರದ 4ನೇ ಸಿಎಂ

ಕಳೆದ 48 ವರ್ಷಗಳಲ್ಲಿ ಹರ್ಯಾಣದಲ್ಲಿ ಜಾತ್ ಸಮುದಾಯೇತರ ಸಿಎಂಗಳಲ್ಲಿ ಪೈಕಿ ಮನೋಹರ್ ಲಾಲ್ ಅವರು ನಾಲ್ಕನೇ ಸಿಎಂ ಆಗಿದ್ದಾರೆ.

ಅಧಿಕಾರ ಮಂಡನೆ ಅನುಮತಿ ಸಿಕ್ಕ ಕ್ಷಣ

ಅಧಿಕಾರ ಮಂಡನೆ ಅನುಮತಿ ಸಿಕ್ಕ ಕ್ಷಣ

ರಾಜ್ಯಪಾಲರ ಬಳಿ ತೆರಳಿ ಅಧಿಕಾರ ಸ್ಥಾಪನೆ ಅನುಮತಿ ಪಡೆದುಕೊಂಡ ಬಳಿಕ.. ಎಡದಿಂದ ಬಲಕ್ಕೆ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಹರ್ಯಾಣ ಬಿಜೆಪಿ ಅಧ್ಯಕ್ಷ ರಾಮ್ ಬಿಲಾಸ್ ಶರ್ಮ

ಸರ್ಕಾರ ಸ್ಥಾಪನೆಗೆ ಆಹ್ವಾನಿಸಿದ ರಾಜ್ಯಪಾಲರು

ಸರ್ಕಾರ ಸ್ಥಾಪನೆಗೆ ಆಹ್ವಾನಿಸಿದ ರಾಜ್ಯಪಾಲರು

ಮನೋಹರ್ ಲಾಲ್ ಅವರನ್ನು ಹರ್ಯಾಣದಲ್ಲಿ ಸರ್ಕಾರ ಸ್ಥಾಪನೆಗೆ ಆಹ್ವಾನಿಸಿದ ರಾಜ್ಯಪಾಲರಾದ ಕಪ್ತಾನ್ ಸಿಂಗ್ ಸೋಲಂಕಿ. ಚಿತ್ರ: ಪಿಟಿಐ

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗಣ್ಯರು

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗಣ್ಯರು

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮೇನಕಾ ಗಾಂಧಿ, ಬಾಬಾ ರಾಮದೇವ್, ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್, ಗುಜರಾತ್ ಸಿಎಂ ಆನಂದಿ ಬೇನ್, ರಾಜಸ್ಥಾನ ಸಿಎಂ ವಸುಂಧರಾ ರಾಜೇ, ಮುರಳಿ ಮನೋಹರ್ ಜೋಶಿ, ಪಂಜಾಬ್ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅಲ್ಲದೆ, ಬಾಬಾರಾಮ್ ದೇವ್, ರವಿಶಂಕರ್ ಗುರೂಜಿ ಮುಂತಾದವರು ಪಾಲ್ಗೊಂಡಿದ್ದರು. ಚಿತ್ರಕೃಪೆ: ಎಎನ್ಐ ಟ್ವೀಟ್

ಸಿಎಂ ರೇಸಿನಲ್ಲಿದ್ದ ಕ್ಯಾಪ್ಟನ್ ಕ್ಯಾಬಿನೆಟ್ ಗೆ

ಸಿಎಂ ರೇಸಿನಲ್ಲಿದ್ದ ಕ್ಯಾಪ್ಟನ್ ಕ್ಯಾಬಿನೆಟ್ ಗೆ

ಸಿಎಂ ರೇಸಿನಲ್ಲಿದ್ದ ಕ್ಯಾಪ್ಟನ್ ಅಭಿಮನ್ಯು ಅವರು ಈಗ ಖಟ್ಟರ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಡಾ. ಅನಿಲ್ ವಿಜ್ ಅವರಿಗೂ ಸಚಿವ ಸ್ಥಾನ

ಡಾ. ಅನಿಲ್ ವಿಜ್ ಅವರಿಗೂ ಸಚಿವ ಸ್ಥಾನ

ಹರ್ಯಾಣ ಮುಖ್ಯಮಂತ್ರಿ ಸ್ಥಾನದ ರೇಸಿನಲ್ಲಿರುವ ಡಾ. ಅನಿಲ್ ವಿಜ್ ಅವರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಬಿಜೆಪಿ ಗೆಲುವಿನ ರುವಾರಿಗಳಲ್ಲಿ ಸಂಗ ಪರಿವಾರದ ಶಿವಪ್ರಕಾಶ್ ಹಾಗೂ ರಾಮ್ ಲಾಲ್ ಅವರಂತೆ ಅನಿಲ್ ವಿಜ್ ಅವರ ಪರಿಶ್ರಮವೂ ಕಾರಣವಾಗಿತ್ತು. [ಕಮಲ ಅರಳಿಸಿದ ಸ್ಟಾರ್ ನಾಯಕರು]

ಹರ್ಯಾಣ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಒಟ್ಟು 6 ಮಂದಿ ಕ್ಯಾಬಿನೆಟ್ ಸಚಿವರು ಐದು ಮಂದಿ ಸಹಾಯಕ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಅನಿಲ್ ವಿಜ್ ಪ್ರಮಾಣ ವಚನ ಸ್ವೀಕಾರ

ಡಾ. ಅನಿಲ್ ವಿಜ್ ಹಾಗೂ ನರವೀರ್ ಸಿಂಗ್ ಪ್ರಮಾಣ ವಚನ ಸ್ವೀಕಾರ ಚಿತ್ರ

ಚಿತ್ರದಲ್ಲಿ ಕವಿತಾ ಜೈನ್ ಪ್ರಮಾಣ ವಚನ ಸ್ವೀಕಾರ

ವಿಕ್ರಮ್ ಜೀತ್ ಥೇಕೆದಾರ್, ಕೃಷನ್ ಕುಮಾರ್, ಕರಣ್ ದೇವ್ ಕಾಂಭೋಜ್ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರು ಸಮಾರಂಭಕ್ಕೆ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು.

English summary
Veteran RSS leader and close aide of PM Narendra Modi, Manohar Lal Khattar was sworn-in as Haryana Chief Minister on Sunday in Panchkula. Here are the few photos from the oath taking ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X