ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಜೊತೆ ಔತಣಕೂಟಕ್ಕೆ ಕಾಂಗ್ರೆಸ್ ನಾಯಕರು ಗೈರು

|
Google Oneindia Kannada News

ನವದೆಹಲಿ, ಫೆಬ್ರವರಿ 24 : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಔತಣಕೂಟಕ್ಕೆ ಗೈರಾಗಲಿದ್ದಾರೆ. ಕಾಂಗ್ರೆಸ್ ನಾಯಕರು ಔತಣಕೂಟದಿಂದ ದೂರವುಳಿಯಲಿದ್ದು, ಇದು ಚರ್ಚೆಗೆ ಕಾರಣವಾಗಿದೆ.

ಮನಮೋಹನ್ ಸಿಂಗ್, ರಾಜ್ಯಸಭಾ ಸದಸ್ಯ ಗುಲಾಮ್ ನಬಿ ಆಜಾದ್ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆಯುವ ಔತಣಕೂಟದಿಂದ ದೂರವುಳಿಯಲಿದ್ದಾರೆ. ಎಐಸಿಸಿಯ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಔತಣಕೂಟಕ್ಕೆ ಆಹ್ವಾನ ಕೊಟ್ಟಿಲ್ಲ.

'ಟ್ರಂಪ್ ಮೋದಿ ಸ್ನೇಹಿತ ಅಲ್ಲ, ಪ್ರಧಾನಿಗೆ ಸ್ನೇಹಿತರಿರುವುದಿಲ್ಲ''ಟ್ರಂಪ್ ಮೋದಿ ಸ್ನೇಹಿತ ಅಲ್ಲ, ಪ್ರಧಾನಿಗೆ ಸ್ನೇಹಿತರಿರುವುದಿಲ್ಲ'

ರಾಷ್ಟ್ರಪತಿ ಭವನದಿಂದ ಸೋಮವಾರ ಬೆಳಗ್ಗೆ ಮನಮೋಹನ್ ಸಿಂಗ್‌ಗೆ ಆಹ್ವಾನ ನೀಡಲಾಗಿದೆ. ಆದರೆ, ಔತಣಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗುಲಾಮ್ ನಬಿ ಆಜಾದ್ ಸಹ ಪಾಲ್ಗೊಳ್ಳುವುದಿಲ್ಲ.

ಟ್ರಂಪ್ ಜೊತೆ ಔತಣಕೂಟಕ್ಕೆ ಯಡಿಯೂರಪ್ಪಗೆ ಆಹ್ವಾನಟ್ರಂಪ್ ಜೊತೆ ಔತಣಕೂಟಕ್ಕೆ ಯಡಿಯೂರಪ್ಪಗೆ ಆಹ್ವಾನ

Manmohan Singh To Skip Banquet Hosted For Donald Trump

ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸಹ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದ್ದರು. ರಾಜ್ಯಸಭೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಔತಣಕ್ಕೆ ಆಹ್ವಾನಿಸಲಾಗಿದೆ. ಆದರೆ, ಡೊನಾಲ್ಡ್ ಟ್ರಂಪ್ ವಿರೋಧ ಪಕ್ಷದ ಯಾವುದೇ ನಾಯಕರನ್ನು ಭೇಟಿಯಾಗುತ್ತಿಲ್ಲ.

'ಟ್ರಂಪ್ ಭಾರತ ಭೇಟಿಗೆ ಮೋದಿ ವೈಯಕ್ತಿಕ ಸ್ನೇಹ ಕಾರಣ''ಟ್ರಂಪ್ ಭಾರತ ಭೇಟಿಗೆ ಮೋದಿ ವೈಯಕ್ತಿಕ ಸ್ನೇಹ ಕಾರಣ'

ಡೊನಾಲ್ಡ್ ಟ್ರಂಪ್ ಎರಡು ದಿನದ ಭಾರತ ಭೇಟಿಯ ವೇಳೆ ವಿರೋಧ ಪಕ್ಷದ ಯಾವ ನಾಯಕರನ್ನು ಭೇಟಿಯಾಗುತ್ತಿಲ್ಲ. ಈ ಬಗ್ಗೆ ಶುಕ್ರವಾರ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿತ್ತು.

English summary
Former PM and Congress leader Manmohan Singh decided to skip banquet hosted for Donald Trump at Rashtrapati Bhavana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X