ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹೊಸ ಸೈನ್ಯ ಕಟ್ಟುವ ಕನಸು ಹೊರಹಾಕಿದ ಮೋದಿ'

By Mahesh
|
Google Oneindia Kannada News

ನವದೆಹಲಿ, ಮೇ.31: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡು ಒಂದು ವರ್ಷವಾದ ಮೇಲೆ ಮೊದಲ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಭಾನುವಾರ ನಡೆಸಿಕೊಟ್ಟಿದ್ದಾರೆ. ಬಡತನ ನಿರ್ಮೂಲನೆಗೆ ಹೊಸ ಸೈನ್ಯ ನಿರ್ಮಾಣ, ಎನ್ ಡಿಎ ಯೋಜನೆ ಬಗ್ಗೆ ಮಾತನಾಡಿದ್ದಾರೆ.

ಕಳೆದ ಬಾರಿ ನೇಪಾಳ ಭೂಕಂಪ ಹಾಗೂ ಭಾರತದ ನೆರವಿನ ಬಗ್ಗೆ ಮಾತನಾಡಿದ್ದ ಮೋದಿ ಅವರು ಈ ಬಾರಿ ಎನ್ ಡಿಎ ವಾರ್ಷಿಕೋತ್ಸವ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.

ಮೋದಿ ಅವರ ಭಾಷಣದ ಮುಖ್ಯಾಂಶ ಇಲ್ಲಿದೆ:
* ಈಗ ಭಯಂಕರವಾದ ಬಿಸಿಲಿನ ಬೇಗೆಯಲ್ಲಿ ನಮ್ಮ ಜನ ಬಳಲುತ್ತಿದ್ದಾರೆ. ಪಶು, ಪಕ್ಷಿಗಳ ಬಗ್ಗೆ ಕೂಡಾ ಕಾಳಜಿವಹಿಸಿ, ರಕ್ಷಿಸಿ.
* ಇತ್ತೀಚೆಗೆ ಬೋರ್ಡ್ ಪರೀಕ್ಷೆ ಫಲಿತಾಂಶ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನನ್ನ ಶುಭಕಾಮನೆಗಳು.
* ಸೋಲು-ಗೆಲುವು ಬದುಕಿನ ಭಾಗವಾಗಿದೆ. ನಾವು ಸೋಲಿನಿಂದ ಪಾಠ ಕಲಿಯುವುದು ಸಾಕಷ್ಟಿರುತ್ತದೆ. ಸೋತರಷ್ಟೆ ಗೆಲುವಿನ ಸುಖ ಗೊತ್ತಾಗುತ್ತದೆ ಎಂದಿದ್ದಾರೆ.

Narendra Modi

* ವಿದ್ಯಾರ್ಥಿಗಳು ಪದವಿ ಪಡೆದ ನಂತರ ದೇಶಕ್ಕೆ ನೆರವಾಗಬಲ್ಲ ವೃತ್ತಿ ಆಯ್ಕೆ ಮಾಡಕೊಳ್ಳಲಿ ಎಂದು ಕಿವಿಮಾತು ನೀಡಿದರು.
* ದೇಶದಲ್ಲಿನ ಬಡತನ ನಿರ್ಮೂಲನೆಗಾಗಿ ಹೊಸ ಸೈನ್ಯ ಕಟ್ಟುವ ಮನಸ್ಸಾಗಿದೆ. ಇಂಥದ್ದೊಂದು ಸೈನ್ಯ ಕಟ್ಟಿ ಬಡತನದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.
* ಇತ್ತಿಚೆಗೆ ಆರಂಭಿಸಲಾದ ಕಿಸಾನ್ ಚಾನೆಲ್ ನಮ್ಮ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಕೃಷಿ, ನೀರಾವರಿ ಬಗ್ಗೆ ಇದು ಮುಕ್ತ ವಿಶ್ವವಿದ್ಯಾಲಯವಾಗಲಿದೆ.

* ಕಳೆದ 40 ವರ್ಷಗಳಿಂದ ನಾನು 'One Rank One Pension' ನಂಥ ಯೋಜನೆ ಕನಸು ಕಾಣುತ್ತಿದ್ದೆ. ಈಗ ಇದು ಸಾಕಾರಗೊಳ್ಳುವ ಕಾಲ ಬಂದಿದೆ. ದಯವಿಟ್ಟು ನನಗೆ ಕೆಲ ಸಮಯ ಕೊಡಿ ನಾನು ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಮೋದಿ ಅವರ ಮೇ .31ರ ಮನದ ಮಾತು ಕೇಳಿ:
{video1}

(ಒನ್ ಇಂಡಿಯಾ ಸುದ್ದಿ)

English summary
Prime Minister Narendra Modi on Sunday has addressed the nation through his flagship programme ‘Mann Ki Baat’ over radio. He said I want to build an army which will be by the poor people and for the poor people and the army will fight against poverty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X