• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾ.5ರಂದು ಮಣಿಪುರ ಎರಡನೇ ಹಂತದ ಚುನಾವಣೆ: ಪೂರ್ಣ ಮಾಹಿತಿ

|
Google Oneindia Kannada News

ಮಣಿಪುರದ 6 ಜಿಲ್ಲೆಗಳ ಒಟ್ಟು 22 ವಿಧಾನಸಭೆ ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದ್ದು, ಮಾರ್ಚ್ 3ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ತೌಬಲ್, ಜಿರಿಬಾಮ್, ಚಾಂಡೆಲ್, ಉಖ್ರುಲ್, ಸೇನಾಪತಿ, ತಮೆಂಗ್ಲಾಂಗ್ ಜಿಲ್ಲೆಗಳಲ್ಲಿ ಎರಡನೇ ಹಂತದ ಚುನಾವಣಾ ಮತದಾನ ನಡೆಯಲಿದೆ. ಈ ಬಾರಿ ಮಣಿಪುರ ಚುನಾವಣೆ 2022ರ ಎರಡನೇ ಹಂತದಲ್ಲಿ 425,192 ಮಹಿಳೆಯರು ಮತ್ತು 407,224 ಪುರುಷರು ಸೇರಿದಂತೆ ಸುಮಾರು 8.3 ಲಕ್ಷ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.

ಎರಡನೇ ಹಂತದಲ್ಲಿ ಚಾಂಡೆಲ್ ಕ್ಷೇತ್ರದಲ್ಲಿ ಬಿಜೆಪಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ ನಡುವೆ ನೇರ ಸ್ಪರ್ಧೆ ನಿರೀಕ್ಷೆಯಿದೆ. ಆದರೆ ನುಂಗ್ಬಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಾಮುಖಿ ಆಗಲಿವೆ. ಇನ್ನೊಂದು ಕಡೆ ಖಂಗಾಬೊಕ್, ವಾಂಗ್ಜಿಂಗ್-ತೆಂತಾ, ಸುಗ್ನೂ, ಮಾವೋ ಮತ್ತು ಉಖ್ರುಲ್ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಹೋರಾಟ ನಡೆಯಲಿದೆ.

ನಕಲಿ ಮತದಾನ, ಹಿಂಸಾಚಾರ; 23 ಮತಗಟ್ಟೆಗಳಲ್ಲಿ ಮರುಚುನಾವಣೆಗೆ ಬಿಜೆಪಿ ಆಗ್ರಹ ನಕಲಿ ಮತದಾನ, ಹಿಂಸಾಚಾರ; 23 ಮತಗಟ್ಟೆಗಳಲ್ಲಿ ಮರುಚುನಾವಣೆಗೆ ಬಿಜೆಪಿ ಆಗ್ರಹ

ರಾಜ್ಯದಲ್ಲಿ ಪ್ರಮುಖರಿಗೆ ಅಗ್ನಿ ಪರೀಕ್ಷೆ:

ಎರಡನೇ ಹಂತದ ಮತದಾನವನ್ನು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಇಬೋಬಿ ಸಿಂಗ್, ಮಾಜಿ ಉಪಮುಖ್ಯಮಂತ್ರಿ ಗೈಖಾಂಗಮ್, ಹಾಲಿ ಕ್ರೀಡಾ ಸಚಿವ ಲೆಟ್ಪಾವೊ ಹಾಕಿಪ್, ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಸಚಿವ ಲೊಸಿ ಡಿಖೋ, ಅರಣ್ಯ ಸಚಿವ ಅವಾಂಗ್‌ಬೋ ನ್ಯೂಮೈ ಪಾಲಿಗೆ ಅಗ್ನಿ ಪರೀಕ್ಷೆ ಎಂದು ಹೇಳಲಾಗುತ್ತಿದೆ. ಈ ನಾಯಕರು ಕ್ರಮವಾಗಿ ತೌಬಲ್, ನುಂಗ್ಬಾ, ತೆಂಗ್ನೌಪಾಲ್, ಮಾವೋ ಮತ್ತು ತಮೇಯ್ ಕ್ಷೇತ್ರಗಳಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಮೊದಲ ಹಂತದಲ್ಲಿ ನಕಲಿ ಮತದಾನದ ಆರೋಪ:

ಕಳೆದ ಫೆಬ್ರವರಿ 28ರಂದು ಮಣಿಪುರದಲ್ಲಿ ಮೊದಲ ಹಂತದ ಮತದಾನ ನಡೆದು ಶೇ 78.03ರಷ್ಟು ಶೇಕಡಾವಾರು ಮತದಾನ ದಾಖಲಾಗಿತ್ತು. ಆದರೆ, ಮೊದಲ ಹಂತದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಬೂತ್‌ಗಳನ್ನು ವಶಪಡಿಸಿಕೊಂಡು ಚುನಾವಣಾ ಸಮಯದಲ್ಲಿ ಬೋಗಸ್ ಮತಗಳನ್ನು ಹಾಕುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಬುಧವಾರ ಮಣಿಪುರದ ಬಿಜೆಪಿ ಕಾರ್ಯಕರ್ತರು ಮಣಿಪುರದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ಈ 23 ಬೂತ್‌ಗಳಿಗೆ ಮರು ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮಣಿಪುರ ಮತದಾನ ದಿನಾಂಕ ಪರಿಷ್ಕರಣೆ:

   ಜೈಪುರ ಸಾಹಿತ್ಯ ಹಬ್ಬಕ್ಕೆ ರಂಗು ರಂಗಿನ‌ ಭರ್ಜರಿ ಸಿದ್ಧತೆ | Oneindia Kannada

   ಮಣಿಪುರದಲ್ಲಿ ಮಾರ್ಚ್ 5ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಿಂದೆ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಮತದಾನ ನಿಗದಿಯಾಗಿತ್ತು. ನಂತರ ಚುನಾವಣಾ ದಿನಾಂಕಗಳನ್ನು ಪರಿಷ್ಕರಿಸಲಾಗಿತ್ತು. ಪಂಚ ರಾಜ್ಯಗಳಾದ ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಮಾರ್ಚ್ 7ರಂದು ಉತ್ತರ ಪ್ರದೇಶದಲ್ಲಿ ಅಂತಿಮ ಹಾಗೂ ಏಳನೇ ಹಂತದ ಮತದಾನ ನಡೆಯಲಿದೆ. ಮಾರ್ಚ್ 10ರಂದು ಐದೂ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

   English summary
   Manipur 2nd Phase Election 2022: Voting date, time, results, key candidates: All you need to know.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X