ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ರಾಯಭಾರಿ ಜತೆ ಅಯ್ಯರ್ ಸೀಕ್ರೇಟ್ ಮೀಟಿಂಗ್: ಮೋದಿ ಆರೋಪ

By Sachhidananda Acharya
|
Google Oneindia Kannada News

ಅಹಮದಾಬಾದ್, ಡಿಸೆಂಬರ್ 10: "ಗುಜರಾತಿಗೆ ಅವಮಾನ ಮಾಡಿದ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ಹೈಕಮಿಷನರ್ ಜತೆ ಸೀಕ್ರೆಟ್ ಮೀಟಿಂಗ್ ನಡೆಸಿದ್ದಾರೆ. ಇದಕ್ಕೇನು ಕಾರಣ?" ಎಂದು ಪ್ರಧಾನ ನರೇಂದ್ರ ಮೋದಿ ಗುಜರಾತಿನ ಜನರನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ತಮಗೆ 'ನೀಚ' ಎಂದ ಮಣಿಶಂಕರ್ ಅಯ್ಯರ್ ರನ್ನು ಬಹಿರಂಗವಾಗಿ ಟೀಕಿಸಿದ್ದಾರೆ.

<span class=ಗುಜರಾತ್‌ ಮೊದಲ ಹಂತದ ಚುನಾವಣೆ, ಶೇ.68ರಷ್ಟು ಮತದಾನ" title="ಗುಜರಾತ್‌ ಮೊದಲ ಹಂತದ ಚುನಾವಣೆ, ಶೇ.68ರಷ್ಟು ಮತದಾನ" />ಗುಜರಾತ್‌ ಮೊದಲ ಹಂತದ ಚುನಾವಣೆ, ಶೇ.68ರಷ್ಟು ಮತದಾನ

ಗುಜರಾತ್ ನಲ್ಲಿ ಎರಡನೇ ಹಂತದ ಮತದಾನ ನಡೆಯಲಿರುವ ಬನಸ್ಕಾಂತ ಜಿಲ್ಲೆಯ ಪಲನ್ಪುರ್ ನಲ್ಲಿ ಬಹಿರಂಗ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ನನ್ನನ್ನು ಇಲ್ಲವಾಗಿಸುವುದಕ್ಕೆ ಪಾಕ್ ನಲ್ಲಿ ಅಯ್ಯರ್ ಸುಪಾರಿ: ಮೋದಿನನ್ನನ್ನು ಇಲ್ಲವಾಗಿಸುವುದಕ್ಕೆ ಪಾಕ್ ನಲ್ಲಿ ಅಯ್ಯರ್ ಸುಪಾರಿ: ಮೋದಿ

Mani Shankar Aiyar held secret meetings with Pakistan High Commissioner: Narendra Modi

ಪಾಕಿಸ್ತಾನದ ಮಿಲಿಟರಿ ಇಂಟಲಿಜೆನ್ಸ್ ನಲ್ಲಿ ಉನ್ನತ ಸ್ಥಾನದಲ್ಲಿದ್ದವರು ಅಹ್ಮದ್ ಪಟೇಲ್ ರನ್ನು ಮುಖ್ಯಮಂತ್ರಿ ಮಾಡಲು ಸಹಾಯ ಮಾಡುವುದಾಗಿ ಪತ್ರ ಬರೆಯುತ್ತಾರೆ. ಇವರೆಲ್ಲಾ ಯಾಕೆ ಹೀಗೆ ಪತ್ರ ಬರೆಯುತ್ತಾರೆ? ಎಂದು ಮೋದಿ ಪ್ರಶ್ನಿಸಿದ್ದಾರೆ.

<span class=ಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತು" title="ಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತು" />ಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತು

ಕೃಷಿ ಕ್ಷೇತ್ರದಲ್ಲಿ ಬನಸ್ಕಾಂತ ಜಿಲ್ಲೆ ಮಾಡಿರುವ ಪವಾಡವನ್ನು ಇಡೀ ದೇಶದ ಜನರು ನೋಡಿದ್ದಾರೆ. ಅದರಲ್ಲೂ ಆಲೂಗಡ್ಡೆ ಇಳುವರಿಯಲ್ಲಿ ಬನಸ್ಕಾಂತ ರೈತರು ಪವಾಡವನ್ನೇ ಮಾಡಿದ್ದಾರೆ ಎಂದು ಮೋದಿ ಹೊಗಳಿದ್ದಾರೆ.

<span class=ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್" title="ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್" />ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್

ಗುಜರಾತಿನಲ್ಲಿ ಮೊದಲ ಹಂತದ ಮತದಾನ ಶನಿವಾರ ನಡೆದಿದ್ದು ಡಿಸೆಂಬರ್ 14ರಂದು ಗುರುವಾರ ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಫಲಿತಾಂಶ ಪ್ರಕಟವಾಗಲಿದೆ.

English summary
Gujarat Assembly Elections 2017: "The same Mani Shankar Aiyar, who insulted Gujarat, held secret meetings with Pakistan High Commissioner," alleges prime minister Narendra Modi in a raly held at Banaskantha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X