ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಪೀಡಿತ ಪತ್ನಿ ಚಿಕಿತ್ಸೆಗಾಗಿ 140 ಕಿ.ಮೀ ಸೈಕಲ್‌ನಲ್ಲಿ ಬಂದ ವ್ಯಕ್ತಿ

|
Google Oneindia Kannada News

ಪುದುಚೇರಿ, ಏಪ್ರಿಲ್ 12: ಲಾಕ್‌ಡೌನ್‌ನಿಂದ ದೂರದ ಊರಿನಲ್ಲಿ ಸಿಲುಕಿಕೊಂಡಿದ್ದ ಮಗನನ್ನು ಕರೆದುಕೊಂಡು ಬರಲು 1400 ಕಿ.ಮಿ ಸ್ಕೂಟಿ ಬೈಕಿನಲ್ಲಿ ಪ್ರಯಾಣ ಮಾಡಿದ್ದ ತಾಯಿಯ ಕಥೆ ಇತ್ತೀಚಿಗಷ್ಟೆ ನೋಡಿದ್ವಿ. ಅದರಂತೆ ಮನಮುಟ್ಟುವ ಇನ್ನೊಂದು ಕಥೆ ತಮಿಳುನಾಡಿನಲ್ಲಿ ನಡೆದಿದೆ.

65 ವರ್ಷ ಹಿರಿಯ ವ್ಯಕ್ತಿ ತನ್ನ ಪತ್ನಿಯ ಕೀಮೋಥೆರಪಿ (ಕ್ಯಾನ್ಸರ್ ರೋಗಿ) ಚಿಕಿತ್ಸೆಗಾಗಿ ಸುಮಾರು 140 ಕಿ.ಮೀ ದೂರ ಸೈಕಲ್‌ನಲ್ಲಿ ಬಂದಿರುವುದು ನಿಜಕ್ಕೂ ಹೃದಯಸ್ಪರ್ಶಿ ಘಟನೆ.

ಮಗನಿಗಾಗಿ ಲಾಕ್‌ಡೌನ್‌ ಲೆಕ್ಕಿಸದ ತಾಯಿ ಬೈಕಿನಲ್ಲಿ 1400 ಕಿ.ಮೀ ಪ್ರಯಾಣಮಗನಿಗಾಗಿ ಲಾಕ್‌ಡೌನ್‌ ಲೆಕ್ಕಿಸದ ತಾಯಿ ಬೈಕಿನಲ್ಲಿ 1400 ಕಿ.ಮೀ ಪ್ರಯಾಣ

ಕೊರೊನಾ ವೈರಸ್‌ ಹಿನ್ನೆಲೆ ದೇಶಾದ್ಯಂತ ಲಾಕ್‌ಡೌನ್‌ ಚಾಲ್ತಿಯಲ್ಲಿದೆ. ಸಾರಿಗೆ ಸೌಲಭ್ಯ ಸಂಪೂರ್ಣ ಬಂದ್ ಆಗಿದೆ. ಇದರಿಂದ ದಿನಗೂಲಿ ಕಾರ್ಮಿಕರಿಗೆ ಮತ್ತು ಯಾವಾಗಲೂ ಆಸ್ಪತ್ರೆಗೆ ಹೋಗುವ ಜನರಿಗೆ ಭಾರಿ ಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ 65 ವರ್ಷದ ಅರಿವಳಗನ್ ಕುಂಬಕೋಣಂ ಎಂಬ ಹಳ್ಳಿಯಿಂದ ಪುದುಚೇರಿಯಲ್ಲಿರುವ ಜವಾಹರಲಾಲ್ ಆಸ್ಪತ್ರೆಗೆ ತನ್ನ ಪತ್ನಿಯಲ್ಲಿ ಸೈಕಲ್‌ನಲ್ಲಿ ಕೂರಿಸಿಕೊಂಡು ಬಂದಿದ್ದಾನೆ.

Man Traveled 140Km Bicycle To Treat His Wife

60 ವರ್ಷದ ಪತ್ನಿಯನ್ನು ಹಿಂದೆ ಕೂರಿಸಿಕೊಂಡು ಬೆಳಿಗ್ಗೆ 4.45ಕ್ಕೆ ಹಳ್ಳಿಯಿಂದ ಪ್ರಯಾಣ ಆರಂಭಿಸಿದ ಅರಿವಳಗನ್ 10.15ಕ್ಕೆ ಆಸ್ಪತ್ರೆ ಬಳಿ ಬಂದರಂತೆ. ಮಾರ್ಗಮಧ್ಯೆ ಟಿ ಕುಡಿಯಲು ನಿಲ್ಲಿಸಿದ್ದರಂತೆ. ಆ ಹಳ್ಳಿಯಿಂದ ಆಸ್ಪತ್ರೆಗೆ 140 ಕಿ.ಮೀ ದೂರ ಇದೆ. ಐದೂವರೆ ಗಂಟೆ ಸೈಕಲ್‌ನಲ್ಲಿ ಬಂದಿದ್ದಾನೆ. ಕಾರಿನಲ್ಲಿ ಬಂದಿದ್ದರೂ ಮೂರು ಗಂಟೆ ಸಮಯ ಬೇಕಿತ್ತು.

ಲಾಕ್‌ಡೌನ್‌ ಹಿನ್ನೆಲೆ ಒಪಿಡಿ ಮುಚ್ಚಿದರೂ ಅರಿವಳಗನ್ ಅವರ ಆ ಕಷ್ಟದ ಜರ್ನಿ ಕುರಿತು ಕೇಳಿದ ವೈದ್ಯರು ಅವರ ಪತ್ನಿ ಚಿಕಿತ್ಸೆ ನೀಡಿದ್ದಾರೆ. ಮರುದಿನ ಅವರನ್ನು ಆಂಬುಲೆನ್ಸ್‌ನಲ್ಲಿ ಮನೆಗೆ ವಾಪಸ್ ಕಳುಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಅರಿವಳಗನ್ ''ನನ್ನ ಪತ್ನಿಗೆ ಚಿಕಿತ್ಸೆ ನೀಡಿ, ದುಡ್ಡು ಸಂಗ್ರಹಿಸಿ ನನಗೆ ಕೊಟ್ಟರು. ಅವರೇ ಆಂಬುಲೆನ್ಸ್ ಕಳುಹಿಸಿ ಮನೆಗೆ ಬಿಟ್ಟರು' ಎಂದಿದ್ದಾರೆ.

ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಆರೋಗ್ಯ ಆರೋಗ್ಯ ವಿಮೆ ಮತ್ತು ಕೇಂದ್ರ ಸರ್ಕಾರ ಆರೋಗ್ಯ ವಿಮೆಗ ಅಳಡಿ ಅರಿವಳಗನ್ ಅವರ ಪತ್ನಿಗೆ ಚಿಕಿತ್ಸೆ ನೀಡಲು ತೀರ್ಮಾನಿಸಿದ್ದಾರೆ.

English summary
A 65 year old man traveled on a 140 km bicycle to treat his cancer patient wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X