ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 2 DG ಔಷಧ ಉತ್ಪಾದನೆ ಮಾಡಲು ಮ್ಯಾನ್‌ಕೈಂಡ್ ಸಂಸ್ಥೆಗೆ ಪರವಾನಗಿ

|
Google Oneindia Kannada News

ನವದೆಹಲಿ, ಜುಲೈ 08: ಕೊರೊನಾ ಸೋಂಕಿಗೆ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2-ಡಿಜಿ (2 ಡಿಯಾಕ್ಸಿ-ಡಿ-ಗ್ಲೂಕೋಸ್) ಔಷಧದ ತಯಾರಿ ಹಾಗೂ ಮಾರುಕಟ್ಟೆಗೆ ಮ್ಯಾನ್‌ಕೈಂಡ್ ಫಾರ್ಮಾ ಔಷಧ ತಯಾರಿಕಾ ಸಂಸ್ಥೆ ಪರವಾನಗಿ ಪಡೆದುಕೊಂಡಿದೆ.

ಪೌಡರ್ ರೂಪದಲ್ಲಿರುವ ಈ ಔಷಧಿಯನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಹಾಗೂ ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿದ್ದವು. ಇದರ ವೈದ್ಯಕೀಯ ಪ್ರಯೋಗವನ್ನು ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯಾರ್ ಮೆಡಿಸಿನ್ ಹಾಗೂ ಅಲೈಡ್ ಸೈನ್ಸಸ್‌, ಡಿಆರ್‌ಡಿಒ ನಡೆಸಿತ್ತು ಎಂದು ಮ್ಯಾನ್‌ಕೈಂಡ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2 ಡಿಜಿ ಕೊರೊನಾ ಔಷಧಕ್ಕೆ ದರ ನಿಗದಿಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2 ಡಿಜಿ ಕೊರೊನಾ ಔಷಧಕ್ಕೆ ದರ ನಿಗದಿ

ವಿಶಾಖಪಟ್ಟಣಂ ಹಾಗೂ ಹಿಮಾಚಲ ಪ್ರದೇಶದ ತಮ್ಮ ಘಟಕಗಳಲ್ಲಿ ಔಷಧಿ ತಯಾರಿ ಮಾಡುವುದಾಗಿ ಮ್ಯಾನ್‌ಕೈಂಡ್ ಕಂಪನಿ ತಿಳಿಸಿದೆ.

Mankind Pharma Gets DRDO Nod To Manufacture 2-DG

ಆಸ್ಪತ್ರೆಗೆ ಸೇರಿರುವ ರೋಗಿಗಳಿಗೆ ಈ ಔಷಧಿ ಬೇಗ ಗುಣುಮುಖರಾಗಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿತ್ತು.

ಡಿಆರ್‌ಡಿಒದ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯಾರ್ ಮೆಡಿಸಿನ್ ಅಂಡ್ ಅಲೈಡ್ ಸೈನ್ಸಸ್‌ನ ಈ ಔಷಧಿಯ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. 2.34 ಗ್ರಾಂ ಪುಡಿಯ ಸ್ಯಾಶೆಗೆ 990 ರೂ ದರ ನಿಗದಿ ಮಾಡಿ ಮಾರಾಟಕ್ಕೆ ಯೋಜಿಸಿತ್ತು.

ಕೋವಿಡ್ ಮೊದಲ ಅಲೆ ಹೆಚ್ಚಾದ ಸಮಯದಲ್ಲಿ ಪ್ರಧಾನಿ ಮೋದಿ ಸಲಹೆ ಮೇರೆಗೆ ಡಿಆರ್ಡಿಒದ ವಿಭಾಗವಾದ ದಿ ಇನ್ ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸನ್ ಆಂಡ್ ಅಲೈಡ್ ಸೈನ್ಸಸ್ ಸಂಸ್ಥೆ ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯೂಲರ್ ಆಂಡ್ ಮಾಲಿಕ್ಯುಲರ್ ಬಯೋಲಜಿ ಸಹಯೋಗದಲ್ಲಿ ಈ ಔಷಧವನ್ನು ಮೊದಲ ಪ್ರಯೋಗಕ್ಕೆ ಬಳಸಿತ್ತು.

ಕೆಲವು ದಿನಗಳ ಹಿಂದಷ್ಟೆ, ಕೊರೊನಾ ಸೋಂಕಿಗೆ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2-DG ಔಷಧ ಉತ್ಪಾದನೆ ಪರವಾನಗಿಯನ್ನು ಏಕೆ ರೆಡ್ಡಿ ಲ್ಯಾಬೊರೇಟರಿಗೆ ಮಾತ್ರ ನೀಡಲಾಗಿದೆ? ಬೇರೆ ಸಂಸ್ಥೆಗಳಿಗೆ ಪರವಾನಗಿ ನೀಡಿಲ್ಲವೇಕೆ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರವನ್ನು ಪ್ರಶ್ನಿಸಿತ್ತು. ಇದೀಗ ಮತ್ತೊಂದು ಸಂಸ್ಥೆಗೆ ಪರವಾನಗಿ ನೀಡಲಾಗಿದೆ.

English summary
Mankind Pharma Gets DRDO Nod To Manufacture and Sell Covid Drug 2-
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X