ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿಪಟ ಹಾರಿಸಲು ಬಳಸುವ ನೈಲಾನ್ ದಾರಕ್ಕೆ ನಿಷೇಧ

|
Google Oneindia Kannada News

ನವದೆಹಲಿ, ಜ. 9: ಗಾಳಿಪಟ ಹಾರಿಸಲು ಬಳಸುವ ಮಂಜಾ (ನೈಲಾನ್ ದಾರ) ನಿಷೇಧಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದಲ್ಲಿ ಗಾಳಿಪಟ ಉತ್ಸವಗಳು ಅಲ್ಲಲ್ಲಿ ಜೋರಾಗಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪರಿಸರ ಇಲಾಖೆಯಿಂದ ಈ ಆದೇಶ ಹೊರಬಿದ್ದಿದೆ.

ನೈಲಾನ್ ದಾರವು ಪಕ್ಷಿಗಳಿಗೆ ಹಾಗೂ ಕೆಲವೊಮ್ಮೆ ಮನುಷ್ಯರನ್ನೂ ಗಾಯಗೊಳಿಸುವುದರಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ಗಾಳಿಪಟ ಹಾರಿಸುವಾಗ ಆಗಸದಲ್ಲಿ ಹಾರಾಡುವ ಹಕ್ಕಿಗಳಿಗೆ ನೈಲಾನ್ ದಾರಗಳು ತೊಂದರೆ ನೀಡುತ್ತವೆ. ಇದು ಪಕ್ಷಿಗಳಿಗೆ ಗಂಡಾಂತರಕಾರಿ ಎಂದು ಪ್ರಾಣಿ ಸಂರಕ್ಷಣಾ ಸಂಸ್ಥೆಗಳಾದ ಪೆಟಾ, ಅನಿಮಲ್ ವೆಲ್ ಫೇರ್ ಬೋರ್ಡ್ ಆಫ್ ಇಂಡಿಯಾ ಹಾಗೂ ಕೆಲ ಕೇಂದ್ರಾಡಳಿತ ಪ್ರದೇಶಗಳಿಂದ ದೂರುಗಳು ಬಂದಿದ್ದವು.

Manja strings banned in Maharashtra

ಈ ದೂರುಗಳನ್ನು ಪರಿಗಣಿಸಿರುವ ಇಲಾಖೆಯು ನೈಲಾನ್ ದಾರಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ದಾರ ನಿಷೇಧಿಸಿರುವುದು ಮಾತ್ರವಲ್ಲದೆ, ಅದರ ಮಾರಾಟ, ದಾಸ್ತಾನನ್ನೂ ನಿಷೇಧಿಸಲಾಗಿದೆ.

English summary
Ahead of Sankranti festival, Maharashtra government has banned the use of manja (kite string, mostly made of nylon these days) which is known to cause injuries to birds and even people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X