ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ಪ್ರವಾಹದಿಂದಾಗಿ ಮರವೇರಿ 12 ತಾಸು ಕುಳಿತಿದ್ದ ವ್ಯಕ್ತಿಯ ರಕ್ಷಣೆ

|
Google Oneindia Kannada News

ಬಿಲಾಸ್‌ಪುರ್, ಆಗಸ್ಟ್ 17: ಛತ್ತೀಸ್‌ಗಢದಲ್ಲಿ ಪ್ರವಾಹದಿಂದ ತಪ್ಪಿಸಿಕೊಂಡು ಮರವೇರಿ 12 ತಾಸು ಕುಳಿತಿದ್ದ ವ್ಯಕ್ತಿಯನ್ನು ಭಾರತೀಯ ವಾಯುಪಡೆ ರಕ್ಷಣೆ ಮಾಡಿದೆ.

ಛತ್ತೀಸ್‌ಗಢದಲ್ಲಿ ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗಿತ್ತು, ದಿಕ್ಕು ತೋಚದೆ ವ್ಯಕ್ತಿ ಮರವೇರಿ ಕುಳಿತಿದ್ದರು, ಕೆಳಗಿಳಿದರೆ ಸಾಯುವುದು ಗ್ಯಾರಂಟಿ ಆಗಿತ್ತು, ಹೀಗಾಗಿ ಮರವೇರಿ ಕುಳಿತಿದ್ದರು, ಭಾರತೀಯ ವಾಯುಪಡೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಕರ್ನಾಟಕದ ಕರಾವಳಿ ಭಾಗದಲ್ಲಿ ತಗ್ಗಿದ ವರುಣನ ಆರ್ಭಟಕರ್ನಾಟಕದ ಕರಾವಳಿ ಭಾಗದಲ್ಲಿ ತಗ್ಗಿದ ವರುಣನ ಆರ್ಭಟ

ಖುಟಘಾಟ್ ಜಲಾಶಯದಿಂದ ನೀರು ಹರಿದುಬರುತ್ತಿತ್ತು, ಜೀತೇಂದ್ರ ಕಶ್ಯಪ್ ನೀರಿನಿಂದ ತಪ್ಪಿಕೊಳ್ಳಲು ಮರ ಏರಿದ್ದರು. ಹಾಗೆಯೇ ಮರದ ರೆಂಬೆಯೊಂದನ್ನು ಹಿಡಿದುಕೊಂಡು ಮರ ಹತ್ತಿದ್ದಾರೆ. ಆತ ಹೀಗೆ ಸಿಕ್ಕಿಹಾಕಿಕೊಂಡಿರುವುದು ತಿಳಿದು ರಕ್ಷಣೆಗೆ ತಕ್ಷಣ ತೆರಳಿದ್ದರು.

Man Trapped On Tree For 12 Hours Rescued By IAF

ಆದರೆ ಕೆಳಗೂ ಕೂಡ ವಿಪರೀತ ನೀರಿದ್ದ ಕಾರಣ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಬಳಿಕ ಭಾರತೀಯ ವಾಯುಪಡೆಗೆ ಮಾಹಿತಿ ತಿಳಿಸಿ ಅವರು ಚಾಪರ್ ಮೂಲಕ ಅವರನ್ನು ರಕ್ಷಿಸಿದರು.

ಬೆಳಗ್ಗೆ 5.49ರ ಸುಮಾರಿಗೆ ರಾಯ್‌ಪುರದಲ್ಲಿ ಎಂಐ-17 ಹೆಲಿಕಾಪ್ಟರ್ ಮೂಲಕ ಬಂದಿಳಿದು 6.37ರ ಸುಮಾರಿಗೆ ರಕ್ಷಣಾ ಕಾರ್ಯ ಆರಂಭಿಸಿದ್ದರು 20 ನಿಮಿಷಗಳ ಬಳಿಕ ಅವರನ್ನು ರಕ್ಷಣ ಮಾಡಲಾಯಿತು. ಅವರನ್ನು ರಾಯ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

English summary
A 43-year-old man was rescued by an Indian Air Force (IAF) helicopter on Monday after he was left clinging to a tree for over 12 hours amid overflowing water discharged from a dam in Chhattisgarh’s Bilaspur district, a police official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X