ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಒಬಾಮಾ ಮನದ ಮಾತು ಕೇಳಲು ಟ್ಯೂನ್ ಮಾಡಿ

By Mahesh
|
Google Oneindia Kannada News

ನವದೆಹಲಿ, ಜ.27: ಮೂರು ದಿನಗಳ ಭಾರತ ಪ್ರವಾಸ ಮುಗಿಸಿ ಸೌದಿ ಅರೇಬಿಯಾಕ್ಕೆ ತೆರಳುವ ಮುನ್ನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂಡಿ ರೇಡಿಯೋ ಭಾಷಣ ರೆಕಾರ್ಡ್ ಮಾಡಿದ್ದಾರೆ. ಮನ್ ಕಿ ಬಾತ್ ಎಲ್ಲೆಲ್ಲಿ ಪ್ರಸಾರವಾಗುತ್ತದೆ? ಎಲ್ಲಿ ಟ್ಯೂನ್ ಮಾಡಿ ಆಕಾಶವಾಣಿ ಆಲಿಸಬಹುದು ಎಂಬ ವಿವರ ಮುಂದೆ ಓದಿ

ಈ ಬಾರಿಯ ವಿಶೇಷ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಬುಧವಾರದಂದು 30 ರಾಷ್ಟ್ರಗಳ 60 ಭಾಷೆಯಲ್ಲಿ ಪ್ರಸಾರ ಮಾಡುವ ಮೂಲಕ ಸುಮಾರು 200 ಕೋಟಿಗೂ ಅಧಿಕ ಜನರನ್ನು ತಲುಪಲು ಪ್ರಸಾರ ಭಾರತಿ ಸಿದ್ದವಾಗಿದೆ. [ಯುವಜನತೆ ಬಡಿದೆಬ್ಬಿಸಿದ ಬರಾಕ್ ಒಬಾಮಾ ಭಾಷಣ]

ಪ್ರಧಾನಿ ಮೋದಿ ಅವರ ಜನಪ್ರಿಯ 'ಮನ್ ಕಿ ಬಾತ್' ಸರಣಿಯ ಈ ತಿಂಗಳಿನ ಕಂತಿನಲ್ಲಿ ಒಬಾಮಾ-ಮೋದಿ ಜಂಟಿ ಭಾಷಣ ಕೇಳುವ ಅವಕಾಶ ಸಿಗುತ್ತಿದೆ. ಮಂಗಳವಾರ ರಾತ್ರಿ 8 ಗಂಟೆಗೆ ಮನ್ ಕಿ ಬಾತ್ ನಲ್ಲಿ ನಮ್ಮ ದನಿ ಕೇಳಿ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.


ಇದಕ್ಕೂ ಮುನ್ನ ಒಬಾಮಾ-ಮೋದಿ ಅವರಿಗೆ ನೇರವಾಗಿ ಪ್ರಶ್ನೆ, ಸಲಹೆ, ಸೂಚನೆ ನೀಡುವ ಅವಕಾಶವನ್ನು ಟ್ವಿಟ್ಟರ್ ಮೂಲಕ ಕಲ್ಪಿಸಲಾಗಿತ್ತು. ಮನ್ ಕಿ ಬಾತ್ #MannKiBaat ರೇಡಿಯೋ ಕಾರ್ಯಕ್ರಮದಲ್ಲಿ ಅಧ್ಯಕ್ಷ ಒಬಾಮಾ ಹಾಗೂ ಪ್ರಧಾನಿ ಮೋದಿ ಅವರು ಯಾವ ವಿಷಯ ಮಾತನಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

Mann Ki Baat: PM Narendra Modi, US President Barack Obama joint radio address

ಮನ್ ಕಿ ಬಾತ್ ಎಲ್ಲೆಲ್ಲಿ ಪ್ರಸಾರವಾಗುತ್ತದೆ?:
ಜನವರಿ 27 ರ ರಾತ್ರಿ 8 ಗಂಟೆ ನಂತರ ನರೇಂದ್ರ ಮೋದಿ ಅವರ ಅಧಿಕೃತ ವೆಬ್ ತಾಣಕ್ಕೆ ಭೇಟಿ ಕೊಡಿ.. ಈ ಲಿಂಕ್ ಕ್ಲಿಕ್ ಮಾಡಿ

ರೇಡಿಯೋ: ಆಲ್ ಇಂಡಿಯಾ ರೇಡಿಯೋ ನೆಟ್ವರ್ಕ್

ಟಿವಿ: ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಭಾರತಿ

ಲೈವ್ ಸ್ಟ್ರೀಮಿಂಗ್: ಆಕಾಶವಾಣಿ ವೆಬ್ ತಾಣ ಅಥವಾ ಈ ವೆಬ್ ಲಿಂಕ್ ಕ್ಲಿಕ್ ಮಾಡಿ

ಕಳೆದ ಸೆಪ್ಟೆಂಬರ್ ನಲ್ಲಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಮಾಡಿದ್ದ ವೇಳೆಯಲ್ಲಿ ಬರಾಕ್ ಒಬಾಮಾ ಅವರು ಅಮೆರಿಕದ ದಿನಪತ್ರಿಕೆಗೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ ಜಂಟಿ ಸಂಪಾದಕೀಯ ಬರೆದಿದ್ದರು.[ಇಲ್ಲಿ ಓದಿ]

ಈಗ ಭಾರತ ಪ್ರವಾಸ ವೇಳೆಯಲ್ಲಿ ಒಬಾಮಾ ಹಾಗೂ ಮೋದಿ ಅವರು ಜಂಟಿ ಸುದ್ದಿಗೋಷ್ಠಿ ನಂತರ ಜಂಟಿ ರೇಡಿಯೋ ಭಾಷಣ ನೀಡುವ ಮೂಲಕ ಉತ್ತಮ ಬಾಂಧವ್ಯ ಮುಂದುವರೆಸಿದ್ದಾರೆ.

ಡಿಡಿ ನ್ಯೂಸ್ ಲೈವ್ ಸ್ಟ್ರೀಮಿಂಗ್ ವಿಡಿಯೋ ನೋಡಿ, ಕೇಳಿ

English summary
The joint radio address of Prime Minister Narendra Modi and US President Barack Obama has been recorded and will be broadcast at 8 PM on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X