ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರ ಚುನಾವಣೆ; ಡಿ. 18ರಂದು ಜೆಡಿಯು ಬೃಹತ್ ಸಮಾವೇಶ

|
Google Oneindia Kannada News

ಇಂಫಾಲ, ಡಿಸೆಂಬರ್ 16; ಮಣಿಪುರ ವಿಧಾನಸಭೆ ಚುನಾವಣೆ 2022ಕ್ಕೆ ಜೆಡಿಯು ಪಕ್ಷ ತಯಾರಿ ಆರಂಭಿಸಿದೆ. ಬಿಹಾರದಲ್ಲಿ ಆಡಳಿತ ನಡೆಸುತ್ತಿರುವ ನಿತೀಶ್ ಕುಮಾರ್ ನೇತೃತ್ವದ ಪಕ್ಷ ಡಿಸೆಂಬರ್ 18ರಂದು ಪೂರ್ವ ಇಂಫಾಲದಲ್ಲಿ ಬೃಹತ್ ಸಮಾವೇ ಆಯೋಜನೆ ಮಾಡಿದೆ.

ಜೆಡಿಯು ಹಿಂದೆ ಸಮತಾ ಪಕ್ಷವಾಗಿದ್ದಾಗ 1995ರ ಮಣಿಪುರ ಚುನಾವಣೆಯಲ್ಲಿ 2, 2000ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಮಣಿಪುರ ರಾಜ್ಯದಲ್ಲಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಕೆಲವೇ ತಿಂಗಳ ಅವಧಿಗೆ ಪಕ್ಷದ ಶಾಸಕರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು.

ಮಣಿಪುರ ಚುನಾವಣೆ; ಸ್ವತಂತ್ರವಾಗಿ ಎನ್‌ಪಿಪಿ ಸ್ಪರ್ಧೆ? ಮಣಿಪುರ ಚುನಾವಣೆ; ಸ್ವತಂತ್ರವಾಗಿ ಎನ್‌ಪಿಪಿ ಸ್ಪರ್ಧೆ?

ಈಗ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಮಣಿಪುರದಲ್ಲಿ ಮತ್ತೆ ಪಕ್ಷ ಸಂಘಟನೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಅದರಲ್ಲೂ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಹೆಚ್ಚಿನ ಗಮನ ನೀಡಲಾಗಿದೆ.

ಮಣಿಪುರ ಚುನಾವಣೆ 2022: ಏನಿದು AFSPA, ಪ್ರಣಾಳಿಕೆಯಲ್ಲಿಯೂ ಇದರದ್ದೆ ಸದ್ದುಮಣಿಪುರ ಚುನಾವಣೆ 2022: ಏನಿದು AFSPA, ಪ್ರಣಾಳಿಕೆಯಲ್ಲಿಯೂ ಇದರದ್ದೆ ಸದ್ದು

Manipur Assembly Elections JDU Rally In East Imphal On December 18

"ಲಲನ್ ಸಿಂಗ್ ನೇತೃತ್ವದಲ್ಲಿ ಡಿಸೆಂಬರ್ 18ರಂದು ಪೂರ್ವ ಇಂಫಾಲದಲ್ಲಿ ದೊಡ್ಡ ಸಮಾವೇಶ ಆಯೋಜನೆ ಮಾಡಲಾಗುತ್ತಿದೆ. ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಸಮಾವೇಶ ಮಾಡುತ್ತಿದ್ದು, 2022ರ ಮಾರ್ಚ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ" ಎಂದು ಜೆಡಿಯು ರಾಜ್ಯಾಧ್ಯಕ್ಷರು ಹೇಳಿದ್ದಾರೆ.

ಮಣಿಪುರ ಚುನಾವಣೆ; ಬಿಜೆಪಿ ಮುಂದೆ ಹಲವಾರು ಸವಾಲು!ಮಣಿಪುರ ಚುನಾವಣೆ; ಬಿಜೆಪಿ ಮುಂದೆ ಹಲವಾರು ಸವಾಲು!

ಮಳೆಯ ಪರಿಣಾಮ ಮಣಿಪುರ ರಾಜ್ಯದಲ್ಲಿ ಈ ವರ್ಷದ ಬೆಳೆಗಳ ಕಟಾವು ಅವಧಿ ವಿಳಂಬವಾಗಿದೆ. ಡಿಸೆಂಬರ್ 15ರ ನಂತರ ಕೃಷಿ ಕಾರ್ಯಗಳು ಪೂರ್ಣಗೊಳ್ಳಲಿದ್ದು, ಕ್ರಿಸ್‌ಮಸ್ ಹಬ್ಬದ ಸಂಭ್ರಮ ಸಹ ಆರಂಭವಾಗಲಿದೆ. ಆದ್ದರಿಂದ ಡಿಸೆಂಬರ್ 18ರ ಸಮಾವೇಶಕ್ಕೆ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ.

ಲಲನ್ ಸಿಂಗ್ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲರೂ ಡಿಸೆಂಬರ್ 17ರಂದು ಇಂಫಾಲಕ್ಕೆ ಆಗಮಿಸಲಿದ್ದಾರೆ. ಈಶಾನ್ಯ ರಾಜ್ಯಗಳ ಪೈಕಿ ಅರುಣಾಚಲ ಪ್ರದೇಶದಲ್ಲಿ ಮಾತ್ರ ಸದ್ಯ ಜೆಡಿಯು ಪಕ್ಷದ ಒಬ್ಬರು ಶಾಸಕರು ಇದ್ದಾರೆ. ಮಣಿಪುರದಲ್ಲಿ ಸಮಾವೇಶ ನಡೆಸುವ ಮೂಲಕ ಪಕ್ಷ ಈಶಾನ್ಯ ರಾಜ್ಯದತ್ತ ಹೆಚ್ಚಿನ ಗಮನ ಹರಿಸಲಿದೆ.

2019ರ ಅರುಣಾಚಲ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯುನ 15 ಶಾಸಕರು ಗೆದ್ದಿದ್ದರು. 41 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಬಳಿಕ ಜೆಡಿಯು ಬಹುದೊಡ್ಡ ಪಕ್ಷವಾಗಿತ್ತು. ಡಿಸೆಂಬರ್ 2020ರಲ್ಲಿ 6 ಶಾಸಕರು ಜೆಡಿಯು ಬಿಟ್ಟು ಬಿಜೆಪಿ ಸೇರಿದರು.

ನಾಗಾಲ್ಯಾಂಡ್‌ನಲ್ಲಿ 2019ಕ್ಕೂ ಮೊದಲು ಒಬ್ಬರು ಜೆಡಿಯು ಶಾಸಕರು ಇದ್ದರು. ಆದರೆ ಬಳಿಕ ಅವರು ಎನ್‌ಡಿಪಿಪಿ ಪಕ್ಷ ಸೇರಿದ್ದು, ಬಿಹಾರದ ಆಡಳಿತಾರೂಢ ಪಕ್ಷಕ್ಕೆ ಈಶಾನ್ಯ ರಾಜ್ಯದಲ್ಲಿ ಹಿನ್ನಡೆ ಉಂಟಾಗಿತ್ತು.

ರಾಷ್ಟ್ರೀಯ ಪಕ್ಷವಾಗಿರುವ ಜೆಡಿಯು ಮಣಿಪುರ ವಿಧಾನಸಭೆ 2022ರಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. ಆದ್ದರಿಂದ ಚುನಾವಣಾ ತಯಾರಿ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಇತರ ನಾಯಕರು ನವೆಂಬರ್ ತಿಂಗಳಿನಲ್ಲಿ ಮಣಿಪುರಕ್ಕೆ ಭೇಟಿ ನೀಡಿದ್ದರು.

5 ರಾಜ್ಯಗಳ ಚುನಾವಣೆ; 2022ರಲ್ಲಿ ಗೋವಾ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್ ರಾಜ್ಯಗಳ ಜೊತೆ ಮಣಿಪುರದಲ್ಲಿಯೂ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯನ್ನು ಮಾಡುತ್ತಿವೆ.

ಎಬಿಪಿ ಮತ್ತು ಸಿ-ವೋಟರ್ ರಾಜ್ಯದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಬೇಕಿದೆ. ಆಗಲೇ ಪಕ್ಷಗಳು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿವೆ.

ಯಾವುದೇ ಪಕ್ಷಗಳಿಗೂ ಚುನಾವಣೆಯಲ್ಲಿ ಬಹುಮತ ಸಿಗದೇ ಅತಂತ್ರ ವಿಧಾನಸಭೆ ರಚನೆಯಾಗುವ ಸಾಧ್ಯತೆ ಇದೆ. ಬಿಜೆಪಿ 27, ಕಾಂಗ್ರೆಸ್ 22, ಎನ್‌ಪಿಎಫ್‌ 6 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

English summary
JD(U) hold mega rally in East Imphal on December 18 Ahead of the Manipur polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X