ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನು ಇಲ್ಲವಾಗಿಸುವುದಕ್ಕೆ ಪಾಕ್ ನಲ್ಲಿ ಅಯ್ಯರ್ ಸುಪಾರಿ: ಮೋದಿ

|
Google Oneindia Kannada News

"ನನ್ನನ್ನು ತಮ್ಮ ಹಾದಿಯಿಂದ ಇಲ್ಲವಾಗಿಸುವುದಕ್ಕೆ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪಾಕಿಸ್ತಾನದಲ್ಲಿ ಸುಪಾರಿ ಕೊಟ್ಟಿದ್ದರು. ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಶಾಂತಿ ಸ್ಥಾಪನೆಯಾಗಬೇಕು ಅಂದರೆ ಮೋದಿ ಅವರನ್ನು ನಮ್ಮಹಾದಿಯಿಂದ ಪಕ್ಕಕ್ಕೆ ಸರಿಸಬೇಕು ಎಂದು ಹೇಳಿದ್ದರು" ಎಂಬ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್

ನಮ್ಮ ಹಾದಿಯಿಂದ ಪಕ್ಕಕ್ಕೆ ಸರಿಸಬೇಕು ಅನ್ನೋದರ ಅರ್ಥವೇನು ಎಂದು ಮೋದಿ ಪ್ರಶ್ನಿಸಿದ್ದಾರೆ. ಎರಡು ವರ್ಷದ ಹಿಂದೆ ನಡೆದ ಪಾಕ್ ನ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಣಿಶಂಕರ್ ಅಯ್ಯರ್, ಪ್ರಧಾನಿ ಮೋದಿಯನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸದೆ ಹೊರತು ಭಾರತ-ಪಾಕ್ ಮಧ್ಯೆ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದಿದ್ದರು. ಇದರ ಅರ್ಥ ಏನು ಎಂದು ಮೋದಿ ಕೇಳಿದ್ದಾರೆ.

ಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತುಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತು

Mani Shankar Aiyar Gave 'Supari' in Pakistan to Get Me Removed, Alleges PM Modi

ನನ್ನ ಮೇಲೆ ಸುಪಾರಿ ಕೊಡಬೇಕು ಎಂದು ಪಾಕಿಸ್ತಾನಕ್ಕೆ ಹೋಗಿದ್ದಿರಾ? ಅಂಥ ಮಾತನಾಡಿದ ಮಣಿಶಂಕರ್ ವಿರುದ್ಧ ಕಾಂಗ್ರೆಸ್ ಯಾವ ಕ್ರಮವೂ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ, ಸೋನಿಯಾ ಗಾಂಧಿ ಮತ್ತು ಅವರ ಕುಟುಂಬದವರು ನನ್ನನ್ನು ಹಲವು ಸಲ ನಿಂದಿಸಿದ್ದಾರೆ ಎಂದು ಕೂಡ ಮೋದಿ ಆರೋಪಿಸಿದ್ದಾರೆ.

English summary
Prime Minister Narendra Modi on Friday accused suspended Congress leader Mani Shankar Aiyar of giving a 'supari' (contract) to get him "removed" from the way while on a visit to Pakistan three years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X