ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರದಲ್ಲಿ ಬಿಜೆಪಿ ಸೇರಿದ ಎನ್‌ಪಿಪಿ ನಾಯಕ ಲೆಟ್ಪಾವೊ ಹಾಕಿಪ್

|
Google Oneindia Kannada News

ಇಂಪಾಲ್, ಡಿಸೆಂಬರ್ 29: ಪಂಚರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಪಕ್ಷಾಂತರ ಪ್ರಕ್ರಿಯೆ ಚುರುಕುಗೊಂಡಿದೆ. ಮಣಿಪುರದಲ್ಲಿ ಭಾರತೀಯ ಜನತಾ ಪಕ್ಷ ತನ್ನ ಪ್ರಾಬಲ್ಯ ಸಾಧಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.

ನವದೆಹಲಿಯಲ್ಲಿ ಬುಧವಾರವಷ್ಟೇ ಮಣಿಪುರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ ನಾಯಕ ಲೆಟ್ಪಾವೊ ಹಾಕಿಪ್ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಿದ್ದಾರೆ.

ಮಣಿಪುರ ಚುನಾವಣೆ; ಬಿಜೆಪಿ ಮುಂದೆ ಹಲವಾರು ಸವಾಲು!ಮಣಿಪುರ ಚುನಾವಣೆ; ಬಿಜೆಪಿ ಮುಂದೆ ಹಲವಾರು ಸವಾಲು!

"ಭಾರತದ ಈಶಾನ್ಯ ರಾಜ್ಯಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿಯಾಗಲಿವೆ. ಮಣಿಪುರ ಕೂಡ ಅಭಿವೃದ್ಧಿ ಆಗಲಿದೆ ಎಂದು ನಾನು ಭಾವಿಸಿದ್ದೇನೆ," ಎಂದು ಬುಧವಾರ ಬಿಜೆಪಿಗೆ ಸೇರಿದ ಲೆಟ್ಪಾವೊ ಹಾಕಿಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Manipur Assembly Election: Youth Affair & Sports Minister and NPP leader, Letpao Haokip joins BJP

ಮಣಿಪುರದಲ್ಲಿ ಗದ್ದುಗೆ ಹಿಡಿಯಲು ಬಿಜೆಪಿ ರಣತಂತ್ರ:

2022ರಲ್ಲಿ ನಡೆಯಲಿರುವ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ 60 ಕ್ಷೇತ್ರಗಳ ಪೈಕಿ 31ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ.

ಕಳೆದ 2017ರಲ್ಲಿ ನಡೆದ ಮಣಿಪುರ ಚುನಾವಣೆಯಲ್ಲಿ ಬಿಜೆಪಿಯು 21 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿದ್ದರೂ ಸಹ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿಕೂಟ ರಚಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಿತು. ಈ ಹಿಂದೆ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬಿಜೆಪಿಯ 21, ಎನ್‌ಪಿಪಿಯ 4, ಎನ್‌ಪಿಎಫ್‌ನ 4, ಎಲ್‌ಜೆಪಿಯ 1 ಹಾಗೂ ಒಬ್ಬ ಪಕ್ಷೇತರ ಶಾಸಕರಿದ್ದರು.

English summary
Manipur Assembly Election 2022: Youth Affairs & Sports Minister and NPP leader, Letpao Haokip joins BJP in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X