ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರ ಚುನಾವಣೆ: ಮೊದಲ ಹಂತದಲ್ಲಿ ಶೇ.78.03ರಷ್ಟು ಮತದಾನ

|
Google Oneindia Kannada News

ಮಣಿಪುರ, ಫೆಬ್ರವರಿ 28: ಮಣಿಪುರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಯಾವುದೇ ಪ್ರಮುಖ ಘಟನೆಗಳಿಲ್ಲದೆ ಸೋಮವಾರ ಮುಕ್ತಾಯಗೊಂಡಿದೆ. ಈ ಹಂತದಲ್ಲಿ 38 ವಿಧಾನಸಭಾ ಕ್ಷೇತ್ರಗಳ 1,721 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಶಾನ್ಯ ರಾಜ್ಯದಲ್ಲಿ ಸಂಜೆ 5 ಗಂಟೆಯವರೆಗೆ 78.03ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇವಿಎಂ ಹಾನಿ ಮತ್ತು ಕೆಲವು ಕ್ಷೇತ್ರಗಳಲ್ಲಿ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ರಾಜೇಶ್ ಅಗರವಾಲ್ ಹೇಳಿದ್ದಾರೆ.

ಮೊದಲ ಹಂತದಲ್ಲಿ 38ರ ಪೈಕಿ 30 ಸ್ಥಾನ ಖಚಿತ: ಬಿರೇನ್ ಸಿಂಗ್ಮೊದಲ ಹಂತದಲ್ಲಿ 38ರ ಪೈಕಿ 30 ಸ್ಥಾನ ಖಚಿತ: ಬಿರೇನ್ ಸಿಂಗ್

ಇಂಫಾಲ್ ಪೂರ್ವದಲ್ಲಿ ಶೇ.76.64ರಷ್ಟು ಮತದಾನವಾಗಿದ್ದರೆ, ಇಂಫಾಲ್ ಪಶ್ಚಿಮದಲ್ಲಿ ಶೇ.82.19ರಷ್ಟು ಮತದಾನವಾಗಿದೆ. ಬಿಷ್ಣುಪುರದಲ್ಲಿ ಶೇ.73.44, ಚುರಾಚಂದಪುರದಲ್ಲಿ ಶೇ.74.45 ಮತ್ತು ಕಾಂಗ್‌ಪೋಕ್ಪಿಯಲ್ಲಿ ಶೇ.82.19 ಮತದಾನ ದಾಖಲಾಗಿದೆ.

Manipur Assembly Election: 78.03 Per cent Voting Turnout in First Phase

ಸೈಕುಲ್, ಸೈತು, ಥನ್ಲೋನ್, ಹೆಂಗ್ಲೆಪ್ ಮತ್ತು ಸಿಂಘತ್ ಕ್ಷೇತ್ರಗಳ ವ್ಯಾಪ್ತಿಯ ಏಳು ಮತಗಟ್ಟೆಗಳಲ್ಲಿ ದುಷ್ಕರ್ಮಿಗಳು ಇವಿಎಂಗಳನ್ನು ಹಾನಿಗೊಳಿಸಿರುವ ಘಟನೆಗಳು ವರದಿಯಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ರಾಜೇಶ್ ಅಗರವಾಲ್ ಹೇಳಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಹಾನಿಗೊಳಗಾದ ಇವಿಎಂಗಳನ್ನು ಬದಲಾಯಿಸಿದ ನಂತರ ಸಿಂಘತ್ ಮತ್ತು ಸೈಕುಲ್‌ನ ಎರಡು ಮತಗಟ್ಟೆಗಳಲ್ಲಿ ಮತದಾನ ಪುನರಾರಂಭವಾಯಿತು ಎಂದು ರಾಜೇಶ್ ಅಗರವಾಲ್ ತಿಳಿಸಿದರು.

ಫೆರ್ಜಾಲ್ ಜಿಲ್ಲೆಯ ತಿಪೈಮುಖ್ ಕ್ಷೇತ್ರದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮತಗಟ್ಟೆ ಅಧಿಕಾರಿ ಮೃತಪಟ್ಟಿದ್ದಾರೆ. 8ನೇ ಮಣಿಪುರ ರೈಫಲ್ಸ್‌ನ ಹವಾಲ್ದಾರ್ ಭದ್ರತಾ ಸಿಬ್ಬಂದಿ ಸೋಮವಾರ ಮುಂಜಾನೆ ಅವರ ಬ್ಯಾರಕ್‌ನಲ್ಲಿ ಗುಂಡಿನ ಗಾಯದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹವಾಲ್ದಾರ್ ತನ್ನ ಸರ್ವಿಸ್ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿಸಿದ್ದರಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರು ಹೇಳಿದ್ದು, ಪ್ರಕರಣ ದಾಖಲಾಗಿದೆ. ಆದರೆ ಮತಗಟ್ಟೆ ಅಧಿಕಾರಿ ಹೇಳುವ ಪ್ರಕಾರ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದಿದ್ದಾರೆ.

ನಮೂನೆ 17ಎ ಹಾಗೂ ಇತರೆ ದಾಖಲೆಗಳ ಪರಿಶೀಲನೆಯನ್ನು ಚುನಾವಣಾಧಿಕಾರಿಗಳು ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ಮಾರ್ಚ್ 1ರಂದು ನಡೆಸಲಿದ್ದಾರೆ ಎಂದು ಸಿಇಒ ತಿಳಿಸಿದರು. ಮರು ಮತದಾನದ ಯಾವುದಾದರೂ ನಿರ್ಧಾರಗಳು ಇದ್ದರೆ, ಅದಕ್ಕೆ ಅನುಗುಣವಾಗಿ ನಿರ್ಧರಿಸಲಾಗುವುದು ಎಂದು ಸಿಇಒ ರಾಜೇಶ್ ಅಗರವಾಲ್ ಹೇಳಿದರು.

ಮೊದಲ ಹಂತದಲ್ಲಿ 5,80,607 ಪುರುಷರು, 6,28,657 ಮಹಿಳೆಯರು ಮತ್ತು 175 ತೃತೀಯ ಲಿಂಗಿಗಳು ಸೇರಿದಂತೆ 12,09,439 ಮತದಾರರು ಮತದಾನದ ಹಕ್ಕು ಪಡೆದಿದ್ದರು.

ಒಟ್ಟು 381 ಮತಗಟ್ಟೆಗಳಲ್ಲಿ ಸಂಪೂರ್ಣ ಮಹಿಳಾ ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೆಚ್ಚುವರಿಯಾಗಿ, ನಾಲ್ಕು ಕ್ಷೇತ್ರಗಳು- ಸಿಂಗ್‌ಜಮೇ, ಯೈಸ್ಕುಲ್, ವಾಂಗ್‌ಖೇ ಮತ್ತು ಚುರಾಚಂದ್‌ಪುರ- ಎಲ್ಲಾ ಮಹಿಳಾ ಚುನಾವಣಾ ತಂಡಗಳಿಂದ ನಿರ್ವಹಿಸಲ್ಪಟ್ಟವು ಮತ್ತು ಸೈಕೋಟ್‌ನ ಒಂದು ಮತಗಟ್ಟೆಯು ಸಂಪೂರ್ಣವಾಗಿ PwD ಮತಗಟ್ಟೆ ಸಿಬ್ಬಂದಿಯಿಂದ ನಿರ್ವಹಿಸಲ್ಪಟ್ಟಿದೆ. ಎರಡನೇ ಹಂತದ ಮತದಾನ ಮಾರ್ಚ್ 5 ರಂದು 22 ಕ್ಷೇತ್ರಗಳಲ್ಲಿ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

English summary
78.03 per cent Voting in the first phase of the Manipur assembly elections was held, state election officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X